ಮೂಡಲಗಿ:ಮೂಡಲಗಿಯಲ್ಲಿ “ ಕನ್ನಡ ದೇಶದೊಳ್” ಚಿತ್ರತಂಡದಿಂದ ಚಿತ್ರೀಕರಣ
ಮೂಡಲಗಿಯಲ್ಲಿ “ ಕನ್ನಡ ದೇಶದೊಳ್” ಚಿತ್ರತಂಡದಿಂದ ಚಿತ್ರೀಕರಣ
ಮೂಡಲಗಿ ಅ 12: ಜೆಎನ್‍ಎಸ್ ಪ್ರೋಡಕ್ಸನ್ ವತಿಯಿಂದ ನಿರ್ಮಿಸಲಾಗುತ್ತಿರುವ ಬಹು ನೀರಿಕ್ಷಿತ “ ಕನ್ನಡ ದೇಶದೊಳ್” ಚಲನಚಿತ್ರದ ಪೋಸ್ಟರ್ ಬಿಡುಗಡೆ ಮತ್ತು ಹಾಡಿನ ಚಿತ್ರೀಕರಣ ಇತ್ತಿಚಿಗೆ ಪಟ್ಟಣದ ಕಲ್ಮೇಶ್ವರ ವೃತ್ತ ಮತ್ತು ಶ್ರೀ ಮಂಜುನಾಥ ಶಿಕ್ಷಣ ಸಂಸ್ಥೆಯ ಲಕ್ಷ್ಮಣ ಅಡಿಹುಡಿ ಶಾಲೆ ಹಾಗೂ ಸುತ್ತಮುಲಿನ ಸುಂದರ ತಾಣಗಳಲ್ಲಿ ನಡೆಯಿತು.
ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಕಲಾವಿದರು ಮುಖ್ಯವಾಹಿನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತಿದ್ದಾರೆ. ಉತ್ತರ ಕರ್ನಾಟಕದ ಹಲವು ಪ್ರತಿಭೆಗಳು ಬೆಳಕಿಗೆ ಬಂದಿದೆ. ಸ್ಥಳೀಯ ಕಲಾವಿದ ಮಂಜುನಾಥ ರೇಳೆಕರ ಅಭಿನಯಿಸಿರುವುದು ಸಂತಸದ ವಿಷಯವಾಗಿದೆ. ಕನ್ನಡ ನೆಲ, ಜಲ ಭಾಷೆಗೆ ಸಂಬಂಧಿಸಿದ “ಕನ್ನಡ ದೇಶದೊಳ್” ಚಿತ್ರ ತಂಡಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಈ ಚಲನಚಿತ್ರವು ರಾಜ್ಯದ್ಯಾಂತ ಶತದಿನ ಪ್ರದರ್ಶನ ಕಾಣಲಿ ಎಂದು ಶುಭಾಕೋರಿದರು.
ಚಿತ್ರ ನಿರ್ದೇಶಕ ಅವಿರಾಮ್ ಕಂಠೀರವ ಮಾತನಾಡಿ, “ಕನ್ನಡ ದೇಶದೊಳ್” ಚಿತ್ರವೂ ಕನ್ನಡಭಿಮಾನದ ಚಿತ್ರವಾಗಿದೆ. ಚಿತ್ರೀಕರಣವೂ ಬಹುತೇಕ ಮುಕ್ತಾಯಗೊಂಡಿದ್ದು ನ.1 ಕನ್ನಡ ರಾಜ್ಯೋತ್ಸವ ದಿನದಂದು ತೆರೆ ಕಾಣಲಿದೆ. ಉತ್ತರ ಕರ್ನಾಟಕದಲ್ಲಿ ಮೂರು ಗೀತೆಗಳೂ ಚಿತ್ರೀಕರಣ ನಡೆಯುತ್ತಿದ್ದು ಉತ್ತರ ಕರ್ನಾಟಕ ಜನತೆ ಚಿತ್ರ ತಂಡಕ್ಕೆ ಅಭೂತಪೂರ್ವ ಸಹಕಾರ ನೀಡುತ್ತಿದ್ದಾರೆ. ಸ್ಥಳೀಯ ಕಲಾವಿದ ಮಂಜುನಾಥ ರೇಳೆಕರ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಇಚ್ಛೆಯಂತೆ ಮೂಡಲಗಿ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.
ನಿರ್ಮಾಪಕ ವೆಂಕಟೇಶ, ಛಾಯಗ್ರಾಹಕ ಶರತ್‍ಕುಮಾರ, ಸಹ ನಿರ್ದೇಶಕ ಪ್ರಮೋದ, ನಟಿ ಕಾವ್ಯ, ರಮೇಶ, ಚಂದ್ರಶೇಖರ, ಹರೀಶ ಅರಸು, ಲಕ್ಷ್ಮಣ ಅಡಿಹುಡಿ, ಈರಣ್ಣ ಕೊಣ್ಣುರ, ಮಲ್ಲಪ್ಪ ಮದಗುಣಕಿ, ಕಲಾವಿದ ಮಂಜು ರೇಳೆಕರ, ಚೇತನ ನಿಶಾನಿಮಠ, ಸುಧೀರ ನಾಯರ್, ಸುಭಾಸ್ ಗೊಡ್ಯಾಗೋಳ ಮತ್ತು ಲಕ್ಷ್ಮಣ ಅಡಿಹುಡಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.