ಗೋಕಾಕ:ವಾರ ಹಿಡಿದ ಹಿನ್ನಲೆ : 5 ಮಂಗಳವಾರ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್

ವಾರ ಹಿಡಿದ ಹಿನ್ನಲೆ : 5 ಮಂಗಳವಾರ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್
ಬೆಟಗೇರಿ ಜೂ 26 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಾರ ಹಿಡಿದ ಹಿನ್ನಲೆಯಲ್ಲಿ ಮಂಗಳವಾರ ಜೂ.26 ರಂದು ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ ನಡೆದ ಬಳಿಕ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಊರಿನಲ್ಲಿರುವ ಕಿರಾಣಿ, ಮದ್ಯದಂಗಡಿ, ಚಹಾಅಂಗಡಿ, ಪಾನ್ ಬೀಡಾಂಗಡಿಗಳು ಸೇರಿದಂತೆ ಹೇರ್‍ಕಟಿಂಗ್ ಅಂಗಡಿ ಸಹ ಬಾಗಿಲು ತೆರೆಯದೇ ಬಂದ್ ಮಾಡಲಾಗಿತ್ತು. ಪುರ ಜನರು ಪುರ ದೇವರ ಎಲ್ಲ ದೇವಸ್ಥಾನಕ್ಕೆ ತೆರಳಿ ನೈವೇದ್ಯ ಅರ್ಪನೆ, ಪೂಜೆ-ಪುನಸ್ಕಾರ ಸಲ್ಲಿಸುವ, ದೇವಾಲಯ ಕಟ್ಟೆಗಳಿಗೆ ನೀರು ಹಾಕುವ ಕಾರ್ಯಕ್ರಮ ಸೇರಿದಂತೆ ವಿವಿಧ ಕಟ್ಟಾ ವಾರ ಆಚರಣೆ ಕಾರ್ಯಕ್ರಮಗಳು ಭಯ, ಭಕ್ತಿ ಸಡಗರದಿಂದ ಜರುಗಿದವು.
ಮಂಗಳವಾರ ಕಟ್ಟಾ ವಾರ ಆಚರಣೆ : ಗ್ರಾಮದ ಜನರಿಗೆ, ದನಕರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದರೆ, ಮಳೆಗಾಗಿ ವಾರದ ಒಂದು ದಿನ ಮಂಗಳವಾರ ಒಟ್ಟು 5 ಮಂಗಳವಾರ ದಿನ ಇಡೀ ಗ್ರಾಮದ ಜನರು ಕೃಷಿ ಚಟುವಟಿಕೆ ನಿಲ್ಲಿಸಿ, ವಾರದ ಈ 5 ದಿನಗಳಂದು ರೈತರ್ಯಾರೂ ಕೃಷಿ ಚಟುವಟಿಕೆ ಕೈಗೊಳ್ಳುವಂತಿಲ್ಲ, ಈಗಾಗಲೇ ಜೂ.12, ಜೂ.19, ಜೂ.26 ರ ಮಂಗಳವಾರದಂದು ವಾರದ ಮೂರು ಮಂಗಳವಾರ ದಿನ ಮುಗಿದಿವೆ. ಆದರೆ ಇನ್ನೂ 2 ವಾರದ ದಿನ ಎಲ್ಲರ ಮನೆಯಲ್ಲೂ ರೊಟ್ಟಿ ಮಾಡುವಂತಿಲ್ಲ, ವಗ್ಗರಣೆಯಂತೂ ಹಾಕುವಂತಿಲ್ಲ, ಮಾಂಸಾಹಾರ ಅಡುಗೆ ತಯಾರಿಸುವಂತಿಲ್ಲ, ಹೀಗಾಗಿ ಇನ್ನೂ ಎರಡು ಮಂಗಳವಾರ ದಿನ, ಜು.3, ಜು.10 ರಂದು ಗ್ರಾಮ ಸಂಪೂರ್ಣ ಬಂದ್ ಆಚರಿಸಿದಂತಿರುತ್ತದೆ ಎಂದು ವಾರ ಹಿಡಿದ ಆಚರಣೆ ಸಮಿತಿಯ ಸ್ಥಳೀಯ ಹಿರಿಯ ನಾಗರಿಕ ಸುಭಾಷ ಕರೆಣ್ಣವರ ತಿಳಿಸಿದ್ದಾರೆ.
ಸದಾಶಿವ ಕುರಿ, ಸಿದ್ರಾಮ ಜಟ್ಟೆಪ್ಪಗೋಳ, ಕಲ್ಲಪ್ಪ ಚಂದರಗಿ, ವೀರನಾಯ್ಕ ನಾಯ್ಕರ, ಗುರಪ್ಪ ಮಾಕಾಳಿ, ವಿಠಲ ಚಂದರಗಿ, ಭೂತಪ್ಪ ಕುರಬೇಟ, ಯಲ್ಲಪ್ಪ ಪೂಜೇರಿ, ಗೋವಿಂದ ಮಾಕಾಳಿ ಪುಂಡಲೀಕ ಹಾಲಣ್ಣವರ, ಸ್ಥಳೀಯ ವಿವಿಧ ದೇವರ ಪೂಜಾರಿಗಳು, ಭಕ್ತರು ಸೇರಿದಂತೆ ವವಾರ ಬಿಟ್ಟ ಆಚರಣೆ ಸಮಿತಿ ಸದಸ್ಯರು, ಗ್ರಾಮದ ಹಿರಿಯರು, ಇತರರು ಇದ್ದರು.
“ ಗ್ರಾಮದಲ್ಲಿ ನಮ್ಮ ಪುರ್ವಜರು ವಾರ ಬಿಡುವ ಪದ್ದತಿ ಅನುಸರಿಸಿಕೊಂಡು ಬಂದಿದ್ದಾರೆ. ಊರಿಗೆ ಒಳ್ಳೆಯದಾಗುತ್ತದೆ ಎಂಬ ಹಿತದೃಷ್ಟಿಯಿಂದ ನಾವು ಈ ಪದ್ದತಿ ಮುಂದುವರಿಸಿಕೊಂಡು ಹೊಗುತ್ತಿದ್ದೆವೆ. ಕೆಲವೊಂದು ಕಟ್ಟುನಿಟ್ಟಿನ ವೃತಾಚರಣೆ ಮಾಡುವದರ ಮೂಲಕ ದೇವರಿಗೆ ಗ್ರಾಮದ ಸರ್ವ ಸಮುದಾಯದವರು ಸೇರಿಕೊಂಡು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತೆವೆ.”
* ಮಾಯಪ್ಪ ಬಾಣಸಿ ಗ್ರಾಮದ ಹಿರಿಯ ಬೆಟಗೇರಿ, ತಾ|| ಗೋಕಾಕ.