RNI NO. KARKAN/2006/27779|Sunday, June 15, 2025
You are here: Home » breaking news » ಮೂಡಲಗಿ:ಶಿಕ್ಷಣದಲ್ಲಿ ಪಾಠ ಎಷ್ಟು ಮುಖ್ಯವೋ ಆಟವೂ ಅಷ್ಟೇ ಮುಖ್ಯ : ನ್ಯಾಯವಾದಿ ಲಕ್ಷ್ಮಣ ಅಡಿಹುಡಿ

ಮೂಡಲಗಿ:ಶಿಕ್ಷಣದಲ್ಲಿ ಪಾಠ ಎಷ್ಟು ಮುಖ್ಯವೋ ಆಟವೂ ಅಷ್ಟೇ ಮುಖ್ಯ : ನ್ಯಾಯವಾದಿ ಲಕ್ಷ್ಮಣ ಅಡಿಹುಡಿ 

ಶಿಕ್ಷಣದಲ್ಲಿ ಪಾಠ ಎಷ್ಟು ಮುಖ್ಯವೋ ಆಟವೂ ಅಷ್ಟೇ ಮುಖ್ಯ : ನ್ಯಾಯವಾದಿ ಲಕ್ಷ್ಮಣ ಅಡಿಹುಡಿ

ಮೂಡಲಗಿ ಅ 19 : ಶಿಕ್ಷಣದಲ್ಲಿ ಪಾಠ ಎಷ್ಟು ಮುಖ್ಯವೋ ಆಟವೂ ಅಷ್ಟೇ ಮುಖ್ಯ, ಸದೃಢ ದೇಹದಲ್ಲಿ ಸದೃಢ ಮನಸ್ಸಿನ ನಿರ್ಮಾಣವೇ ಶಿಕ್ಷಣ ಎಂಬಂತೆ ಆಟ-ಪಾಠಗಳೆರಡಕ್ಕೂ ಸಮಾನ ಆದ್ಯತೆ ನೀಡಬೇಕಾದದ್ದು ಶಿಕ್ಷಣದ ಜವಾಬ್ದಾರಿಯಾಗಿದೆ ಎಂದು ಮಂಜುನಾಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ನ್ಯಾಯವಾದಿ ಲಕ್ಷ್ಮಣ ವಾಯ್. ಅಡಿಹುಡಿ ಹೇಳಿದರು.
ಸ್ಥಳೀಯ ವೆಂಕಟೇಶ ಚಿತ್ರಮಂದಿರಲ್ಲಿ ಆಟ-ಪಾಠ ಮಕ್ಕಳ ಚಲನಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಕ್ರೀಡೆಗಳು ಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳೆಯಲು ಸಹಾಯಕವಾಗಿವೆ. ಅದರಂತೆ ಪಾಠಗಳು ಮಕ್ಕಳನ್ನು ಸಮಾಜಮುಖಿಯಾಗುವಂತೆ ಮತ್ತು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಮುಂದೆ ದೇಶದ ಉತ್ತಮ ಪ್ರಜೆಗಳಾಗಲು ಅನುಕೂಲ ಮಾಡಿಕೊಡುತ್ತವೆ. ಆದ್ದರಿಂದಲೇ ಶಿಕ್ಷಣದಲ್ಲಿ ದೈಹಿಕ ಶಿಕ್ಷಣಕ್ಕೂ ಪ್ರಾಧಾನ್ಯತೆ ನೀಡಲಾಗಿದೆ. ಆಟ-ಪಾಠ ಚಲನಚಿತ್ರವು ಒಂದು ಉತ್ತಮ ಮಕ್ಕಳ ಚಿತ್ರವಾಗಿದ್ದು ಮಕ್ಕಳು ಕೇವಲ ಓದು-ಬರಹಕ್ಕೆ ಹೆಚ್ಚು ಕಾಲ ವಿನಿಯೋಗಮಾಡುತ್ತಾರೆ ಅದರ ಜೊತೆಗೆ ಆಟಗಳಲ್ಲಿಯೂ ಭಾಗವಹಿಸುವುದರ ಮೂಲಕ ಯಶಸ್ಸು ಸಾಧಿಸಬಹುದೆಂದು ಈ ಚಿತ್ರದಲ್ಲಿ ತೋರಿಸಲಾಗಿದ್ದು ಎಲ್ಲ ಮಕ್ಕಳು ಮತ್ತು ಪಾಲಕರು ಈ ಚಲನಚಿತ್ರವನ್ನು ನೋಡಿ ಕಲಿಯಬೇಕು ಎಂದರು.
ಮುನ್ಯಾಳತೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಸಸಾಲಟ್ಟಿ ಮಾತನಾಡುತ್ತಾ ಇಂದಿನ ಕಂಪ್ಯೂಟರ್ ಯುಗದಲ್ಲಿ ಮಕ್ಕಳು ಚಲನಚಿತ್ರಗಳನ್ನು ನೋಡುವುದರಿಂದ ಅದರಲ್ಲಿಯ ಒಳ್ಳೆಯ ಅಂಶಗಳು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಪಾಲಕರು ಇಂತಹ ಉತ್ತಮ ಮಕ್ಕಳ ಚಿತ್ರಗಳನ್ನು ಮಕ್ಕಳಿಗೆ ತೋರಿಸುವ ಮೂಲಕ ಮಕ್ಕಳಿಗೆ ಮನರಂಜನೆಯ ಜೊತೆ ಜೊತೆಗೆ ಜೀವನದಲ್ಲಿ ಗುರಿಯನ್ನು ಹೊಂದುಲು ಪೂರಕವಾಗಿರುತ್ತವೆ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಕ್ಕಳ ಚಲನಚಿತ್ರ ವಿತರಕರಾದ ಮಹಾವೀರ ದೊಡಮನಿ, ಸುಭಾಸ ಹಾದಿಮನಿ ಮತ್ತು ಕಲಾ ಟೀಂ ಮೂಡಲಗಿ, ರೇವಣ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಪಿ.ಯಳವತಿಮಠ, ಎಲ್.ವಾಯ್.ಅಡಿಯುಡಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ರುಕ್ಮಿಣಿ ಶಿವಾಪೂರ, ಶಾನೂರ ಬುಲಬುಲೆ, ಸುರೇಶ ಸಣ್ಣಕ್ಕಿ, ಭೀಮಶಿ ಸಣ್ಣಕ್ಕಿನವರ, ಆರ್.ಡಿ.ಬಂದ್ರಿ, ಎ.ಎಸ್.ಅಂಗಡಿ, ರಾಮಣ್ಣ ಮಂಟೂರ, ಮಹಾಂತೇಶ ಕಾರಜನಗಿ ಮತ್ತು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಚಲನಚಿತ್ರವನ್ನು ವೀಕ್ಷಿಸಿದರು.

Related posts: