RNI NO. KARKAN/2006/27779|Saturday, February 14, 2026
You are here: Home » breaking news » ಘಟಪ್ರಭಾ:ಕೊಡಗು ಜಿಲ್ಲಾ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ

ಘಟಪ್ರಭಾ:ಕೊಡಗು ಜಿಲ್ಲಾ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ 

ಕೊಡಗು ಜಿಲ್ಲಾ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ

ಘಟಪ್ರಭಾ ಸೆ 2 : ಸ್ಥಳೀಯ ಶ್ರೀ ಜಿ.ಬಿ ಬಡಕುಂದ್ರಿ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ಶ್ರೀಮತಿ ಅಕ್ಕುತಾಯಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಾಪೂರ ಪಿ.ಜಿ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹಿಸಲಾಯಿತು.
ಪಟ್ಟಣದಲ್ಲಿ ವಿದ್ಯಾರ್ಥಿಗಳು ವಿವಿಧ ಗುಂಪುಗಳಲ್ಲಿ ಸಂಚರಿಸಿ ಪರಿಹಾರನಿಧಿ ಪೆಟ್ಟಿಗೆಗಳಿಂದ ಸಂಗ್ರಹಿಸಿ 23000/- ರೂಪಾಯಿಗಳನ್ನು ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿ ಪ್ರಕೃತಿ ವಿಕೋಪ-2018 ಈ ಹೆಸರಿಗೆ ಡಿ.ಡಿಯನ್ನು ತೆಗೆದು ಹಣವನ್ನು ನೇರವಾಗಿ ರವಾಣಿಸಲಾಯಿತು.
ಈ ಕಾರ್ಯಕ್ರಮದ ಸಂಸ್ಥೆಯ ಅಧ್ಯಕ್ಷ ಅರವಿಂದ ಬಡಕುಂದ್ರಿ. ಪ್ರಾಚಾರ್ಯರಾದ ಎ.ಎಲ್.ಮುಲ್ತಾನಿ. ಹಿರಿಯ ಉಪನ್ಯಾಸಕರಾದ ಆರ್.ಎ.ಮರೆಪ್ಪಗೋಳ, ಎಚ್.ಎ.ಪಾಟೀಲ, ಶಿವಾನಂದ ದಂಡಿನ. ಶಾಲೆಯ ಶಿಕ್ಷಕಿಯರಾದ ಉಜ್ವಲಾ ಹುಲ್ಲೋಳಿ, ಗೌರವ್ವೌ ಹತ್ತರವಾಟ ಮತ್ತು ಪತ್ತೆನ್ನವರ ಸೇರಿದಂತೆ ವಿದ್ಯಾರ್ಥಿಗಳು ಅನೇಕರು ಇದ್ದರು.

Related posts: