RNI NO. KARKAN/2006/27779|Monday, June 16, 2025
You are here: Home » breaking news » ಖಾನಾಪುರ:ನಾವು ಪೊಲೀಸ ಒಂದೇ ಕುಟುಂಬ ವಿನೂತನ ಕಾರ್ಯಕ್ರಮ : ಖಾನಾಪುರದಲ್ಲಿ ಡಿ.ಜಿ ಆರ್.ಕೆ ದತ್ತಾ ಚಾಲನೆ

ಖಾನಾಪುರ:ನಾವು ಪೊಲೀಸ ಒಂದೇ ಕುಟುಂಬ ವಿನೂತನ ಕಾರ್ಯಕ್ರಮ : ಖಾನಾಪುರದಲ್ಲಿ ಡಿ.ಜಿ ಆರ್.ಕೆ ದತ್ತಾ ಚಾಲನೆ 

ನಾವು ಪೊಲೀಸ ಒಂದೇ ಕುಟುಂಬ ವಿನೂತನ ಕಾರ್ಯಕ್ರಮ : ಖಾನಾಪುರದಲ್ಲಿ ಡಿ.ಜಿ ಆರ್.ಕೆ ದತ್ತಾ ಚಾಲನೆ

ಖಾನಾಪುರ ಜೂ 24: ಪೊಲೀಸ ಇಲಾಖೆಯ ನಾವು ಪೊಲೀಸ ಒಂದೇ ಕುಟುಂಬ ಎಂಬ ವಿನೂತನ ಕಾರ್ಯಕ್ರಮ ಬೆಳಗಾವಿಯ ಖಾನಾಪುರ ಪೊಲೀಸ ಠಾಣೆಯ ಆವರಣದಲ್ಲಿ ನಡೆದಿದೆ‌

ಕಾರ್ಯಕ್ರಮದಲ್ಲಿ ಡಿಜಿ ಆರ್‌ ಕೆ. ದತ್ತಾ ಭಾಗಿಯಾಗಿದ್ದರು. ಈ ವೇಳೆ ದತ್ತಾ ಅವರಿಗೆ ಖಾನಾಪುರ ಠಾಣೆಯ ಪೊಲೀಸ್‌ ಸಿಬ್ಬಂದಿಯ ಪತ್ನಿಯರು ಬೇಡಿಕೆಗಳ ಸುರಿಮಳೆಯನ್ನೇ ಹರಿಸಿದರು. 

ಈ ಸಂವಾದ ಕಾರ್ಯಕ್ರಮದಲ್ಲಿ ಪೊಲೀಸ್‌ ಸಿಂಬ್ಬಂದಿಯ ಪತ್ನಿಯರು ತಮ್ಮ ಗಂಡಂದಿರಿಗೆ ವಾರಕ್ಕೊಂದು ರಜೆ ಹಾಗೂ ತಿಂಗಳಿಗೊಂದು ಕಡ್ಡಾಯ ರಜೆ ನೀಡಲು ಮನವಿ ಮಾಡಿದರು.

ಸರ್ಕಾರದಿಂದ ನಮಗೆ ಯಾವುದೇ ರೀತಿಯ ಹಣ ಬೇಡ ಅದರ ಬದಲು ಪಡಿತರ ನೀಡಬೇಕೆಂದು ಕೂಡ ಇದೇ ಸಂದರ್ಭದಲ್ಲಿ ಡಿಜಿ ಆರ್‌ಕೆ. ದತ್ತಾರನ್ನು ಕೇಳಿಕೊಂಡರು.

ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಡಿಜಿ ದತ್ತಾ ಭರವಸೆ ನೀಡಿದ್ದು, ರಾಜ್ಯ ಸರ್ಕಾರಕ್ಕೆ 400 ರೂಪಾಯಿ ಹಣದ ಬದಲು ಪಡಿತರ ನೀಡುವಂತೆ ಪೊಲೀಸ್ ಇಲಾಖೆಯಿಂದ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು

Related posts: