RNI NO. KARKAN/2006/27779|Sunday, September 14, 2025
You are here: Home » breaking news » ಗೋಕಾಕ:ಪೀರನವಾಡಿಯಲ್ಲಿ ಶೀಘ್ರದಲ್ಲೇ ಸಂಗೋಳ್ಳಿ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಕ್ರಮ : ಸಚಿವ ರಮೇಶ ಜಾರಕಿಹೊಳಿ ಭರವಸೆ

ಗೋಕಾಕ:ಪೀರನವಾಡಿಯಲ್ಲಿ ಶೀಘ್ರದಲ್ಲೇ ಸಂಗೋಳ್ಳಿ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಕ್ರಮ : ಸಚಿವ ರಮೇಶ ಜಾರಕಿಹೊಳಿ ಭರವಸೆ 

ಪೀರನವಾಡಿಯಲ್ಲಿ ಶೀಘ್ರದಲ್ಲೇ ಸಂಗೋಳ್ಳಿ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಕ್ರಮ : ಸಚಿವ ರಮೇಶ ಜಾರಕಿಹೊಳಿ ಭರವಸೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 23 :

 

ಪೀರನವಾಡಿಯಲ್ಲಿ ಅತಿ ಶೀಘ್ರದಲ್ಲೇ ಸಂಗೋಳ್ಳಿ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಕ್ರಮ ಕೈಗೋಳ್ಳಲಾಗುವದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು

ರವಿವಾರದಂದು ನಗರದ ಅವರ ಗೃಹ ಕಛೇರಿಯಲ್ಲಿ ಹಾಲುಮತ ಸಮಾಜದ ಜಿಲ್ಲಾ ಮುಖಂಡರು ನೀಡಿದ ಮನವಿಯನ್ನು ಸ್ವೀಕರಿಸಿ ಅವರು ಮಾತನಾಡಿದರು

ಗಣೇಶ ಚತುರ್ಥಿ ಮುಗಿದ ನಂತರ ಸಮಾಜದ ಹಿರಿಯರ ಸಮ್ಮುಖದಲ್ಲಿ ಚರ್ಚೆ ನಡೆಯಿಸಿ ಆದಷ್ಟು ಬೇಗ ಸುಸಜ್ಜಿತ ವೀರ ಸಂಗೋಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಲಾಗುವದು .ಸಮಾಜ ಭಾಂಧವರು ನಮ್ಮ ಮೇಲೆ ವಿಶ್ವಾಸವಿಟ್ಟು ಮೂರ್ತಿ ಸ್ಥಾಪಿಸುವ ಜವಾಬ್ದಾರಿ ನಿಡಬೇಕು ಯಾರಿಗೂ ತೊಂದರೆಯಾಗದಂತೆ ಸರಕಾರದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಬರುವ ದಿನಗಳಲ್ಲಿ ಹಾಲುಮತ ಸಮಾಜದಿಂದ ನಡೆಸಲು ಉದ್ದೇಶಿಸಿರುವ ಹೋರಾಟವನ್ನು ಕೈಬಿಟ್ಟು ಸರಕಾರದೊಂದಿಗೆ ಸಹಕರಿಸಬೇಕೆಂದು ಸಚಿವರು ಸಮಾಜದ ಮುಖಂಡರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಮುಖಂಡರುಗಳಾದ ವಿಪ ಸದಸ್ಯ ವಿವೇಕರಾವ್ ಪಾಟೀಲ , ಡಾ. ರಾಜೇಂದ್ರ ಸಣ್ಣಕ್ಕಿ, ಮಡೆಪ್ಪಾ ತೋಳಿನವರ, ಲಕ್ಷ್ಮಣರಾವ್ ಚಿಂಗಳೆ ,ಸಿದ್ಲಲಿಂಗಪ್ಪ ದಳವಾಯಿ, ವಿನಾಯಕ ಕಟ್ಟಿಕರ, ಮಾರುತಿ ಮರಡಿ ಪಿರಣವಾಡಿ ಗ್ರಾಮಸ್ತರಾದ ಮಹೇಶ ಪಾಟೀಲ, ಶಿವಾಜಿ ಶಾಪೂರಕರ, ಬಸವರಾಜ ಬಸಳಿಗುಂದಿ, ಶಂಕರರಾವ್ ಹೆಗಡೆ, ಎಚ್.ಎಸ್ ನಸಲಾಪೂರೆ, ಭಗವಂತ ಬಂತಿ, ಜಿ ಜಿ ಕನವಿ, ಶಿವಪುತ್ರ ಹಡಕರ, ಹನಮಂತ ಗೋರವನಕೋಳ್ಳ, ಸತ್ತೇಪ್ಪ ಭಾಗೇನ್ನವರ, ಶಿವು ಮುರಾಯಿ, ಮದುಸೂದನ ಬೀಳಗಿ, ಸತೀಶ ಶಾಪೂರಕರ, ಎಮ್ ಕೆ ಪೂಜೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: