RNI NO. KARKAN/2006/27779|Wednesday, May 13, 2026
You are here: Home » breaking news » ಘಟಪ್ರಭಾ:ವಿ.ಆರ್.ಎಲ್ ಲಾರಿ ಹಾಗೂ ಟಾಟಾ ಏಸ್ ನಡುವೆ ಅಪಘಾತ 7 ಜನರಿಗೆ ನಣ್ಣ ಪುಟ್ಟ ಗಾಯ

ಘಟಪ್ರಭಾ:ವಿ.ಆರ್.ಎಲ್ ಲಾರಿ ಹಾಗೂ ಟಾಟಾ ಏಸ್ ನಡುವೆ ಅಪಘಾತ 7 ಜನರಿಗೆ ನಣ್ಣ ಪುಟ್ಟ ಗಾಯ 

ವಿ.ಆರ್.ಎಲ್ ಲಾರಿ ಹಾಗೂ ಟಾಟಾ ಏಸ್ ನಡುವೆ ಅಪಘಾತ 7 ಜನರಿಗೆ ನಣ್ಣ ಪುಟ್ಟ ಗಾಯ

ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಫೆ 8 :
ವಿ.ಆರ್.ಎಲ್ ಲಾರಿ ಹಾಗೂ ಟಾಟಾ ಏಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಲಾರಿ ರಸ್ತೆ ಪಕ್ಕದ ಗ್ಯಾರೇಜ್‍ಗೆ ನುಗ್ಗಿದ ಘಟನೆ ಶುಕ್ರವಾರದಂದು 11 ಗಂಟೆ ಸುಮಾರಿಗೆ ಇಲ್ಲಿಯ ಹುಕ್ಕೇರಿ ರಸ್ತೆಯಲ್ಲಿರುವ ಹಾಜಿ ಮಲಂಗ್ ಗ್ಯಾರೇಜ್ ಹತ್ತಿರ ನಡೆದಿದೆ.
ಹುಕ್ಕೇರಿ ಕಡೆಯಿಂದ ಬರುತ್ತಿದ್ದ ವಿ.ಆರ್.ಎಲ್ ಸಂಸ್ಥೆಯ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ತರಕಾರಿ ತುಂಬಿಕೊಂಡು ಬರುತ್ತಿದ್ದ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ನಂತರ ಲಾರಿ ರಸ್ತೆಯ ಪಕ್ಕದಲ್ಲಿರುವ ದೇವಿ ಇಂಡ್ಸಟ್ರೀಜ್ ಗ್ಯಾರೇಜ್‍ಗೆ ನುಗ್ಗಿದ ಪರಿಣಾಮ ಕೆಲಹೊತ್ತು ಇಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅಪ್ಘಾತದಲ್ಲಿ ಟಾಟಾ ಏಸ್‍ನಲ್ಲಿದ್ದ 7 ಜನರಿಗೆ ನಣ್ಣ ಪುಟ್ಟ ಗಾಯಗಳಾಗಿದ್ದು, ಎಲ್ಲರನ್ನು ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts: