RNI NO. KARKAN/2006/27779|Friday, May 17, 2024
You are here: Home » breaking news » ಗೋಕಾಕ:ದೇಶದ ಸರ್ವೋತ್ತಮ ಅಭಿವೃದ್ಧಿಯಾಗಬೇಕಾದರೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ

ಗೋಕಾಕ:ದೇಶದ ಸರ್ವೋತ್ತಮ ಅಭಿವೃದ್ಧಿಯಾಗಬೇಕಾದರೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ 

ದೇಶದ ಸರ್ವೋತ್ತಮ ಅಭಿವೃದ್ಧಿಯಾಗಬೇಕಾದರೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ

ಗೋಕಾಕ ಎ 30 : ಲೋಕಸಭೆ ಚುನಾವಣೆ ಈ ದೇಶದ ಭವಿಷ್ಯದ ತೀರ್ಪು, ದೇಶದ ಸರ್ವೋತ್ತಮ ಅಭಿವೃದ್ಧಿಯಾಗಬೇಕಾದರೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಗಳವಾರದಂದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡ ಗೋಕಾಕ ಮತ್ತು ಅರಭಾವಿ ವಿಧಾನಸಭಾ ಮತಕ್ಷೇತ್ರ ಪ್ರಜಾಧ್ವನಿ-2 ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿ ಅವರು ಈ ದೇಶದ ಚುಕ್ಕಾಣಿ ಹಿಡಿದು 10 ವರ್ಷಗಳು ಆದರೂ ಸ‌ಹ ದೇಶವನ್ನು ಬದಲಾವಣೆ ಮಾಡುವಲ್ಲಿ ವಿಫಲವಾಗಿದ್ದಾರೆ. ನುಡಿದಂತೆ ನಡೆಯುವಲ್ಲಿಯೂ ಸಹ ನರೇಂದ್ರ ಮೋದಿ ಅವರು ವಿಫಲವಾಗಿದ್ದಾರೆ. ನರೇಂದ್ರ ಮೋದಿ ಅವರು ಈ ದೇಶಕ್ಕೆ ಕೊಟ್ಟ ಕೊಡುಗೆ ಶೂನ್ಯವಾಗಿದ್ದು, ಕಾಂಗ್ರೆಸ್ ಪಕ್ಷದ ಮನಮೋಹನ್ ಸಿಂಗ ಅವರು ಪ್ರಧಾನಿ ಆಗಿದ್ದಾಗ ಹಲವಾರು ಯೋಜನೆಗಳನ್ನ ಜಾರಿಗೆ ತಂದಿದ್ದರು. ಆರ್.ಟಿ.ಐ, ಆಹಾರ ಭದ್ರತೆ ಕಾಯ್ದೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು. ನರೇಂದ್ರ ಮೋದಿ ಅವರು ಹತ್ತು ವರ್ಷ ಅಧಿಕಾರ ನಡೆಸಿದರು ಸಹ ಕಪ್ಪು ಹಣ ಇನ್ನೂ ಯಾರ ಮನೆಗೆ ಬರಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಆಗಲಿಲ್ಲ. ಯುವಕ ಯುವತಿಯರಿಗೆ, ನಿರುದ್ಯೋಗಗಳಿಗೆ ಕೆಲಸ ಕೊಡಿ ಎಂದಾಗ ಪಕೋಡಾ ಮಾರಲು ಹೋಗಿ ಎಂದ ಮೋದಿ ಅವರು ಮತ್ತೆ ಪ್ರಧಾನಿ ಆಗಬಾರದು. ರೈತರ ಆದಾಯ ಎರೆಡು ಪಟ್ಟು ಹೆಚ್ಚು ಮಾಡುತ್ತೇನೆ ಎಂದ ಮೋದಿ ಅವರು ರೈತರ ಆದಾಯ ಹೆಚ್ಚು ಮಾಡಲಿಲ್ಲ. ಹಣದುಬ್ಬರ ಕಡಿಮೆ ಮಾಡುತ್ತೇನೆ ಎಂದು ಅಚ್ಚೇದಿನ ಮಾಡುತ್ತೇನೆ ಎಂದ ಮೋದಿಯಿಂದ ಅಚ್ಚೇದಿನ ಬರಲಿಲ್ಲ. ಈ ಎಲ್ಲಾ ವಿಷಯಗಳನ್ನು ಮಾತನಾಡುವುದನ್ನು ಬಿಟ್ಟು ಭಾವನಾತ್ಮಕವಾಗಿ ಮಾತನಾಡಿ ಜನರನ್ನು ಮೋಸ ಮಾಡುತ್ತಿದ್ದಾರೆ. ಎಕ್ಸಿಸ್ ಬೈ ಇಂಡಿಯಾ ಅವರ ಸರ್ವೇ ಪ್ರಕಾರ ಬಿಜೆಪಿಗೆ ಈ ಬಾರಿ ಕೇವಲ 210 ಸೀಟುಗಳು ಬರುತ್ತವೆ ಎಂದಿದೆ ಹಾಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ವೋಟಗೋಸ್ಕರ, ಸಂವಿಧಾನ ಬದಲಿಸುತ್ತೇನೆ ಎಂದು ಅತ್ಯಂತ ನೀಚ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಯಾವುದೇ ಅಭಿವೃದ್ಧಿ ಕಾರ್ಯ ನಿಂತಿಲ್ಲ, ಸರಕಾರಿ ಅಧಿಕಾರಿಗಳಿಗೆ ಸಂಬಳ ನಿಲ್ಲಿಸಿಲ್ಲಾ ಗ್ಯಾರಂಟಿಗಳನ್ನು ನಿಲ್ಲಿಸಿಲ್ಲಾ. ಬಿಜೆಪಿ ಅವರು ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ. ದೇಶದ ಪ್ರಧಾನಿಯಾಗಿರುವ ಮೋದಿ ಅವರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ತಕ್ಷಣ ಐದು ಗ್ಯಾರಂಟಿಗಳನ್ನು ಜಾರಿಗೆ ಮಾಡಿ ನುಡಿದಂತೆ ನಡೆದಿದ್ದೇವೆ ಆದರೆ ನರೇಂದ್ರ ಮೋದಿ ಅವರು ಜನರಿಗೆ ಮೋಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು 25 ಗ್ಯಾರಂಟಿಗಳನ್ನು ನೀಡುವ ಯೋಜನೆಯನ್ನು ಮಾಡಿದ್ದಾರೆ. ರೈತರ ಸಾಲ ಸಂಪೂರ್ಣ ಮನ್ನಾ , ಪ್ರತಿ ಕುಟುಂಬಕ್ಕೆ ವರ್ಷಕ್ಕೆ 1 ಲಕ್ಷ ರೂಪಾಯಿ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನು ಖರ್ಗೆ ಅವರು ಜಾರಿಗೆ ತರುತ್ತಾರೆ ಎಂದ ಅವರು ಸಾಮಾಜಿಕ ನ್ಯಾಯ ಕೋಡುವ ನಿಟ್ಟಿನಲ್ಲಿ ಜಾತಿ ಸಮೀಕ್ಷೆಯನ್ನು ಮಾಡಿ ಎಲ್ಲರಿಗೂ ಸಮಾತನೆಯನ್ನು ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಹಾಗಾಗಿ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಅವರಿಗೆ ಮತ ನೀಡಿ ದೆಹಲಿಗೆ ಕಳುಹಿಸಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ನನಗೆ ಶಕ್ತಿ ಬರುತ್ತದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ಮತ್ತೊಮ್ಮೆ ಜಾತ್ಯತೀತ ಪಕ್ಷಗಳ ಇಂಡಿಯಾ ಒಕ್ಕೂಟ ದೇಶವನ್ನು ಆಳಬೇಕು ಹಾಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಎಲ್ಲಾ ಜಾತಿ, ಧರ್ಮದರಿಗೆ ಅಧಿಕಾರಕೊಟ್ಟು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಯಾವುದೇ ಮಧ್ಯವರ್ತಿಗಳ ಸಹಕಾರ ಇಲ್ಲದೆ ಐದು ಗ್ಯಾರಂಟಿಗಳನ್ನು ಜನರ ಮನೆಗೆ ತಲುಪಿಸುತ್ತಿದೆ ಕಾಂಗ್ರೆಸ್ ಪಕ್ಷ , ರಾಜ್ಯದಲ್ಲಿ ಪುಕ್ಕಟೆಯಾಗಿ ವಿದ್ಯುತ್ ನೀಡುತ್ತಿರುವ ಪಕ್ಷ ಕಾಂಗ್ರೆಸ್ ಪಕ್ಷ. ಇಂತಹ ಒಳ್ಳೆಯ ಕೆಲಸ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿಬೇಕು. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಸರಕಾರವನ್ನು ಬಿಳಿಸುತ್ತೇನೆ ಎನ್ನುವ ಗೋಕಾಕ ಶಾಸಕರು ಗೆದ್ದು ಬಂದಿದ್ದು ಹಿಂದುಳಿದ ಜನರ ಮತಗಳಿಂದ ಎಂಬುದನ್ನು ಮರೆಯಬಾರದು .
ಬಿಜೆಪಿ ಅವರಿಗೆ ಸಾಮಾಜಿಕ ಬದ್ದತೆ ಇಲ್ಲಾ, ಕರುಬ ಸಮಾಜಕ್ಕೆ ಅನ್ಯಾಯ ಮಾಡಿದ ಪಕ್ಷ ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ನೋಡಲು ಸಾಧ್ಯವಿಲ್ಲ. ಕರ್ನಾಟಕಕ್ಕೆ ಅನ್ಯಾಯ ಮಾಡುವುದರ ಜೊತೆಗೆ ರೈತರಿಗೆ ಅನ್ಯಾಯ ಮಾಡಿದ್ದಾರೆ. ನಮ್ಮ ಕಷ್ಟಕ್ಕೆ ಬರದ ಮೋದಿ ಅವರ ಅವಶ್ಯಕತೆ ನಮಗೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಕರೆಯಿಸಿ ಕಾಂಗ್ರೆಸ್ ಪಕ್ಷ ನಿನಗೆ ಎಲ್ಲವನ್ನೂ ಕೊಟ್ಟಿದೆ. ಕಾಂಗ್ರೆಸ್ ಪಕ್ಷದ ಸಲುವಾಗಿ ನಿನ್ನ ಮಗನನ್ನು ನಿಲ್ಲಿಸಬೇಕು ಎಂದಾಗ ಅವರ ಒತ್ತಾಯಕ್ಕೆ ನನ್ನ ಮಗ ಮೃಣಾಲ ಹೆಬ್ಬಾಳಕರ ಚುನಾವಣೆಗೆ ನಿಲ್ಲಿಸಿದ್ದೇನೆ ಮತನೀಡಿ ಗೃಲ್ಲಿಸಿಕೊಡಬೇಕು ಎಂದು ಶರಗು ಒಡ್ಡಿ ಮತಯಾಚನೆ ಮಾಡಿದ ಅವರು ಸಂವಿಧಾನ ಬದಲಾಯಿಸುವ ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡಬಾರದು. ಬೆಳಗಾವಿ ಜಿಲ್ಲೆಗೆ ಸಿದ್ದರಾಮಯ್ಯ ಅವರು ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರನ್ನು ಹುಬ್ಬಳ್ಳಿಯ ಜನರು ತಿರಸ್ಕಾರ ಮಾಡಿದ್ದಾರೆ. ತಿರಸ್ಕಾರ ಮಾಡಿದ ಜಗದೀಶ್ ಶೆಟ್ಟರ ಅವರನ್ನು ಬೆಳಗಾವಿ ಜನರು ಪುರಸ್ಕಾರ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟರು ಅವರು ಸೋತರು ನಂತರ ಅವರನ್ನು ಎಂಎಲ್ಸಿ ಮಾಡಿದರು ಸಹ ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿ ಮತ್ತೆ ಬಿಜೆಪಿಗೆ ಹೋಗಿರುವ ಜಗದೀಶ್ ಶೆಟ್ಟರ್ ಅವರನ್ನು ಬೆಳಗಾವಿ ಜನರು ತಿರಸ್ಕರಿಸಿ ನನ್ನ ಮಗ ಮೃಣಾಲ ಅವನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದ ಅವರು ನೇಹಾ ಹಿರೇಮಠ ಅವರ ಹತ್ಯೆ ನಿಮಗೆ ಕಾಣಿಸುತ್ತದೆ ಹಾಸನದ ಪ್ರಜ್ವಲ್ ರೇವಣ್ಣ ಅವರಿಂದ ಷೋಷಣೆಗೆ ಒಳಗಾದ ಮಹಿಳೆಯರು ಕಾಣುತ್ತಿಲ್ಲ ಅವರ ಪರ ಧ್ವನಿ ಎತ್ತುತ್ತಿಲ್ಲ ಬೆಳಗಾವಿಗೆ ಶೂನ್ಯ ಕೊಡುಗೆ ನೀಡಿದ ಶೆಟ್ಟರ ಅವರನ್ನು ಯಾವ ಕಾಣರಕ್ಕೂ ಮತ ನೀಡಿಬಾರದು. ನಿಮ್ಮ ಸ್ವಂತ ಬೀಗ ದಿವಂಗತ ಸುರೇಶ್ ಆಂಗಡಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಲು ಆಗದ ಶೆಟ್ಟರ್ ಅವರಿಂದ ಏನು ಅಭಿವೃದ್ಧಿ ಎದುರು ನೋಡಲು ಸಾಧ್ಯವಿಲ್ಲ ಹಾಗಾಗಿ ಬರುವ ಮೇ 7 ರಂದು ನಡೆಯುವ ಚುನಾವಣೆಯಲ್ಲಿ ಮೃಣಾಲ ಹೆಬ್ಬಾಳಕರ ಅವರಿಗೆ ಮತನೀಡಿ ಸಂಸದ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ. ಸಿ ಸುಧಾಕರ, ಶಾಸಕರುಗಳಾದ ಲಕ್ಷ್ಮಣ ಸವದಿ, ಬಿ.ಕೆ ಸಂಗಮೇಶ, ಆಸೀಫ ಸೇಠ್ , ಪುಟ್ಟರಂಗಶೆಟ್ಟಿ, ಶ್ರೀಮತಿ ನಯನಾ ಮೊಟ್ಟಮ್ಮಾ, ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾಧವ, ಕೇರಳ ಶಾಸಕ ಅರೋಜಿ ಜಾನ, ಮೋಹನ ಲಿಂಬಿಕಾಯಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ,
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದಲಿಂಗ ದಳವಾಯಿ, ಮುಖಂಡರ ಗಳಾದ ಡಾ.ಮಹಾಂತೇಶ ಕಡಾಡಿ, ಚಂದ್ರಶೇಖರ್ ಕೊಣ್ಣೂರ, ಅಶೋಕ ಪೂಜಾರಿ, ಅರವಿಂದ ದಳವಾಯಿ, ಪ್ರಕಾಶ ಡಾಂಗೆ , ಸುಭಾಷ್ ಪೂಜಾರಿ, ರಮೇಶ ಉಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: