ಗೋಕಾಕ:ಶಿಕ್ಷಕರು ದೇಶಕ್ಕೆ ಉತ್ತಮ ನಾಗರಿಕರನ್ನಾಗಿ ರೂಪಿಸುವ ಶಿಲ್ಪಿಗಳು : ಅನುಪಾ ಕೌಶಿಕ
ಶಿಕ್ಷಕರು ದೇಶಕ್ಕೆ ಉತ್ತಮ ನಾಗರಿಕರನ್ನಾಗಿ ರೂಪಿಸುವ ಶಿಲ್ಪಿಗಳು : ಅನುಪಾ ಕೌಶಿಕ
ಗೋಕಾಕ ಅ 8 : ಶಿಕ್ಷಕರು ದೇಶಕ್ಕೆ ಉತ್ತಮ ನಾಗರಿಕರನ್ನಾಗಿ ರೂಪಿಸುವ ಶಿಲ್ಪಿಗಳಾಗಿದ್ದು ಸಮಾಜದಲ್ಲಿ ಅವರ ಜವಾಬ್ದಾರಿ ಹೆಚ್ಚು ಇದೆ ಎಂದು ಇಲ್ಲಿಯ ಕೆಎಲ್‍ಇ ಶಾಲೆಯ ಪ್ರಾಚಾರ್ಯೆ ಅನುಪಾ ಕೌಶಿಕ ಹೇಳಿದರು.
ಅವರು ಬುಧವಾರದಂದು ನಗರದ ರೋಟರಿ ರಕ್ತ ಭಂಡಾರ ಸಭಾಭವನದಲ್ಲಿ ಇನ್ನರ್ ವಿಲ್ ಸಂಸ್ಥೆಯವರು ಶಿಕ್ಷಕರಿಗಾಗಿ ಆಯೋಜಿಸಿದ್ದ ಶೈಕ್ಷಣಿಕ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಸಿದ್ಧತೆಗೊಳಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಬದಲಾವಣೆಗೆ ಶಿಕ್ಷಕರು ಸ್ಪಂದಿಸಿ ವಿದ್ಯಾರ್ಥಿಗಳನ್ನು ಪ್ರತಿಭಾನ್ವಿತರನ್ನಾಗಿ ಮಾಡಬೇಕು.ಇಂತಹ ಶೈಕ್ಷಣಿಕ ತರಬೇತಿಗಳನ್ನು ಆಯೋಜಿಸಿ ಇನ್ನರ್ ವಿಲ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ.
ತರಬೇತಿದಾರರಾಗಿ ಆಗಮಿಸಿದ್ದ ಬೆಳಗಾವಿಯ ಗುಡ್ ಶಪರ್ಡ್ ಸ್ಕೂಲಿನ ಪ್ರಾಚಾರ್ಯೆ ಶೀತಲ್ ಕಮತ ಮಾತನಾಡಿ ಶಿಕ್ಷಕರು ಅಧ್ಯಯನಶೀಲರಾಗಿ ವಿದ್ಯಾರ್ಥಿಗಳಿಗೆ ಭೋಧಿಸಿದರೆ ಅದು ಪರಿಣಾಮಕಾರಿಯಾಗಿರುತ್ತದೆ ಎಂದು ತಿಳಿಸಿದ ಅವರು ಸುಧೀರ್ಘ ತರಬೇತಿಯನ್ನು ನೀಡಿದರು.
ವೇದಿಕೆ ಮೇಲೆ ಇನ್ನರ್‍ವಿಲ್ ಸಂಸ್ಥೆ ಅಧ್ಯಕ್ಷೆ ನಮಿತಾ ಆಜರಿ, ಕಾರ್ಯದರ್ಶಿ ಗಿರಿಜಾ ಮುನ್ನೋಳಿಮಠ ಇದ್ದರು.
ಕಾರ್ಯಕ್ರಮವನ್ನು ಜಯಾ ಕಮತ ಸ್ವಾಗತಿಸಿದರು. ವಿದ್ಯಾ ಗುಲ್ಲ ನಿರೂಪಿಸಿದರು.ವಿದ್ಯಾ ಮಗದುಮ್ ವಂದಿಸಿದರು.