RNI NO. KARKAN/2006/27779|Monday, August 4, 2025
You are here: Home » breaking news » ಬೆಳಗಾವಿ:ಸಿಎಂ ಕುಮಾರಸ್ವಾಮಿ ಯಿಂದ ಅಹಂಕಾರದ ಮಾತು : ಶಾಸಕ ನಡಹಳ್ಳಿ ಕಿಡಿ

ಬೆಳಗಾವಿ:ಸಿಎಂ ಕುಮಾರಸ್ವಾಮಿ ಯಿಂದ ಅಹಂಕಾರದ ಮಾತು : ಶಾಸಕ ನಡಹಳ್ಳಿ ಕಿಡಿ 

ಸಿಎಂ ಕುಮಾರಸ್ವಾಮಿ ಯಿಂದ ಅಹಂಕಾರದ ಮಾತು : ಶಾಸಕ ನಡಹಳ್ಳಿ ಕಿಡಿ

ಬೆಳಗಾವಿ ಜು 31 : ಚನ್ನಪಟ್ಟಣದ ಮತದಾರರಿಂದ ಚಪ್ಪಾಳೆ ಗಿಟ್ಟಿಸಲು ಸಿಎಂ ಕುಮಾರಸ್ವಾಮಿ ಅಹಂಕಾರದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಎ.ಎಸ ಪಾಟೀಲ್ ನಡಹಳ್ಳಿ ಹೇಳಿದರು
ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಮತ ಹಾಕಿಲ್ಲ. ಪ್ರತ್ಯೇಕ ರಾಜ್ಯ ಮಾಡಿಕೊಳ್ಳಿ ಎನ್ನುವ ಧಾಟಿಯಲ್ಲಿ ಸಿಎಂ ಮಾತನಾಡಿದ್ದಾರೆ. ಹೀಗಾಗಿಯೇ ಪ್ರತ್ಯೇಕ ರಾಜ್ಯದ ಕೂಗು ಹೆಚ್ಚಾಗಿದೆ. ಅನೇಕ ಬಾರಿ ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರದ ಚರ್ಚೆ ನಡೆದಿದೆ. ಆದರೆ ಈವರೆಗೂ ಯಾವುದೇ ಸೂಕ್ತ ಉತ್ತರ ಸಿಕ್ಕಿಲ್ಲ. ಇದು ಈ ಭಾಗದ ಜನರ ಆಕ್ರೋಶಕ್ಕೆ ಕಾರವಾಗಿದೆ ಎಂದರು. 

ನಾವು ಅಖಂಡ ಕರ್ನಾಟಕದ ಪರವಾಗಿದ್ದೇವೆ. ಅಭಿವೃದ್ಧಿ ಆಗದೆ ಹೋದಲ್ಲಿ ಜನರೇ ಪ್ರತ್ಯೇಕ ರಾಜ್ಯದ ಬಗ್ಗೆ ಕೇಳುತ್ತಾರೆ. ರಾಜಕೀಯವಾಗಿ ಹೆಚ್‍‍ಡಿಕೆ ಜತೆಗೆ ಗುರಿತಿಸಿಕೊಂಡಿದ್ದು ನಿಜ. ಆದರೆ ನನ್ನ ತಪ್ಪಿನ ಅರಿವಾದ ಬಳಿಕ ದೂರವಾಗಿದ್ದೇನೆ ಎಂದರು

Related posts: