RNI NO. KARKAN/2006/27779|Thursday, November 19, 2026
You are here: Home » breaking news » ಗೋಕಾಕ:ಗೋಕಾಕಿನಲ್ಲಿ ‘ಸಿನರ್ಜಿ ವಸತಿ ಪಿಯು ಕಾಲೇಜು’ ನಾಮಫಲಕ ಅನಾವರಣ

ಗೋಕಾಕ:ಗೋಕಾಕಿನಲ್ಲಿ ‘ಸಿನರ್ಜಿ ವಸತಿ ಪಿಯು ಕಾಲೇಜು’ ನಾಮಫಲಕ ಅನಾವರಣ 

ಗೋಕಾಕಿನಲ್ಲಿ ‘ಸಿನರ್ಜಿ ವಸತಿ ಪಿಯು ಕಾಲೇಜು’ ನಾಮಫಲಕ ಅನಾವರಣ

ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಹೊಸ ಹೆಜ್ಜೆ

ಗೋಕಾಕ, ನ. 19: ಇಲ್ಲಿನ ಶ್ರೀ ಅಲ್ಲಮಪ್ರಭು ಫೌಂಡೇಶನ್ ಆಶ್ರಯದಲ್ಲಿ ಬರುವ ಶೈಕ್ಷಣಿಕ ವರ್ಷದಿಂದ ಆರಂಭವಾಗುತ್ತಿರುವ ನೂತನ ‘ಸಿನರ್ಜಿ ವಸತಿ ಪದವಿ ಪೂರ್ವ ಕಾಲೇಜು’ (Synergy Residential PU College) ನಾಮಫಲಕ ಅನಾವರಣ ಸಮಾರಂಭವು ಬುಧವಾರ ನಗರದ ಗೋಕಾಕ ಫಾಲ್ಸ್ ರಸ್ತೆಯಲ್ಲಿನ ಕಾಲೇಜಿನ ಆವರಣದಲ್ಲಿ ಜರುಗಿತು.

ನೂತನ ಕಾಲೇಜಿನಲ್ಲಿ ಬರುವ ಶೈಕ್ಷಣಿಕ ವರ್ಷದಿಂದ ವಿಜ್ಞಾನ (Science) ಮತ್ತು ವಾಣಿಜ್ಯ (Commerce) ವಿಭಾಗಗಳನ್ನು ಆರಂಭಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಅತ್ಯುತ್ತಮ ವಸತಿ ಸೌಲಭ್ಯದೊಂದಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಮುರುಗರಾಜೇಂದ್ರ ಸ್ವಾಮೀಜಿ ಹಾಗೂ ಪೂಜ್ಯ ಶ್ರೀ ಮಲ್ಲಯ್ಯ ಸ್ವಾಮೀಜಿ ಅವರು ನೂತನ ಕಾಲೇಜಿನ ನಾಮಫಲಕವನ್ನು ಅನಾವರಣಗೊಳಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಫೌಂಡೇಶನ್ ಅಧ್ಯಕ್ಷ ಡಾ. ಮಹಾಂತೇಶ ಕಡಾಡಿ, ಗಜಾನನ ಮನ್ನಿಕೇರಿ, ಫೌಂಡೇಶನ್ ಕಾರ್ಯದರ್ಶಿ ಡಾ. ಮಯೂರಿ ಕಡಾಡಿ, ಪ್ರೊ. ರವೀಂದ್ರನಾಥ ಬರಬರಿ, ಪ್ರೊ. ಸಿ.ವಿ. ಕೌಜಲಗಿ ಹಾಗೂ ಶ್ರೀ ಬಲವಂತ ಸ್ವಾಮಿ ಉಪಸ್ಥಿತರಿದ್ದರು.

Related posts: