ಘಟಪ್ರಭಾ:ಸಹಕಾರಿ ಸಂಘಗಳು ರೈತರ ಬೆನ್ನಲಬುಗಳಾಗಿವೆ : ಗುರುಸಿದ್ದಪ್ಪ ಕಡೇಲಿ
ಸಹಕಾರಿ ಸಂಘಗಳು ರೈತರ ಬೆನ್ನಲಬುಗಳಾಗಿವೆ : ಗುರುಸಿದ್ದಪ್ಪ ಕಡೇಲಿ
ಘಟಪ್ರಭಾ ಸೆ 30 : ಸಹಕಾರಿ ಸಂಘಗಳು ರೈತರ ಬೆನ್ನಲಬುಗಳಾಗಿವೆ ಸಂಘಗಳಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘದ ಹಿರಿಯ ನಿರ್ದೇಶಕ ಗುರುಸಿದ್ದಪ್ಪ ಕಡೇಲಿ ಹೇಳಿದರು.
ಅವರು ಸಮೀಪದ ಶಿಂದಿಕುರಬೇಟ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ 34ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬೆಳಗಾವಿ ಜಿಲ್ಲೆಯಲ್ಲಿಯೇ ಈ ಸಂಘವು ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದ್ದು ರಾಜ್ಯದಲ್ಲಿಯೇ ಮಾದರಿ ಸಂಘವನ್ನಾಗಿ ಮಾಡಲು ರೈತರ ಮತ್ತು ಆಡಳಿತ ಮಂಡಳಿಯ ಸಹಕಾರ ಮುಖ್ಯವಾಗಿದೆ. ಈ ಸಾಲಿನಲ್ಲಿ ಸಂಘವು 12 ಲಕ್ಷ 3 ಸಾವಿರ ರೂ ನಿವ್ವಳ ಹೊಂದಿದೆ. ಲಾಭಸರ್ಕಾರದ ಸಹಾಯದೊಂದಿಗೆ ಸಹಕಾರ ಸಂಘದ ಸವಲತ್ತುಗಳೊಂದಿಗೆ ರೈತರ ಶ್ರೇಯೋಭಿವೃದ್ದಿ ಶ್ರಮಿಸುತ್ತಿರುವ ಸಂಘದ ಪಾತ್ರ ಪ್ರಮುಖವಾಗಿದೆ. ಜಿಲ್ಲಾ ಕೆಎಂಎಫ್ ಕೇಂದ್ರದಿಂದ ಹಲವಾರು ಉತ್ಪನ್ನಗಳನ್ನು ತಯ್ಯಾರಿಸಲಾಗುತ್ತಿದ್ದು ಸಾರ್ವಜನಿಕರು ಇದರ ಲಾಭವನ್ನು ಪಡೆಯಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಯಲ್ಲಪ್ಪ ಪಾಟೀಲ ವಹಿಸಿದ್ದರು. ವೇದಿಕೆ ಮೇಲೆ ಉಪಾಧ್ಯಕ್ಷ ಕೆಂಪಣ್ಣಾ ಮಸ್ತಿ, ನಿರ್ದೇಶಕರುಗಳಾದ ಮಾರುತಿ ಶಿರಗುರಿ, ರವಿ ಕಾಳ್ಯಾಗೋಳ, ಮುತ್ತೇಪ್ಪ ಜೊತ್ತೇನ್ನವರ, ವಿಠ್ಠಲ ಅದ್ದುಗೋಳ, ಮಹಾಂತೇಶ ಕಂಬಾರ, ಬಸವಣ್ಣಿ ಹೊಸಪೇಟಿ, ಶಿವಾನಂದ ಶೆಂಡೂರಿ,ಇಂದ್ರವ್ವ ಕಳಸನ್ನವರ,ಮಹಾದೇವಿ ಮಾನೆಪ್ಪಗೋಳ, ಚಿದಾನಂದ ಸರ್ವಿ ಇದ್ದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಡಿವೇಶ ಕಾಳ್ಯಾಗೋಳ ವರದಿ ವಾಚಿಸಿ ಸ್ವಾಗತಿಸಿದರು.