RNI NO. KARKAN/2006/27779|Monday, February 16, 2026
You are here: Home » breaking news » ಘಟಪ್ರಭಾ:ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು : ಅನ್ನದಾನೇಶ್ವರ ದೇವರು

ಘಟಪ್ರಭಾ:ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು : ಅನ್ನದಾನೇಶ್ವರ ದೇವರು 

ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು : ಅನ್ನದಾನೇಶ್ವರ ದೇವರು

ಘಟಪ್ರಭಾ ಡಿ 28 : ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡಿಸಕೊಂಡು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕೆಂದು ಇಲ್ಲಿನ ಗುಬ್ಬಲಗುಡ್ಡ ಮಠದ ಅನ್ನದಾನೇಶ್ವರ ದೇವರು ಹೇಳಿದರು.
ಅವರು ಶುಕ್ರವಾರ ಸ್ಥಳೀಯ ಡಾ.ಜಾಕೀರ ಹುಸೇನ ಶಿಕ್ಷಣ ಸಂಸ್ಥೆಯ ಮದನಿ ಮಿಯಾ ಉರ್ದು ಅನುದಾನಿತ ಪ್ರೌಡ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಕೊಡಮಾಡುವ ಉಚಿತ ಸೈಕಲ್ ವಿತರಣಾ ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತ, ಸರ್ಕಾರ ಕೊಡಮಾಡಿದ ಉಚಿತ ಸೈಕಲಗಳ ಸದುಪಯೋಗವಾಗಬೇಕು. ವಿದ್ಯಾರ್ಥಿ ಜೀವನವು ಅತ್ಯ ಅಮೂಲ್ಯವಾದದ್ದು ಈ ಸಮಯದಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಪಡೆದು ಕಲಿಸಿದ ಗುರುಗಳಿಗೂ ಹಾಗೂ ಕಲಿತ ಶಾಲೆಗೂ ಕೀರ್ತಿ ತರಬೇಕೆಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸುಲ್ತಾನಸಾಬ ಕಬ್ಬೂರ, ಹಿರಿಯರಾದ ಹಾಜಿ ಅಹ್ಮದಹುಸೇನ ಬಾಗವಾನ, ಬಾದಶಾ ಸಯ್ಯದ, ಜಿ.ಎಸ್.ರಜಪೂತ, ಕೆ.ಎಂ.ಬಾಗವಾನ, ಪ.ಪಂ ಸದಸ್ಯರಾದ ಸಲೀಮ ಕಬ್ಬೂರ, ಮಲ್ಲು ಕೋಳಿ, ಅಪ್ಪಾಸಾಬ ಮುಲ್ಲಾ, ರಮೇಶ ಗಂಡವ್ವಗೋಳ, ನಿರ್ದೇಶಕರಾದ ಅಬ್ಬಾಸ ಬಾಡಕರ, ಮೀರಾಸಾಬ ತಾಂಬೋಳಿ, ಶೌಕತ ಕಬ್ಬೂರ, ಮೌಲಾನಾ ಅಬ್ದುಲಗಫೂರ ಸಯೀಮಿ, ಸಿ.ಆರ್.ಪಿ ಕೆ.ಟಿ.ಪಾಟೀಲ, ಶಿಕ್ಷರಾದ ಎ.ಆಯ್. ತೋಪಿಚಾಂದ, ಡಿ.ಕೆ.ಜಮಾದಾರ, ಸೇರಿದಂತೆ ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾದ್ಯಾಯರಾದ ಎನ್.ಎನ್.ಬಾಗೆ ನಿರೂಪಿಸಿ, ವಂದಿಸಿದರು.

Related posts: