RNI NO. KARKAN/2006/27779|Sunday, February 15, 2026
You are here: Home » breaking news » ಮೂಡಲಗಿ:ರಾಜಕೀಯ ಪಕ್ಷಗಳು ರೈತನ ಏಳ್ಗೆಗಾಗಿ ಶ್ರಮಿಸಬೇಕು : ಬಾಳು ತೇರದಾಳ

ಮೂಡಲಗಿ:ರಾಜಕೀಯ ಪಕ್ಷಗಳು ರೈತನ ಏಳ್ಗೆಗಾಗಿ ಶ್ರಮಿಸಬೇಕು : ಬಾಳು ತೇರದಾಳ 

ರಾಜಕೀಯ ಪಕ್ಷಗಳು ರೈತನ ಏಳ್ಗೆಗಾಗಿ ಶ್ರಮಿಸಬೇಕು : ಬಾಳು ತೇರದಾಳ
ಮೂಡಲಗಿ ನ 5 : ಕೃಷಿಕ ಸಮಾಜದ ಬಂಧುಗಳಿಗೆ ಸರಕಾರ ಸರಿಯಾದ ನಿರ್ಣಯ ಕೈಗೋಳ್ಳದೆ ಸಕ್ಕರೆ ಕಾರ್ಖಾನೆಗಳಿಗೆ ಮನಿದು, ಕಬ್ಬು ಖರೀದಿ ಮತ್ತು ನಿಯಂತ್ರಣ ಮಂಡಳಿ ಇದ್ದರು ಸಹ ರೈತರಿಗೆ ನ್ಯಾಯಯುತ ಬೆಲೆ ನೀಡಬೇಕೆಂದು ಸುಪ್ರೀಂ ಕೋರ್ಟ ಅಷ್ಟೇ ಅಲ್ಲದೆ ಹೈಕೋರ್ಟಗಳು ಆದೇಶ ನೀಡಿದರು ಕವಡೆ ಕಾಸಿನ ಕಿಮ್ಮತ್ತಿಲ್ಲದೆ ರೈತ ವಿರೋಧಿಯಾಗಿ ಕೆಲಸ ನಿರ್ವಹಿಸುತ್ತಿರುವದು ಖಂಡನಿಯ ಎಂದು ಉತ್ತರ ಕರ್ನಾಟಕ ಸಂಗೋಳ್ಳಿ ರಾಯಣ್ಣ ಸ್ಮಾರಕ ಪ್ರಾಧಿಕಾರ ಹೋರಾಟ ಸಮೀತಿ ಅಧ್ಯಕ್ಷ ಬಾಳು ತೇರದಾಳ ಪತ್ರಿಕಾಘೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿರುವ ಕಾರ್ಖಾನೆಗಳು ಒಂದೊಂದು ರೀತಿಯ ದರ ಹಾಗೂ ನಿಯಮಗಳನ್ನು ಹೊಂದಿದ್ದು, ಏಕ ರೂಪದ ನೀತಿ ಯಾಕೆ ಜಾರಿಯಾಗುತ್ತಿಲ್ಲ. ಎಲ್ಲ ರಾಜಕೀಯ ಪಕ್ಷಗಳು ರೈತನ ಏಳ್ಗೆಗಾಗಿ ಶ್ರಮಿಸಿ ಸೂಕ್ತ ಬೆಲೆ ಹಾಗೂ ರೈತರ ತೊಂದರೆಗಳನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಚುನಾವಣೆ ಸಂದರ್ಭದಲ್ಲಿ ತಕ್ಕ ಶಾಸ್ತಿಯಾಗುವದು. ಅನ್ನದಾತ ಹಾಗೂ ದೇಶದ ಬೆನ್ನೆಲುಬಾಗಿರುವ ರೈತರ ಕಷ್ಟಗಳಿಗೆ ಸೂಕ್ತ ಪರಿಹಾರ ಸೂಚಿಸಬೇಕು. ಇಲ್ಲವಾದಲ್ಲಿ ರೈತರ ಪರವಾಗಿ ರಾಜ್ಯಾಂದ್ಯಂತ ಉಗ್ರ ಪ್ರತಿಭಟನೆ ಕೈಗೋಳ್ಳುವದಾಗಿ ಬಾಳು ತೇರದಾಳ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂತೋಷ ಪೂಜೇರಿ, ಸಿದ್ದಣ್ಣ ತೇಜಿ, ಅಡಿವೆಪ್ಪ ಪಾಟೀಲ್, ಕೆಂಪಣ್ಣ ಕೆಂಚಗೌಡರ, ಮಹಾಂತೇಶ ಎತ್ತಿನಮನಿ ಮತ್ತಿತರರು ಉಪಸ್ಥಿತರಿದ್ದರು.

Related posts: