ಗೋಕಾಕ:ಮಧ್ಯಾಹ್ನ 12ಘಂಟೆಯಿಂದ 3 ಘಂಟೆವರೆಗೆ ಮನೆಯಿಂದ ಹೊರಗಡೆ ಹೋಗುದನ್ನು ಆದಷ್ಟು ಮಟ್ಟಿಗೆ ತಪ್ಪಿಸಿ : ತಹಶೀಲ್ದಾರ ಭಸ್ಮೆ ಮನವಿ

ಮಧ್ಯಾಹ್ನ 12ಘಂಟೆಯಿಂದ 3 ಘಂಟೆವರೆಗೆ ಮನೆಯಿಂದ ಹೊರಗಡೆ ಹೋಗುದನ್ನು ಆದಷ್ಟು ಮಟ್ಟಿಗೆ ತಪ್ಪಿಸಿ : ತಹಶೀಲ್ದಾರ ಭಸ್ಮೆ ಮನವಿ
ಗೋಕಾಕ ಎ 30 : ಮೇ ತಿಂಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವ ಕಾರಣ ಸಾರ್ವಜನಿಕರು ಮಧ್ಯಾಹ್ನ 12ಘಂಟೆಯಿಂದ 3 ಘಂಟೆವರೆಗೆ ಮನೆಯಿಂದ ಹೊರಗಡೆ ಹೋಗುದನ್ನು ಆದಷ್ಟು ಮಟ್ಟಿಗೆ ತಪ್ಪಿಸಬೇಕು ಎಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು.
ಗುರುವಾರದಂದು ನಗರದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹೊರಗಡೆ ಗರಿಷ್ಠ ತಾಪಮಾನ ಇರುವುದರಿಂದ ಬಿಸಿಲಿನಲ್ಲಿ ಏನಾದರು ತೊಂದರೆ ಉಂಟಾದರೆ,ಶಾಖಾಘಾತ ಉಂಟಾದರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಬೇಟಿನೀಡಬೇಕು. ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಬೇಕು. ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡಕ, ಛತ್ರಿ, ಟೋಪಿ ಬಳಸಬೇಕು. ಹೊರಗಿನ ಉಷ್ಣತೆ ಅಧಿಕವಾಗಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸವುದು ಮಧ್ಯಾಹ್ನ 12 ರಿಂದ 3 ಘಂಟೆಯವರೆಗೆ ಹೊರಗೆ ಕೆಲಸ ಮಾಡುವುದನ್ನು ತಪ್ಪಿಸಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ,ಕಾಫಿ ಮತ್ತು ಕಾರ್ಬೊನೇಡ್ ತಂಪು ಪಾನೀಯಗಳನ್ನು ಕುಡಿಯುವುದನ್ನು ತಪ್ಪಿಸಬೇಕು ಒಟ್ಟಾರೆ ಅವಶ್ಯಕತೆ ಅನುಗುಣವಾಗಿ ಹೊರಗಡೆ ಹೋಗಬೇಕು ಹೋಗುವ ಸಂಧರ್ಭದಲ್ಲಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ ಮಾತನಾಡಿ
ಬಿಸಿಲಿಗೆ ಹೋಗುವಾಗ ( ಕಾಟನ್ ) ಹತ್ತಿ ಬಟ್ಟೆ ಧರಿಸಬೇಕು. ಪ್ರತಿ ಘಂಟೆಗೆ ಒಮ್ಮೆ ನೀರು ಕುಡಿಯಬೇಕು. ಮುಂಜಾಗೃತವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಐಸಿಯು ವಾರ್ಡನಲ್ಲಿ 5 ಬೆಡ್ ಗಳನ್ನು, ಐಸಿಯು ಹೊರಗೆಡೆ ಒಂದು ಬೇಡನ್ನು ರಿರ್ಜವ ಇಡಲಾಗಿದ್ದು, ಸಾರ್ವಜನಿಕರು ಆರೋಗ್ಯ ಇಲಾಖೆ ನೀಡುವ ಮುಂಜಾಗೃತ ಕ್ರಮಗಳನ್ನು ಪಾಲಿಸಿ ಗರಿಷ್ಠ ತಾಪಮಾನದಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮೂರ್ಛೆ ಅಥವಾ ಅನಾರೋಗ್ಯ ಅನಿಸಿದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ಈ ಋತುಮಾನದಲ್ಲಿ ಲಭ್ಯವಿರುವ ಹಾಗೂ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ಹಣ್ಣು ಹಾಗೂ ತರಕಾರಿಗಳಾದ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ, ತರಕಾರಿ ಸೊಪ್ಪು, ಎಳೆನೀರು ಹೆಚ್ಚಾಗಿ ಸೇವಿಸಬೇಕು. ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ಓ.ಆರ್.ಎಸ್ ಅನ್ನು ಬಳಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಎಂ.ಎಸ್.ಕೊಪ್ಪದ ಇದ್ದರು.
