RNI NO. KARKAN/2006/27779|Sunday, November 2, 2025
You are here: Home » breaking news » ಗೋಕಾಕ:ಗೋಕಾಕನಲ್ಲಿ ಮಕಮಲ್ ಟೋಪಿ ಹಾಕಿದ ಇಬ್ಬರು ನಕಲಿ ಅಬಕಾರಿ ಅಧಿಕಾರಿಗಳ ಬಂಧನ : ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು

ಗೋಕಾಕ:ಗೋಕಾಕನಲ್ಲಿ ಮಕಮಲ್ ಟೋಪಿ ಹಾಕಿದ ಇಬ್ಬರು ನಕಲಿ ಅಬಕಾರಿ ಅಧಿಕಾರಿಗಳ ಬಂಧನ : ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು 

ಗೋಕಾಕನಲ್ಲಿ ಮಕಮಲ್ ಟೋಪಿ ಹಾಕಿದ ಇಬ್ಬರು ನಕಲಿ ಅಬಕಾರಿ ಅಧಿಕಾರಿಗಳ ಬಂಧನ : ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು

 
ಗೋಕಾಕ ಜೂ 21 : ಅಬಕಾರಿ ಇಲಾಖೆಯ ಡಿಸಿ ಮತ್ತು ಪೊಲೀಸ ಅಧಿಕಾರಿ ಇರುವುದಾಗಿ ನಂಬಿಸಿ 3 ಲಕ್ಷ ರೂ ಹಣದ ಬೇಡಿಕೆ ಇಟ್ಟಿದ ಇಬ್ಬರು ನಕಲಿ ಅಧಿಕಾರಿಗಳನ್ನು ಬಂದಿಸಿದ ಘಟನೆ ಮಂಗಳವಾರ ದಂದು ಗೋಕಾಕಿನಲ್ಲಿ ನಡೆದಿದೆ

ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಪರಪ್ಪ ರೇವಪ ಖೇತಗೌಡರ ಮತ್ತು ಜಮಖಂಡಿ ತಾಲೂಕಿನ ರಬಕವಿಯ ರಾಜು ಶ್ರೀಕಾಂತ ಕುಂಬಾರ ಬಂಧಿತ ಆರೋಪಿಗಳು

ಓರ್ವ ಅಬಕಾರಿ ಡಿಸಿ ಹಾಗೂ ಇನೋರ್ವ ಪೊಲೀಸ ಅಧಿಕಾರಿ ಇರುವುದಾಗಿ ಹೇಳಿ ಗೋಕಾಕ ತಾಲೂಕಿನ ಉಪ್ಪಾರಟ್ಟಿ ಗ್ರಾಮದ ಫಕೀರಪ್ಪ ಶೇಷಪ್ಪ ನಾಯಿಕ ಎಂಬಾತನಿಗೆ 3 ಲಕ್ಷ ರೂ ಬೇಡಿಕೆ ಇಟ್ಟು 30 ಸಾವಿ ರೂ ಮುಂಗಡವಾಗಿ ಪಡೆದಿದ್ದಾರೆ

ಘಟನೆ ವಿವರ:
ಫಕೀರಪ್ಪ ಶೇಷಪ್ಪ ನಾಯಿಕ ಈತನು ಮನೆಯಲ್ಲಿ ಅಕ್ರವಾಗಿ ಸರಾಯಿ ಇಟ್ಟು ಮಾರಾಟ ಮಾಡುತ್ತಾನೆ ಎಂಬ ಆರೋಪ ಮುಂದಿಟ್ಟು ಕೇಸ ದಾಖಲಿಸುದಾಗಿ ಹೆದರಿಸಿ , ನಿನ್ನ ಜೀವನ ಹಾಳಾಗುತ್ತದೆ ಎಂದು ಹೇಳಿ 3 ಲಕ್ಷ ರೂ ನೀಡು ಎಂದು ನಂಬಿಸಿ ಆತನಿಂದ 30 ಸಾವಿರ ರೂ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ

ಆರೋಪಿಗಳ ಬಗ್ಗೆ ಅನುಮಾನ ಹೊಂದಿದ ಫಕೀರಪ್ಪ ಗೋಕಾಕ ಗ್ರಾಮೀಣ ಠಾಣೆಯಲ್ಲಿ ಫಿರ್ಯಾದಿ ನೀಡಿದ್ದಾನೆ . ಐಪಿಸಿ ಸೆಕ್ಷನ್ ಕಲಂ 417 , 419 , 420 ಸಹ ಕಲಂ 34 ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ಉನ್ನತಾಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆಗೆ ಕೈಗೊಂಡ ಗ್ರಾಮೀಣ ಠಾಣೆಯ ಎಎಸ್ಐ ಆರ.ಜಿ. ಕಮ್ಮಾರ ಸಿಬ್ಬಂದಿಗಳಾದ ಯು.ಎಸ್. ಶೆಟ್ಟನ್ನವರ , ಎ.ಎಸ್. ಬಡಿಗೇರ , ಗೋಣಿ , ಎಮ್. ಟಿ.ಬಳಿಗಾರ , ಬಿ.ಎಸ್. ಅಂತರಗಟ್ಟಿ , ವಿ.ಎಲ್. ನಾಯಿಕವಾಡಿ , ಪಿ.ಎಸ್. ಹೀರೆಹೋಳಿ , ಯು.ಡಿ.ಗಾಣಿಗ ಮಕಮಲ್ ಟೋಪಿ ಹಾಕಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾರುತಿ ರ್ಯಟಿಕಾ ಕಾರ ಮತ್ತು 30 ಸಾವಿರ ರೂ ನಗದು ವಶಪಡಿಸಿಕೊಂಡಿದ್ದಾರೆ

Related posts: