ಗೋಕಾಕ:ಸಮೂಹ ಪೇಂಟಿಂಗ್ ಪ್ರದರ್ಶನ ನಾಳೆ : ಜಯಾನಂದ
ಸಮೂಹ ಪೇಂಟಿಂಗ್ ಪ್ರದರ್ಶನ ನಾಳೆ : ಜಯಾನಂದ
ಗೋಕಾಕ ಅ 30 :- ನಗರದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯ ಹಾಗೂ ಬಿಂದು ಲಲಿತಕಲೆ, ಜಾನಪದ ಸಂಶೋದನ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ವಿಚಾರ ಸಂಕಿರಣ,ಪ್ರಾತ್ಯಕ್ಷತೆ ಹಾಗೂ ಚಿತ್ರಕಲಾವಿದರಾದ ಜಯಾನಂದ ಮಾದರ, ಮಲ್ಲಮ್ಮ ದಳವಾಯಿ, ಮೋನಿಕಾ ಹಲವಾಯಿ ಇವರ ಸಮೂಹ ಪೇಂಟಿಂಗ್ ಪ್ರದರ್ಶನ ನಾಳೆ ದಿನಾಂಕ 31-ರಂದು ಬೆಳ್ಳಿಗ್ಗೆ 10:30 ಕ್ಕೆ ಕಾಲೇಜು ಆವರಣದಲ್ಲಿ ಜರುಗಲಿದೆ. ಬಾಂಗ್ಲಾದೇಶದ 2018ರ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಂಗಳೂರಿನ ಚಿತ್ರಕಲಾವಿದ ಕಂದನ್ ಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದಾವಣಗೇರಿಯ ಹಿರಿಯ ಚಿತ್ರಕಲಾವಿದ ಹಾಗೂ ಕರ್ನಾಟಕ ಲಲಿತಕಲಾ ಅಕ್ಯಾಡಮಿಯ ಮಾಜಿ ಸದಸ್ಯ ಮಹಾಲಿಂಗಪ್ಪ, ಎ ಕರ್ನಾಟಕದ ಕಲೆ, ಸಂಸ್ಕøತಿ ವಿಷಯ ಕುರಿತು ಮತ್ತು ಮೈಸೂರಿನ ಚಲನಚಿತ್ರ ನಿರ್ದೇಶಕ, ಚಿತ್ರಕಲಾವಿದ ಸಾಹಿತಿ ಡಾ.ಡಿ.ಎ.ಉಪಾದ್ಯ.ಕರ್ನಾಟಕದ ಚಿತ್ರಕಲಾ ಪರಂಪರೆ ವಿಷಯ ಕುರಿತು ವಿಚಾರ ಮಂಡಿಸಲಿದ್ದು ರಾಷ್ಟ್ರೀಯ ಕಲಾವಿದ ಬಾಬೂರಾವ್ ನಡೋಣಿ ಇವರಿಂದ ಪ್ರಾತ್ಯಕ್ಷತೆ ನಡೆಯಲಿದೆ. ನಿವೃತ್ತ ಚಿತ್ರಕಲಾ ಶಿಕ್ಷಕ ಶಂಕರ ಮುಂಗರವಾಡಿ, ಬೆಳಗಾವಿ ಆರ್ಟ ಅಫೇರ್ಸ್ ಪತ್ರಿಕೆಯ ಸಂಪಾದಕ, ಕಲಾವಿದ ವಿಶ್ವನಾಥ ಗುಗ್ಗರಿ, ಕರ್ನಾಟಕ ಲಲಿತಕಲಾ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಮುತ್ನಾಳ, ಚಿತ್ರಕಲಾ ಶಿಕ್ಷಕ ಸದಾನಂದ ಗಾಯಕವಾಡ, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕೆ.ಆರ್.ಇ ಸಂಸ್ಥೆಯ ಸಂಸ್ಥಾಪಕ ಚೇರಮನ್ ಬಸವರಾಜ ಕಡಕಬಾವಿ ಅದ್ಯಕ್ಷತೆ ವಹಿಸಲಿದ್ದಾರೆ, ಆಸಕ್ತರು ಪಾಲ್ಗೂಳ್ಳಲು ಪ್ರಾಚಾರ್ಯ ಜಯಾನಂದ ಮಾದರ ಪ್ರಕಟನೆಯಲ್ಲಿ ಕೋರಿದ್ದಾರೆ