ಮೂಡಲಗಿ:ಜೈ ಹನುಮಾನ ಯುವಜನ ಸೇವಾ ಸಂಘದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ
ಜೈ ಹನುಮಾನ ಯುವಜನ ಸೇವಾ ಸಂಘದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ
ಮೂಡಲಗಿ ಅ 6 : ಯೋಧರು ಹುತಾತ್ಮರಾದರೆ ಅವರ ಪಾರ್ಥೀವ ಶರೀರವನ್ನು 24 ಗಂಟೆಗಳಲ್ಲಿ ತಮ್ಮ ಸ್ವ-ಗ್ರಾಮಕ್ಕೆ ತಲುಪಿಸಬೇಕು. ಯೋಧರ ತಂದೆ ತಾಯಿ ಮತ್ತು ಕುಟುಂಬದವರು ಮೃತರಾದಾಗಲೂ ಕೂಡ 24 ಗಂಟೆಗಳಲ್ಲಿ ಯೋಧರನ್ನು ತಮ್ಮ ಸ್ವ-ಗ್ರಾಮಕ್ಕೆ ತಲುಪುಂವತೆ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಕಲ್ಲೋಳಿಯ ಜೈ ಹನುಮಾನ ಯುವಜನ ಸೇವಾ ಸಂಘದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಗೋಕಾಕ ತಹಶೀಲ್ದಾ ಮುಖಾಂತರ ಸೋಮವಾರ ಮನವಿ ಸಲ್ಲಿಸಿದರು.
ವಿಶ್ವಗುರು ಭಾರತದಂತಹ ದೇಶದಲ್ಲಿ ಯೋಧರ ಗಡಿ ರಕ್ಷಣೆಯಂತಹ ಕಾರ್ಯ ಬಹು ಅಮೂಲ್ಯವಾದದ್ದು ಮತ್ತು ಗೌರವಾನ್ವಿತವಾದದ್ದು ಜಾತಿ, ಧರ್ಮ, ಭಾಷೆಗಳ ಅಂತರವಿಲ್ಲದೆ ನಮ್ಮ ವೀರ ಸೈನಿಕರ ಸೇವೆ ಶ್ಲಾಘನೀಯವಾದದ್ದು. ಪ್ರತಿ ಭಾರತೀಯನೂ ಪ್ರಶಂಶಿಸಬೇಕಾದ ಕೆಲಸ ಆದ್ದರಿಂದ ಭಾರತೀಯ ಸೈನ್ಯದ ಯೋಧರು ಗಡಿಯಲ್ಲಿ ಹುತಾತ್ಮರಾದರೆ ಇಡಿ ದೇಶವೇ ಕಂಬನಿ ಮಿಡಿಯುವುದು ಆದ್ದರಿಂದ ಈ ವೀರ ಯೋಧನ ಪಾರ್ಥಿವ ಶರೀರವನ್ನು ಅವರ ಸ್ವ-ಗ್ರಾಮಕ್ಕೆ 24 ಗಂಟೆಗಳಲ್ಲಿ ಸರಿಯಾಗಿ ಹೆಲಿಕ್ಯಾಪ್ಟರ್ ಮುಖಾಂತರ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಬೇಕು. ಹಾಗೂ ಹೆತ್ತ ತಂದೆ-ತಾಯಿ ಮತ್ತು ಕುಟುಂಬದವರು ಆಕಸ್ಮಿಕವಾಗಿ ಮೃತರಾದರೆ ಕೂಡಲೇ ಯೋಧರನ್ನು ಗಡಿಯಿಂದ 24 ಗಂಟೆಗಳಲ್ಲಿ ಅವರ ಸ್ವ-ಗ್ರಾಮಕ್ಕೆ ಆಗಮಿಸಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಕೂಡಲೇ ಅನುಷ್ಠಾನಕ್ಕೆ ತರಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪರಶುರಾಮ ಇಮಡೇರ, ಉಪಾಧ್ಯಕ್ಷ ಮಹಾಂತೇಶ ಕಡಲಗಿ, ಕಾರ್ಯದರ್ಶಿ ಭೀಮಶಿ ಗೋಕಾಂವಿ, ಪದಾಧಿಕಾರಿಗಳಾದ ವಿಠ್ಠಲ ಕಾಶನ್ನವರ, ರಾಜಪ್ಪ ಮಾವರಕರ, ಸಿದ್ದಪ್ಪ ಪೂಜೇರಿ ಮತ್ತು ಭೀಮಶಿ ಕಡಲಗಿ ಇದ್ದರು.