RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಜೈನ್ ಕಂಪನಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಗೋಕಾಕ:ಜೈನ್ ಕಂಪನಿ ವಿರುದ್ಧ ಸಾರ್ವಜನಿಕರ ಆಕ್ರೋಶ 

ಜೈನ್ ಕಂಪನಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಗೋಕಾಕ ಜ 18 : 24/7 ಕುಡಿಯುವ ನೀರಿನ ಯೋಜನೆಯಿಂದ ನಗರದ ಜನತೆಗೆ ಸರಿಯಾದ ಸಮಯಕ್ಕೆ ಸರಿಯಾಗಿ ನೀರು ಸರಬಾರು ಆಗದೇ, ಪೈಪ್ ಲೈನಗಳಲ್ಲಿ ಗಾಳಿ ತುಂಬಿ ನೀರು ಬಾರದೆ ಮೀಟರಗಳು ತಿರುಗುತ್ತಿರುವದರಿಂದ ಸಾರ್ವಜನಿಕರಿಗೆ ಬೃಹತ್ ಪ್ರಮಾಣದ ಬಿಲ್ಲು ಬರುತ್ತಿರುವದನ್ನು ಖಂಡಿಸಿ ಶುಕ್ರವಾರದಂದು ಸಾರ್ವಜನಿಕರು, ನಗರಸಭೆ ಸದಸ್ಯರು ನಗರಸಭೆಯ ಕಾರ್ಯಾಲಯದ ಮುಂದೆ “ಜೈನ್ ಕಂಪನಿ ಹಠಾವೋ ಗೋಕಾಕ ಭಚಾವೋ” ಎಂದು ಘೋಷಣೆ ಕೂಗುತ್ತ ಟೈಯರಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಮಾಧ್ಯಮದವರೊಂದಿಗೆ ಕರವೇ ಅಧ್ಯಕ್ಷ ಕಿರಣ ಡಮಾಮಗರ ಮಾತನಾಡಿ, ಜೈನ್ ಇರಿಗೇಶನ್ ಕಂಪನಿಯವರು 24 ಗಂಟೆಗಳ ಕಾಲ ನಿರಂತರ ನೀರು ಸರಬರಾಜು ಮಾಡುವದಾಗಿ ಟೆಂಡರ್ ಪಡೆದು ಮಧ್ಯ ರಾತ್ರಿ 1ಗಂಟೆಯ ಸಮಯದಲ್ಲಿ ನೀರು ಬಿಡುತ್ತಿದ್ದು 24/7 ಕುಡಿಯುವ ನೀರು ಯೋಜನೆ ಸಂಪೂರ್ಣ ವಿಫಲವಾಗಿದೆ ಹೀಗಾಗಿ ಜೈನ್ ಇರಿಗೇಶನ್ ಕಂಪನಿಯವರು ಈ ಕಾಮಗಾರಿಯನ್ನು ಕೈ ಬಿಟ್ಟು ನಗರಸಭೆ ಸೂಪರ್ದಿಗೆ ನೀಡಬೇಕೆಂದು ಆಗ್ರಹಿಸಿದರು.
ನಗರಸಭೆ ಪೌರಾಯುಕ್ತ ಎಮ್ ಎಚ್ ಅತ್ತಾರ ಮಾತನಾಡಿ, ಜೈನ್ ಇರಿಗೇಶನ್ ಕಂಪನಿ 24/7 ಕುಡಿಯುವ ನೀರಿನ ಯೋಜನೆಯ ಕಾಮಗಾರಿ ವಿಫಲದ ಕುರಿತು ಬೆಂಗಳೂರಿನ ಕೆಯುಐಡಿಸಿ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಿದ್ದು ಜಿಲ್ಲಾಧಿಕಾರಿಯವರ ನಿರ್ದೇಶನದಂತೆ 24/7 ಕುಡಿಯುವ ನೀರು ಸರಬರಾಜು ಕುರಿತು ಕಳೆದ ದಿ.12 ರಂದು ಸಭೆ ನಡೆಸಿ ಸಾರ್ವಜನಿಕರ ಹಾಗೂ ನಗರಸಭೆ ಸದಸ್ಯರ ಅಹವಾಲುಗಳನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಸಿದ್ಧಪ್ಪ ಹುಚ್ಚರಾಯಪ್ಪಗೋಳ, ವಿಜಯಕುಮಾರ ಜತ್ತಿ, ಪ್ರಕಾಶ ಮುರಾರಿ, ಗಿರೀಶ ಖೋತ, ಜಯಾನಂದ ಹುಣಶ್ಯಾಳ, ಹರೀಶ ಬೂದಿಹಾಳ, ಬಸವರಾಜ ಆರೆನ್ನವರ, ಮುಖಂಡರಾದ ದುರ್ಗಪ್ಪ ಶಾಸ್ತ್ರಿಗೊಲ್ಲರ, ಬಸವರಾಜ ಸಾಯನ್ನವರ, ಮಲ್ಲಿಕಾರ್ಜುನ ಹೊಸಪೇಟ, ಬಸವರಾಜ ದೇಶನೂರ, ಅಬ್ದುಲವಹಾಬ ಜಮಾದಾರ, ಖತೀಬ, ಅಬ್ದುಲಸತ್ತಾರ ಶಭಾಶಖಾನ ಸೇರಿದಂತೆ ಅನೇಕರು ಇದ್ದರು.
ಬಾಕ್ಸ: ಸಾರ್ವಜನಿಕರು, ನಗರಸಭೆ ಸದಸ್ಯರು ನಗರಸಭೆಯ ಕಾರ್ಯಾಲಯದ ಮುಂದೆ 24/7 ಕುಡಿಯುವ ನೀರು ಸರಬರಾಜು ಅಧಿಕಾರಿಗಳ ವಿರುದ್ಧ “ಜೈನ್ ಕಂಪನಿ ಹಠಾವೋ ಗೋಕಾಕ ಭಚಾವೋ” ಎಂದು ಘೋಷಣೆ ಕೂಗುತ್ತ ಟೈಯರಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು ಸುಮಾರು 1ಗಂಟೆಗಳ ಕಾಲ ಮಾರ್ಕೆಟ್ ರಸ್ತೆಯಲ್ಲಿ ಟ್ರಾಫೀಕ್ ಜಾಮ್ ನಿರ್ಮಾಣವಾಯಿತು.

Related posts: