RNI NO. KARKAN/2006/27779|Wednesday, June 24, 2026
You are here: Home » breaking news » ಗೋಕಾಕ: ಸಂಭ್ರಮದ ಈದ್ ಉಲ್ ಫಿತರ್ (ರಂಜಾನ್) ಆಚರಣೆ : ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು

ಗೋಕಾಕ: ಸಂಭ್ರಮದ ಈದ್ ಉಲ್ ಫಿತರ್ (ರಂಜಾನ್) ಆಚರಣೆ : ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು 

ಗೋಕಾಕಿನಲ್ಲಿ ಸಂಭ್ರಮದ ಈದ್ ಉಲ್ ಫಿತರ್ (ರಂಜಾನ್) ಆಚರಣೆ : ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು

ಗೋಕಾಕ ಜೂ 26: ಗೋಕಾಕ ,ಬೆಳಗಾವಿ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರದಂದು ಮುಸ್ಲಿಂ ಭಾಂಧವರು ಸೇರಿ ಈದ್ ಉಲ್ ಫಿತರ್ ಆಚರಿಸಿದರು

ನಗರದ ಈದ್ಗಾ ಮೈದಾನ ಸೇರಿದಂತೆ ವಿವಿಧ ಮಸೀದಿಗಳಲ್ಲಿ ಇಂದು ಬೆಳಗ್ಗೆಯೇ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ನೆರವೇರಿತು

ಹೊಸ ಬಟ್ಟೆ ತೊಟ್ಟುಕೊಂಡ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಸಂಭ್ರಮವನ್ನು ಶುಭಾಶಯಗಳ ಮೂಲಕ ಹಂಚಿ ಸಂಭ್ರಮಿಸಿದರು 

ಧಾನ , ಧರ್ಮದ ಸಂಕೇತವಾಗಿರುವ ಪವಿತ್ರ ರಂಜಾನ್ ಉಪವಾಸಕ್ಕೆ ಇಂದು ವಿಶೇಷ ಪ್ರಾರ್ಥನೆ ಸಲ್ಲಿಸುವ ಮುಖೇನ ವಿದಾಯ ಹೇಳಲಾಯಿತು

ಈದ್ಗಾ ಮೈದಾನದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಮುಸ್ಲಿಂ ಸಮಾಜದ ಪ್ರಮುಖ ಹಾಜಿ ಬಸ್ಸಪುರ (ಅಮೀರಸಾಬ) , ಅಂಜುಮನ್ ಇಸ್ಲಾಂ ಕಮೀಟ ಅಧ್ಯಕ್ಷ ಎಸ್.ಎ.ಕೋತವಾಲ , ಅಬ್ದುಲರಹೇಮಾನ ದೇಸಾಯಿ, ಹಾಜಿ ನಜೀರಅಹ್ಮದ್ ಶೇಖ , ಹಾಜಿ ಕುತಬುದ್ದೀನ ಗೋಕಾಕ, ಹಾಜಿ ಇಲ್ಲಾಹಿ ಖೈರದಿ , ಮಲಿಕ್ ಪೈಲವಾನ ಅಬ್ಬಾಸ ದೇಸಾಯಿ , ಸಾದಿಕ ಹಲ್ಯಾಳ , ಸೇರಿದಂತೆ ಸಾವಿರಾರು ಜನ ಉಪಸ್ಥಿತರಿದ್ದು ದೇವರ ಕರುಣೆಗೆ ಪಾತ್ರರಾದರು .

Related posts: