ಗೋಕಾಕ:ಮಹಾತ್ಮ ಗಾಂಧಿಜೀಯವರ ಸ್ವಚ್ಛ ಭಾರತ ಕನಸನ್ನು ನನಸಾಗಿಸಲು ನಾವೆಲ್ಲ ಶ್ರಮಿಸಬೇಕಾಗಿದೆ : ಎಮ್.ಎಚ್.ಅತ್ತಾರ
ಮಹಾತ್ಮ ಗಾಂಧಿಜೀಯವರ ಸ್ವಚ್ಛ ಭಾರತ ಕನಸನ್ನು ನನಸಾಗಿಸಲು ನಾವೆಲ್ಲ ಶ್ರಮಿಸಬೇಕಾಗಿದೆ : ಎಮ್.ಎಚ್.ಅತ್ತಾರ
ಗೋಕಾಕ ಅ 2 : ಮಹಾತ್ಮ ಗಾಂಧಿಜೀಯವರ ಸ್ವಚ್ಛ ಭಾರತ ಕನಸನ್ನು ನನಸಾಗಿಸಲು ನಾವೆಲ್ಲ ಶ್ರಮಿಸಬೇಕಾಗಿದೆ ಎಂದು ನಗರ ಸಭೆ ಪೌರಾಯುಕ್ತ ಎಮ್.ಎಚ್.ಅತ್ತಾರ ಹೇಳಿದರು.
ಮಂಗಳವಾರದಂದು ಇಲ್ಲಿಯ ಗಾಂಧಿ ನಗರದಲ್ಲಿ ತಾಲೂಕಾಡಳಿತ, ನಗರ ಸಭೆ, ತಾಲೂಕಾ ಪಂಚಾಯತ, ಶಿಕ್ಷಣ ಇಲಾಖೆ, ಜೆಸಿಐ ಸಂಸ್ಥೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಮಹಾತ್ಮಾ ಗಾಂಧಿ ಜಯಂತಿ ನಿಮಿತ್ಯ ಹಮ್ಮಿಕೊಂಡ ಸ್ವಚ್ಛತಾ ಜಾಗೃತಾ ಆಂದೋಲನದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಆಧುನಿಕತೆಯಲ್ಲಿ ದೇಶ ಮುನ್ನಡೆಯುತ್ತಿದ್ದರೂ ಸ್ವಚ್ಛತೆಯಲ್ಲಿ ನಾವು ಹಿನ್ನಡೆಯನ್ನು ಅನುಭವಿಸುತ್ತಿದ್ದೇವೆ, ಜನರ ಜಾಗೃತರಾಗಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿ, ರೋಗರುಜಿನಗಳಿಂದ ದೂರವಿದ್ದು, ಆರೋಗ್ಯವಂತ ಸಮಾಜ ನಿರ್ಮಿಸಲು ಕರೆ ನೀಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ ಬಳಿಸಿ ಸ್ವಂತ ಶೌಚಾಲಯಗಳನ್ನು ನಿರ್ಮಿಸಿ ಬಯಲು ಶೌಚ ಮುಕ್ತ ದೇಶವನ್ನಾಗಿ ಮಾಡಲು ಶ್ರಮಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲದಾರ ಜಿ.ಎಸ್.ಮಳಗಿ,ಗ್ರೇಡ್-2 ತಹಶೀಲದಾರ ಎಸ್.ಕೆ.ಕುಲಕರ್ಣಿ, ಬಿಇಓ ಡಿ.ಎಸ್.ಕುಲಕರ್ಣಿ, ನಗರ ಸಭೆ ಸದಸ್ಯರಾದ ಶ್ರೀಶೈಲ ಯಕ್ಕುಂಡಿ, ಪ್ರಕಾಶ ಮುರಾರಿ, ಜೆಸಿಐ ಸಂಸ್ಥೆಯ ವಿಷ್ಣು ಲಾತೂರ, ಕೆಂಪಣ್ಣ ಚಿಂಚಲಿ, ಮಹಾವೀರ ಖಾರೇಪಾಟಣ, ನಗರ ಸಭೆಯ ಅಧಿಕಾರಿಗಳಾದ ಎಮ್.ಎಚ್.ಗಜಾಕೋಶ, ವಿ.ಎಸ್.ತಡಸಲೂರ, ಶಿವಾನಂದ ಹಿರೇಮಠ, ಧರ್ಮಸ್ಥಳ ಗ್ರಾಮಾಭಿವೃದ್ದಿಯ ಯೋಜನಾಧಿಕಾರಿ ಸುರೇಂದ್ರಕುಮಾರ, ಮುಖಂಡ ಶಿವಾನಂದ ಹತ್ತಿ ಸೇರಿದಂತೆ ಅನೇಕರು ಇದ್ದರು.