RNI NO. KARKAN/2006/27779|Wednesday, April 29, 2026
You are here: Home » breaking news » ಗೋಕಾಕ:ಕನ್ನಡ ಸಾಹಿತ್ಯವನ್ನು ಬೆಳಗಿದಂತಹ ನಾಡು ಗೋಕಾಕ : ನಾಡೋಜ ಡಾ.ಮಹೇಶ ಜೋಶಿ

ಗೋಕಾಕ:ಕನ್ನಡ ಸಾಹಿತ್ಯವನ್ನು ಬೆಳಗಿದಂತಹ ನಾಡು ಗೋಕಾಕ : ನಾಡೋಜ ಡಾ.ಮಹೇಶ ಜೋಶಿ 

ಕನ್ನಡ ಸಾಹಿತ್ಯವನ್ನು ಬೆಳಗಿದಂತಹ ನಾಡು ಗೋಕಾಕ : ನಾಡೋಜ ಡಾ.ಮಹೇಶ ಜೋಶಿ

ಗೋಕಾಕ ಜ 1 : ಕನ್ನಡ ಸಾಹಿತ್ಯವನ್ನು ಬೆಳಗಿದಂತಹ ನಾಡು ಗೋಕಾಕ ಎಂದು ನಾಡೋಜ ಡಾ.ಮಹೇಶ ಜೋಶಿ ಹೇಳಿದರು

ಮಂಗಳವಾರದಂದು ಸಾಯಂಕಾಲ ನಗರದ ಮುಪ್ಪಯ್ಯ ಮಠರಮದಲ್ಲಿ ಜರಗಿದ ಕಪಲಟ್ಟಿ – ಕಳ್ಳಿಗುದ್ದಿ ಶ್ರೀಮಠದ ಮಹಾದೇವ ಗುರುಗಳ 82 ನೇ ಜಯಂತಿ ಉತ್ಸವ ಹಾಗೂ ಸಾಂಸ್ಕೃತಿಕ ಕಲಾ ಸಂಸ್ಥೆ ನಡೆಸುವ ಕನ್ನಡ ಉತ್ಸವ ಕಾರ್ಯಕ್ರಮದಲ್ಲಿ ಕನ್ನಡ ಜ್ಯೋತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು

ಕನ್ನಡ ಚಳುವಳಿಯನ್ನು ಗಟಿ ಗೋಳಿಸಿದ ನಾಡು ಗೋಕಾಕ ಇಂತಹ ತಪೋ ಭೂಮಿಯಲ್ಲಿ ಹುಟ್ಟಿ ಬೆಳೆದು ಕರ್ನಾಟಕವನ್ನು ವಿಶ್ವದಾದ್ಯಂತ ಪ್ರಚುರ ಪಡೆಸಿದ ಮಹಾನ ಚೇತನರ ನಾಡಿನಲ್ಲಿ ನನಗೆ ಕನ್ನಡ ಜ್ಯೋತಿ ಪ್ರಶಸ್ತಿ ದೊರೆತ್ತಿರುವದು ನನ್ನ ಸೌಭಾಗ್ಯ ಬರುವ ಕಸಾಪ ಚುನಾವಣೆಯಲ್ಲಿ ಸ್ವರ್ಧಿಸಿ ಈ ಕನ್ನಡ ಜ್ಯೋತಿಯನ್ನು ರಾಜ್ಯಾದ್ಯಂತ ತೆಗೆದುಕೊಂಡು ಹೋಗಿ ಕನ್ನಡವನ್ನು ಗಟ್ಟಿಗೋಳಿಸುವ ಮಹತ್ತರ ಕೆಲಸಕ್ಕೆ ಆನಿಯಾಗುವ ಇರಾದೆ ಇದೆ ಎಂದು ನಾಡೋಜ ಡಾ. ನಾಡೋಜ ಮಹೇಶ ಜೋಶಿ ಹೇಳಿದರು.

ಇದೇ ಸಂದರ್ಭದಲ್ಲಿ ಘಟಪ್ರಭಾ ಗುಬ್ಬುಲಗುಡ್ಡ ಕೆಂಪಯ್ಯಸ್ವಾಮಿ ಮಠದ ಪೀಠಾಧಿಪತಿಗಳಾದ ಮಲ್ಲಿಕಾರ್ಜುನ ಸ್ವಾಮೀಜಿ ಅವರಿಗೆ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು .
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗೋಕಾಕದ ಶೂನ್ಯ ಸಂಪಾದನ ಮಠದ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು, ಗೋಕಾಕದ ಮುಪ್ಪಯ್ಯನ ಮಠದ ರಾಚೋಟೇಶ್ವರ ಶೀವಾಚಾರ್ಯರು , ಮಣ್ಣೀಕೇರಿಯ ವಿಜಯಸಿದ್ದೇಶ್ವರ ಸ್ವಾಮೀಜಿ ,ಕಪ್ಪರಟ್ಟಿ – ಕಳ್ಳಿಗುದ್ದಿಯ ಬಸವರಾಜ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು .

ಈ ಸಂದರ್ಭದಲ್ಲಿ ರಾಜೇಂದ್ರ ಸಣ್ಣಕ್ಕಿ , ಅಶೋಕ ಪೂಜಾರಿ , ಮಹಾಂತೇಶ ತಾವಂಶಿ , ಬಸವರಾಜ ಖಾನಪ್ಪನವರ ,ಮಲ್ಲಿಕಾರ್ಜುನ ಈಟಿ , ಆನಂದ ಗೋಟ್ಟಡಕಿ , ಶಾಮಾನಂದ ಪೂಜಾರಿ ಸೇರಿದಂತೆ ಅನೇಕರು ಇದ್ದರು

ಕಾರ್ಯಕ್ರಮವನ್ನು ಜಯಾನಂದ ಮಾದರ , ಎಸ.ಕೆ.ಮಠದ ನಿರೂಪಿಸಿ ವಂದಿಸಿದರು

Related posts: