RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀಜ ವಿತರಣಾ ಕೇಂದ್ರಗಳು ಪ್ರಾರಂಭಿಸಲಾಗಿದೆ : ಎ.ಡಿ.ಸವದತ್ತಿ

ಗೋಕಾಕ:ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀಜ ವಿತರಣಾ ಕೇಂದ್ರಗಳು ಪ್ರಾರಂಭಿಸಲಾಗಿದೆ : ಎ.ಡಿ.ಸವದತ್ತಿ 

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀಜ ವಿತರಣಾ ಕೇಂದ್ರಗಳು ಪ್ರಾರಂಭಿಸಲಾಗಿದೆ : ಎ.ಡಿ.ಸವದತ್ತಿ

ಗೋಕಾಕ ಜೂ 1 : ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೀಜ ವಿತರಣಾ ಕೇಂದ್ರಗಳು ಗೋಕಾಕ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಾರಂಭಿಸಲಾಗಿದ್ದು ಸದರಿ ಕೇಂದ್ರಗಳಲ್ಲಿ ಮುಂಗಾರು ಹಂಗಾಮಿಗೆ ಬೇಕಾಗುವ ಬಿತ್ತನೆ ಬೀಜಗಳಾದ ಸೋಯಾಬಿನ, ಗೋವಿನ ಜೋಳ, ಹೈಬ್ರಿಡ್ ಜೋಳ, ಸಜ್ಜೆ, ಸೂರ್ಯಕಾಂತಿ, ಹೆಸರು ಮತ್ತು ತೋಗರಿ ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು ರೈತ ಭಾಂದವರು ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳನ್ನು ಪಡೆಯಬಹುದಾಗಿದೆ.
ಗೋಕಾಕ ರೈತ ಸಂಪರ್ಕ ಕೇಂದ್ರದ ಅಡಿಯಲ್ಲಿ ಬರುವ ಗೋಕಾಕ, ಖನಗಾವ, ಮದವಾಲ,ಅಂಕಲಗಿ ಮತ್ತು ಮಮದಾಪುರ. ಅರಭಾವಿ ರೈತ ಸಂಪರ್ಕ ಕೇಂದ್ರದ ಅಡಿಯಲ್ಲಿ ಬರುವ ಅರಭಾವಿ, ಮೂಡಲಗಿ, ಹಳ್ಳೂರ ಮತ್ತು ತುಕ್ಕಾನಟ್ಟಿ. ಕೌಜಲಗಿ ರೈತ ಸಂಪರ್ಕ ಕೇಂದ್ರದ ಅಡಿಯಲ್ಲಿ ಬರುವ ಕೌಜಲಗಿ, ಲಕ್ಷ್ಮೇಶ್ವರ, ಮೇಳವಂಕಿ, ಬೆಟಗೇರಿ, ಕುಲಗೋಡ ಪಿಕೆಪಿಎಸ್, ಮತ್ತು ಯಾದವಾಡಗಳಲ್ಲಿ ಬೀಜ ವೀತರಣಾ ಕೇಂದ್ರಗಳನ್ನು ತೆರಯಲಾಗಿದ್ದು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲು ವ್ಯವಸ್ಥೆ ಮಾಡಲಾಗಿದ್ದು ರೈತರ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕರಾದ ಎ.ಡಿ.ಸವದತ್ತಿ ಅವರು ಪ್ರಕಟನೆಯಲ್ಲಿ ಕೋರಿದ್ದಾರೆ.

Related posts: