RNI NO. KARKAN/2006/27779|Tuesday, March 24, 2026
You are here: Home » breaking news » ಗೋಕಾಕ:ಚಿತ್ರ ಸೆರೆ ಹಿಡಿಯುವಲ್ಲಿ ಪೋಟೊಗ್ರಾಫರ್‍ನ ಪಾತ್ರ ಮಹತ್ವದ್ದಾಗಿದೆ : ಸಂಜೀವ ಹಂಜಿ

ಗೋಕಾಕ:ಚಿತ್ರ ಸೆರೆ ಹಿಡಿಯುವಲ್ಲಿ ಪೋಟೊಗ್ರಾಫರ್‍ನ ಪಾತ್ರ ಮಹತ್ವದ್ದಾಗಿದೆ : ಸಂಜೀವ ಹಂಜಿ 

ಚಿತ್ರ ಸೆರೆ ಹಿಡಿಯುವಲ್ಲಿ ಪೋಟೊಗ್ರಾಫರ್‍ನ ಪಾತ್ರ ಮಹತ್ವದ್ದಾಗಿದೆ : ಸಂಜೀವ ಹಂಜಿ

ಬೆಟಗೇರಿ ಅ 20 : ಇಂದು ತೀವ್ರಗತಿಯ ಬೆಳವಣಿಗೆ ಹೊಂದುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿಯೂ ಸಹ ಪೋಟೊಗ್ರಾಫಿಯ ಅಗತ್ಯವಿದೆ. ಪ್ರತಿಯೊಂದು ಚಿತ್ರ ಸೆರೆ ಹಿಡಿಯುವಲ್ಲಿ ಪೋಟೊಗ್ರಾಫರ್‍ನ ಪಾತ್ರ ಮಹತ್ವದ್ದಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸಂಜೀವಿನಿ ಖಾಸಗಿ ಆಸ್ಪತ್ರೆ ವೈದ್ಯ ಸಂಜೀವ ಹಂಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಛಾಯಾ ಗ್ರಾಹಕರ ಗೆಳೆಯರ ಬಳಗದ ಸಹಯೋಗದಲ್ಲಿ ಗ್ರಾಮದ ಸಂಜೀವಿನಿ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಆ.19 ರಂದು ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲ ವಿತರಿಸಿ ಮಾತನಾಡಿ, ಪೋಟೊ ತೆಗೆಯುವಲ್ಲಿ ವೃತ್ತಿನಿರತ ಅನುಭವ ಬೇಕು. ಪೋಟೊಗ್ರಫಿಯ ಕಲೆ ಎಷ್ಟೇ ಕಲಿತರು ಕಡಿಮೆಯೇ ಎಂದರು.
ಸ್ಥಳೀಯ ಛಾಯಾ ಗ್ರಾಹಕರ ಗೆಳೆಯರ ಬಳಗದ ಸಹಯೋಗದಲ್ಲಿ ಇಲ್ಲಿಯ ಸಂಜೀವಿನಿ ಖಾಸಗಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲ ವಿತರಿಸಿದ ಬಳಿಕ ಹಲವು ಜನ ಬಡ ವಿದ್ಯಾರ್ಥಿಗಳಿಗೆ ನೋಟಬುಕ್, ಪೇನ್ನ, ಪೇನ್ಸಿಲ್ ನೀಡಲಾಯಿತು.
ಸ್ಥಳೀಯ ಛಾಯಾ ಗ್ರಾಹಕರ ಗೆಳೆಯರ ಬಳಗದ ಸಂಚಾಲಕ ಬಸವರಾಜ ಬೆಟಗೇರಿ, ಚಂದ್ರಶೇಖರ ಪುರಂದರೆ, ಶಿವರಾಜ ಕಂಬಾರ, ರಾಜು ಗೂಗಿ, ಅಶೋಕ ದೇಯಣ್ಣವರ, ಕಲ್ಮೇಶ ಹುಬ್ಬಳ್ಳಿ, ಶಿವು ದೇಯಣ್ಣವರ, ಮಹಾಂತೇಶ ಪಟ್ಟೇದ, ತೇಜಸ್ ಪುರಂದರೆ, ನಾಗರಾಜ ಚಂದರಗಿ ಸೇರಿದಂತೆ ಇಲ್ಲಿಯ ಛಾಯಾ ಗ್ರಾಹಕರ ಗೆಳೆಯರ ಬಳಗದ ಸದಸ್ಯರು, ಇತರರು ಇದ್ದರು.

Related posts: