RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:17ನೇ ಸತೀಶ ಶುಗರ್ಸ್ ಅವಾಡ್ರ್ಸ ಕಾರ್ಯಕ್ರಮಕ್ಕೆ ಇಂದು ವರ್ಣರಂಜಿತ ತೆರೆ : ವಿದ್ಯಾರ್ಥಿಗಳಲ್ಲಿಯ ಪ್ರತಿಭೆ ಕಂಡು ಬೆರಗಾಯ್ತು ಗೋಕಾವಿ!

ಗೋಕಾಕ:17ನೇ ಸತೀಶ ಶುಗರ್ಸ್ ಅವಾಡ್ರ್ಸ ಕಾರ್ಯಕ್ರಮಕ್ಕೆ ಇಂದು ವರ್ಣರಂಜಿತ ತೆರೆ : ವಿದ್ಯಾರ್ಥಿಗಳಲ್ಲಿಯ ಪ್ರತಿಭೆ ಕಂಡು ಬೆರಗಾಯ್ತು ಗೋಕಾವಿ! 

17ನೇ ಸತೀಶ ಶುಗರ್ಸ್ ಅವಾಡ್ರ್ಸ ಕಾರ್ಯಕ್ರಮಕ್ಕೆ ಇಂದು ವರ್ಣರಂಜಿತ ತೆರೆ : ವಿದ್ಯಾರ್ಥಿಗಳಲ್ಲಿಯ ಪ್ರತಿಭೆ ಕಂಡು ಬೆರಗಾಯ್ತು ಗೋಕಾವಿ!

ವಿಶೇಷ ವರದಿ :ಸಾಧಿಕ ಹಲ್ಯಾಳ

ಗೋಕಾಕ ಜ 21 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ಮೈಸೂರು ಅರಮನೆ ಮಾದರಿಯ ಭವ್ಯ ವೇದಿಕೆಯಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿರುವ 17ನೇ ಸತೀಶ ಶುಗರ್ಸ್ ಅವಾಡ್ರ್ಸ ಸಾಂಸ್ಕøತಿಕ ಹಬ್ಬಕ್ಕೆ ಇಂದು ವೈಭವದ ತೆರೆ ಕಾಣಲಿದೆ. ಗೋಕಾಕಿನ ಹೆಮ್ಮೆಯ ಉತ್ಸವವಾಗಿ ಹೊರಹೊಮ್ಮಿರುವ ಸತೀಶ ಶುಗರ್ಸ್ ಅವಾಡ್ರ್ಸ ಸಾಂಸ್ಕøತಿಕ ಉತ್ಸವ ವಿದ್ಯಾರ್ಥಿಗಳ ಪ್ರತಿಭೆಗಳನ್ನು ನೋಡಿ ನೆರೆದ ಜನರಲ್ಲಿ ವಿಸ್ಮಯ ಕುತೂಹಲ ಅವರನ್ನೆಲ್ಲ ಸಂಗೀತ, ನೃತ್ಯಗಳನ್ನೊಳಗೊಂಡ ಸಾಂಸ್ಕøತಿಕ ಲೋಕಕ್ಕೆ ಕರೆದೊಯ್ದಿತು.
ಮೊದಲನೆಯ ದಿನ ಕಳೆದ ಸಾಲಿನ ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಕು. ಸಾವಿತ್ರಿ ಕರಗುಪ್ಪಿ ಮತ್ತು ಕು. ತಾಹ ನರಗುಂದ ಬಾಬಾ ಅವರ ಅಮೃತಹಸ್ತದಿಂದ ದೀಪ ಪ್ರಜ್ವಲನೆಯಿಂದ ಉದ್ಘಾಟನೆಗೊಂಡ ಈ ಐತಿಹಾಸಿಕ, ಸಾಂಸ್ಕøತಿಕ ಹಬ್ಬ ಗೋಕಾವಿ ನಾಡಿನ ಮಕ್ಕಳಲ್ಲಿ ಹುದುಗಿದ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಭಾಷಣ ಸೇರಿದಂತೆ ವೈವಿಧ್ಯಮಯ ಸಾಂಸ್ಕøತಿಕ ಕದನಕ್ಕೆ ಸಾಕ್ಷಿಯಾಯಿತು. ನಿತ್ಯ ಶಾಂತವಾಗಿ ಇರುತ್ತಿದ್ದ ಗೋಕಾಕ ನಗರ ವಿದ್ಯಾರ್ಥಿಗಳ ಸಾಂಸ್ಕøತಿಕ ಕಲರವಕ್ಕೆ ಬೆರಗಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದು ಸತೀಶ ಶುಗರ್ಸ್ ಅವಾಡ್ರ್ಸ ಅಂತಿಮ ಹಂತದ ಸಾಂಸ್ಕøತಿಕ ಮಹಾಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದ ಪ್ರಶಸ್ತಿ ಮತ್ತು ಬೃಹತ್ ಮೊತ್ತದ ನಗದು ಬಹುಮಾನಗಳನ್ನು ಪಡೆದ ವಿದ್ಯಾರ್ಥಿಗಳಲ್ಲಿ ಈ ಭಾರಿ ಹೆಚ್ಚಾಗಿ ಗ್ರಾಮೀಣ ಭಾಗಗಳ ವಿದ್ಯಾರ್ಥಿ/ ವಿದ್ಯಾರ್ಥಿನಿಯರೇ ಮಿಂಚಿದ್ದು ವಿಶೇಷವಾಗಿತ್ತು.
ಮೈಸೂರು ಅರಮನೆಯ ಮಾದರಿಯಲ್ಲಿ ನಿರ್ಮಾಣಗೊಂಡ ಭವ್ಯ ವೇದಿಕೆಯಲ್ಲಿ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಿದ ನೂರಾರು ವಿದ್ಯಾರ್ಥಿಗಳ ನೃತ್ಯ, ಗಾಯನ, ಭಾಷಣ, ಸೋಲೋ ಡ್ಯಾನ್ಸಗಳನ್ನು ನೋಡಿದ ಪ್ರೇಕ್ಷಕರಿಗೆ ಈ ಸಾರಿಯೂ ಸತೀಶ ಶುಗರ್ಸ್ ಅವಾಡ್ರ್ಸ ಸ್ಪರ್ಧೆ ರೋಮಾಂಚನ ತರಿಸಿತು. ಸಂಜೆ 5 ರಿಂದ ರಾತ್ರಿ 10 ರವರೆಗೆ ನಡೆದ ಸಮೂಹ ನೃತ್ಯ, ಜಾನಪದ ನೃತ್ಯ, ಸೋಲೋ ಡ್ಯಾನ್ಸ್, ಭಾವಗೀತೆ, ಜಾನಪದ ಗಾಯನ ಸ್ಪರ್ಧೆಗಳನ್ನು ನೋಡಲು ಪ್ರತಿದಿನ ಸಾವಿರಾರು ಜನ ಕಿಕ್ಕಿರಿದು ತುಂಬಿದ್ದರು.

ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹಾಕಿದ ಭವ್ಯ ರಂಗ ಸಜ್ಜಿಕೆಯಲ್ಲಿ 17ನೇ ಸತೀಶ ಶುಗರ್ಸ್ ಅವಾಡ್ರ್ಸ್‍ನ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಗೋಕಾಕನ ಮಯೂರ ಶಾಲೆ ತಂಡ.

ಕಾರ್ಯಕ್ರಮದ ಮಧ್ಯೆ ಮಧ್ಯೆ ಕಲಾವಿದರಾದ ಪ್ರವೀಣಕುಮಾರ ಗಸ್ತಿ, ಶಿವಾನಂದ ಪೂಜೇರಿ, ನರಸಿಂಹ ಜೋಶಿ, ಯಲ್ಲೇಶಕುಮಾರ ಮೆಳವಂಕಿ, ಶ್ರುತಿ ಜಾಧವ, ದೇವುಕುಮಾರ ಅವರ ಜುಗಲಬಂದಿಗಳು ಭರ್ಜರಿಯಾಗಿ ಪ್ರೇಕ್ಷಕರನ್ನು ಆಕರ್ಷಿಸಿದವು. ಮಾಡರ್ನ ಮೆಲೋಡಿ ಆರ್ಕೇಸ್ಟ್ರಾ ತಂಡದ ಸಂಗೀತ ಸತೀಶ ಶುಗರ್ಸ್ ಅವಾಡ್ರ್ಸ ಕಾರ್ಯಕ್ರಮಕ್ಕೆ ರಂಗು ತಂದಿತು. ಕಳೆದ 17 ವರ್ಷಗಳಿಂದ ನಡೆಯುತ್ತಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಶಿಸ್ತು ಮತ್ತು ಸ್ವಚ್ಛತೆ ಜನರ ಗಮನ ಸೆಳೆಯಿತು.

ಸ್ಥಳೀಯ ಐಶ್ವರ್ಯ ಕ್ರಿಯೇಷನ್ಸ್ ಮಾಲೀಕರಾದ ಮಲ್ಲಿಕಾರ್ಜುನ ಕೆ.ಆರ್ ಮತ್ತು ತಂಡದವರು ಈ ನಾಲ್ಕು ದಿನದ ಕಾರ್ಯಕ್ರಮವನ್ನು ಜಗತ್ತಿನಾದ್ಯಂತ ನೇರ ಪ್ರಸಾರ ಮಾಡಿ ಲಕ್ಷಾಂತರ ಪ್ರೇಕ್ಷಕರ ಚಿತ್ತ ಗೋಕಾಕನತ್ತ ಮಾಡಿ ಜನ ಮನ ಸೆಳೆದರು.
ಪ್ರತಿಭೆಗಳ ಅನ್ವೇಷಣೆಗೆ ಹುಟ್ಟಿಕೊಂಡಿರುವ ಸತೀಶ ಶುಗರ್ಸ್ ಅವಾಡ್ರ್ಸ ಸಾಂಸ್ಕøತಿಕ ಹಬ್ಬ ಈ ಬಾರಿ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿ ಜನರ ಮನ ಮನಗಳಲ್ಲಿ ಅಚ್ಚಳಿಯದೇ ಉಳಿದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಇಂತಹ ಭವ್ಯ ವೇದಿಕೆಯನ್ನು ನಿರ್ಮಿಸಿ ಬೃಹತ್ ಮೊತ್ತ ನಗದು, ಪುರಸ್ಕಾರಗಳನ್ನು ನೀಡಿ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಿರುವ ಸಾಂಸ್ಕಂತಿಕ ರಾಯಭಾರಿ ಸತೀಶ ಜಾರಕಿಹೊಳಿ ಅವರ ಈ ಮಹತ್ತರ ಕಾರ್ಯ ದೇಶಕ್ಕೆ ಮಾದರಿ!

Related posts: