RNI NO. KARKAN/2006/27779|Wednesday, October 15, 2025
You are here: Home » breaking news » ಮೂಡಲಗಿ:ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಅವರ ಹುಟ್ಟು ಹಬ್ಬ ಆಚರಣೆ

ಮೂಡಲಗಿ:ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಅವರ ಹುಟ್ಟು ಹಬ್ಬ ಆಚರಣೆ 

ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಅವರ ಹುಟ್ಟು ಹಬ್ಬ ಆಚರಣೆ

ಮೂಡಲಗಿ ನ 22 : ಪಟ್ಟಣದ ಯುವ ಜೀವನ ಸೇವಾ ಸಂಸ್ಥೆಯ ವತಿಯಿಂದ ಗುರುವಾರ ಶಿಕ್ಷಣ ಪ್ರೇಮಿ, ಸಮಾಜ ಸೇವಕರಾದ ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಅವರ ಹುಟ್ಟು ಹಬ್ಬವನ್ನು 397 ಸಂಖ್ಯೆ ಅಂಗನವಾಡಿ ಕೇಂದ್ರದ ಆವರಣದಲ್ಲಿ ಗಿಡ ನೆಡುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರಶಿಕ್ಷಣಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಯುವ ಜೀವನ ಸೇವಾ ಸಂಸ್ಥೆಯೂ ಪಟ್ಟಣದಲ್ಲಿ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಸಂಸ್ಥೆಯು ಪರಿಸರ ಮತ್ತು ಸ್ವಚ್ಚತೆಯ ಕಡೆಗೆ ಹೆಚ್ಚು ಗಮನಹರಿಸಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ನೆಚ್ಚಿನ ನಾಯಕರ ಹುಟ್ಟು ಹಬ್ಬಗಳನ್ನು ಗಿಡ ನೆಡುವುದರ ಮೂಲಕ ಆಚರಿಸುವುದರಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ ಎಂದರು.
ಅಂಗನವಾಡಿ ಮೇಲ್ವಿಚಾರಕಿ ಕಸ್ತೂರಿ ಪಡೆನ್ನವರ ಮಾತನಾಡಿ, ಗಣ್ಯರು ತಮ್ಮ ಹುಟ್ಟು ಹಬ್ಬವನ್ನು ಅಂಗನವಾಡಿ, ಶಾಲೆಗಳಲ್ಲಿ ಆಚರಿಸಿ ಪುಸ್ತಕ, ಬಟ್ಟೆ, ಆಟವಾಡುವ ಸಾಮಗ್ರಿಗಳನ್ನು ನೀಡುವುದರಿಂದ ಬಡ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಜೀವನ ಸೇವಾ ಸಂಸ್ಥೆ ಮತ್ತು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ, ಹನುಮಂತ ಗುಡ್ಲಮನಿ ಕ್ಷೇತ್ರ ಶಿಕ್ಷಣಧಿಕಾರಿ ಅಜೀತ ಮನ್ನಿಕೇರಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಯುವಜೀವನ ಸೇವಾ ಸಂಸ್ಥೆಯ ಅಧ್ಯಕ್ಷ ಈರಪ್ಪ ಢವಳೇಶ್ವರ, ಉಪಾಧ್ಯಕ್ಷ ರಮೇಶ ಉಪ್ಪಾರ, ಸುಭಾಸ್ ಗೊಡ್ಯಾಗೋಳ, ಸುಧೀರ ನಾಯರ್, ಗುರು ಗಂಗನ್ನವರ, ರಾಜು ಭಜಂತ್ರಿ, ಯಲ್ಲಾಲಿಂಗ ವಾಳದ, ಭಗವಂತ ಉಪ್ಪಾರ, ಇರ್ಷಾದ ಫೀರಜಾದೆ, ಗ್ರಾಮಭಿವೃದ್ದಿ ಯೋಜನೆಯ ಯೋಜನಾಧಿಕಾರಿ ದೇವರಾಜ್, ಮೇಲ್ವಿಚಾರಕ ಎಂ ಕಲ್ಮೇಶ, ಅಂಗನವಾಡಿ ಕಾರ್ಯಕರ್ತೆ ಶೋಭಾ ಗೋಕಾಕ, ಸಹಾಯಕಿ ಲಲಿತಾ ಅಮಾತಿ ಮತ್ತಿತರರು ಉಪಸ್ಥಿತರಿದ್ದರು.

Related posts: