ಗೋಕಾಕ:ಸಂವಿಧಾನಿಕ ಮೌಲ್ಯ ಅತ್ಯಂತ ಹಿರಿಯದಾಗಿದೆ : ತಹಶೀಲ್ದಾರ ಡಾ.ಭಸ್ಮೆ

ಸಂವಿಧಾನಿಕ ಮೌಲ್ಯ ಅತ್ಯಂತ ಹಿರಿಯದಾಗಿದೆ : ತಹಶೀಲ್ದಾರ ಡಾ.ಭಸ್ಮೆ
ಗೋಕಾಕ ಜ 26 : ಭಾರತೀಯ ಸಂಪ್ರದಾಯದಲ್ಲಿ ಬಹಳಷ್ಟು ಮೌಲ್ಯಗಳಿವೆ ಅದರಲ್ಲಿ ಸಂವಿಧಾನಿಕ ಮೌಲ್ಯ ಅತ್ಯಂತ ಹಿರಿಯದಾಗಿದ್ದು ಅದನ್ನು ನಾವೆಲ್ಲರೂ ತಿಳಿಯಬೇಕಾಗಿದೆ ಎಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು.
ಸೋಮವಾರದಂದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ತಾಲೂಕು ಕ್ರೀಡಾಂಗಣದಲ್ಲಿತಾಲೂಕು ಆಡಳಿತ ಗೋಕಾಕ, ತಾಲೂಕು ಪಂಚಾಯತ್ ಗೋಕಾಕ ಹಾಗೂ ನಗರಸಭೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 77 ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಭಾರತ ದೇಶ ಗಣರಾಜ್ಯವಾಗುವಲ್ಲಿ ಸಂವಿಧಾನಿ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪಾತ್ರ ದೊಡ್ಡದಾಗಿದ್ದು, ಭಾರತೀಯರಾದ ನಾವು ಮೂಲಭೂತ ಹಕ್ಕುಗಳನ್ನು ಸರಿಯಾಗಿ ಪರಿಪಾಲನೆ ಮಾಡಬೇಕು. ಭಾರತೀಯ ಸಂಪ್ರದಾಯದಲ್ಲಿ ಮೌಲ್ಯಗಳಿಗೆ ಬಹಳ ಗೌರವಿದೆ.ಅದನ್ನು ನಾವು ಉಳಿಸಿಕೊಳ್ಳಬೇಕು ಅದರ ಜೊತೆಗೆ ನಮ್ಮ ಸುತ್ತಮುತ್ತಲಿನ ಇಡೀ ಪರಿಸರವನ್ನು ನಾವು ಉಳಿಸಬೇಕು. ಅಂದಾಗ ನಾವು ಎಲ್ಲಾ ಮೌಲ್ಯಗಳನ್ನು ಉಳಿಸದಂತಾಗುತ್ತದೆ ಆ ನಿಟ್ಟಿನಲ್ಲಿ ನಾವೆಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ,ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ವಿವಿಧ ಸ್ವರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಪೌರಾಯುಕ್ತ ರವಿ ರಂಗಸುಭೆ, ತಾಪಂ ಅಧಿಕಾರಿ ಪರಶುರಾಮ ಗಸ್ತೆ, ಡಿ.ವಾಯ್.ಎಸ್.ಪಿ ರವಿ ನಾಯಿಕ, ಸಿಪಿಐ ಸುರೇಬಬಾಬು , ಎಂ.ಎಂ.ನಧಾಪ, ಎಂ.ಎಚ್.ಗಜಾಕೋಶ, ಡಾ.ಎಂ.ಎಸ್.ಕೊಪ್ಪದ, ಎಂ.ಎಲ್ .ಜನ್ಮಟ್ಟಿ, ಹಿರಿಯ ನ್ಯಾಯವಾದಿ ಬಿ.ಆರ್.ಕೊಪ್ಪ, ಪಿಎಸ್ಐಗಳಾದ ಕಿರಣ ಮೋಹಿತೆ, ಕೆ.ವಾಲಿಕರ, ಎಸ್.ಪಿ.ವರಾಳೆ, ಪ್ರಮೀಳಾ ಬಿದರಿ, ಮುಖಂಡರುಗಳಾದ ಅಶೋಕ ಪೂಜಾರಿ, ಪ್ರಕಾಶ ಮುರಾರಿ, ಸೋಮಶೇಖರ್ ಮಗದುಮ್ಮ, ಕಿರಣ ಢಮಾಮಗರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
