ಘಟಪ್ರಭಾ:ಮದುಕರ ದೇಶಪಾಂಡೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಉಚಿತ ಸೈಕಲ್ ವಿತರಣೆ
ಮದುಕರ ದೇಶಪಾಂಡೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಉಚಿತ ಸೈಕಲ್ ವಿತರಣೆ
ಘಟಪ್ರಭಾ ಡಿ 22: ಮದುಕರ ದೇಶಪಾಂಡೆ (ಇನಾಮದಾರ) ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಕೊಡಮಾಡಿದ ಉಚಿತ ಸೈಕಲ್‍ಗಳ ವಿತರಣಾ ಕಾರ್ಯಕ್ರಮ ಶನಿವಾರದಂದು ಜರುಗಿತು.
ಪ್ರಸಕ್ತ ಸಾಲಿನಲ್ಲಿ 152 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಎಲ್ಲ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ 152 ಸೈಕಲ್‍ಗಳನ್ನು ಕೊಡಮಾಡಿದ್ದು ಎಲ್ಲ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ ಚೇರಮನ್‍ರಾದ ಮಲ್ಲು ಕೋಳಿ, ಪ.ಪಂ. ಸದಸ್ಯರಾದ ಸಲೀಮ ಕಬ್ಬೂರ, ಮಾರುತಿ ಹುಕ್ಕೇರಿ, ಇಮ್ರಾನ ಬಟಕುರ್ಕಿ, ಪ್ರವೀಣ ಮಟಗಾರ, ಈರಣ್ಣಾ ಕಲಕುಟಗಿ, ಗ್ರಾಮದ ಹಿರಿಯರಾದ ಬಸವರಾಜ ಹುದ್ದಾರ, ಸುರೇಶ ಪೂಜಾರಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ವಿರಭದ್ರ ಗಂಡವ್ವಗೋಳ, ಜಿಎಸ್.ರಜಪೂತ, ಅಲ್ತಾಪ ಉಸ್ತಾದ, ಅಪ್ಪಾಸಾಬ ಮುಲ್ಲಾ, ನಾಗರಾಜ ಜಂಬ್ರಿ, ಕೆಂಪ್ಪಣಾ ಚೌಕಶಿ, ಪರಶರಾಮ ಗೋಕಾಕ, ಲಕ್ಷ್ಮಣ ಮೇತ್ರಿ, ಪ್ರತಾಪ ಬೇವಿನಗಡದ. ಮುಖ್ಯೋಪಾದ್ಯಯಕರಾದ ಬಿ.ಬಿ ನಾಯಿಕ, ಶಿಕ್ಷಕರಾದ ಬಿ.ಕೆ ಶಿರಗಾಂವಿ ಸೇರಿದಂತೆ ಅನೇಕರು ಇದ್ದರು.
