ಗೋಕಾಕ:ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ ಕಳುಹಿಸಿ ಶಾಂತಿ ಕೆಡಿಸವವರ ಮೇಲೆ ಕಠಿಣ ಕ್ರಮ : ಸಿಪಿಐ ಸತಾರೆ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ ಕಳುಹಿಸಿ ಶಾಂತಿ ಕೆಡಿಸವವರ ಮೇಲೆ ಕಠಿಣ ಕ್ರಮ : ಸಿಪಿಐ ಸತಾರೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 8 :
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ ಕಳುಹಿಸಿ ಶಾಂತಿ ಕೆಡಿಸವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೋಕಾಕ ಸಿ.ಪಿ.ಐ ಶ್ರೀಧರ ಸತಾರೆ ಹೇಳಿದರು
ಶುಕ್ರವಾರದಂದು ನಗರದ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಈದ್ ಮಿಲಾದ, ಟಿಪ್ಪು ಜಯಂತಿ ಮತ್ತು ಅಯೋಧ್ಯ ತೀರ್ಪು ಪ್ರಯುಕ್ತ ಏರ್ಪಡಿಸಿದ್ದ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶವನ್ನು ಹಾಕಬಾರದು. ಅಂತಹ ಸಂದೇಶವನ್ನು ಯಾರಾದರೂ ಹಾಕಿದರೆ ತಕ್ಷಣ ಇಲಾಖೆಯ ಗಮನಕ್ಕೆ ತರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲು ಅವಕಾಶ ವಿರುವದಿಲ್ಲ ಸರ್ಕಾರ ಈ ಬಗ್ಗೆ ನಿರ್ಬಂಧ ಮಾಡಿದೆ. ಅಯ್ಯೋಧ ತೀರ್ಪು ಯಾರ ಪರವಾಗಿ ಬಂದರು ಎಲ್ಲರೂ ಸ್ವಾಗತಿಸಿ, ಯಾರು ವಿಜೃಂಭಣೆ ಮಾಡಬಾರದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಗೋಕಾಕ ಶಹರ ಠಾಣೆಯಲ್ಲಿ ಎಸ್.ಐ ಗುರುನಾಥ ಚವ್ಹಾಣ , ಗ್ರಾಮೀಣ ಠಾಣೆಯ ಎಸ್.ಐ ನಾಗರಾಜ ಕಿಲಾರಿ , ಹಿರಿಯರಾದ ಎಸ್.ಎ.ಕೊತವಾಲ , ಪರಶುರಾಮ ಭಗತ್, ಎಸ್.ವ್ಹಿ ದೇಮಶೆಟ್ಟಿ, ಅಬ್ಬಾಸ ದೇಸಾಯಿ , ಕಿರಣ ಢಮಾಮಗರ, ವಿಕಾಸ ನಾಯಿಕ , ಸಂತೋಷ ಖಂಡ್ರಿ ಸೇರಿದಂತೆ ಇತರರು ಇದ್ದರು