ಗೋಕಾಕ:ಮಧ್ಯಾಹ್ನ ಬಿಸಿಯೂಟ ಅಡುಗೆ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಸೂಕ್ತ ಕ್ರಮ : ಶಾಸಕ ರಮೇಶ ಭರವಸೆ

ಮಧ್ಯಾಹ್ನ ಬಿಸಿಯೂಟ ಅಡುಗೆ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಸೂಕ್ತ ಕ್ರಮ : ಶಾಸಕ ರಮೇಶ ಭರವಸೆ
ಗೋಕಾಕ ಜ 25 : ಮಧ್ಯಾಹ್ನ ಬಿಸಿಯೂಟ ಅಡುಗೆ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಸರಕಾರದ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ರವಿವಾರದಂದು ನಗರದ ಶ್ರೀ ಲಕ್ಷ್ಮೀ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಬೆಳಗಾವಿ, ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಚಿಕ್ಕೋಡಿ, ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ (ಎಮ್.ಡಿ.ಎಮ್ ) ತಾಲೂಕು ಪಂಚಾಯತ್ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಅಡುಗೆ ಸಿಬ್ಬಂದಿ ತರಬೇತಿ ಕಾರ್ಯಾಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆ ಒಂದು ಮಹತ್ವದವಾದ ಇಲಾಖೆಯಾಗಿದ್ದು, ಗೋಕಾಕ ಮತಕ್ಷೇತ್ರದಲ್ಲಿ ಸರಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿ ಪಡೆಸಿದ ಹಾಗೆ ಶಿಕ್ಷಣ ಇಲಾಖೆಯನ್ನು ಅಭಿವೃದ್ಧಿ ಪಡೆಸುವ ಕಾರ್ಯಮಾಡಲಾಗುತ್ತಿದ್ದು, ಅದಕ್ಕೆ ಪೂರಕವಾಗಿ ಎಲ್ಲ ಶಿಕ್ಷಕ ಸಿಬ್ಬಂದಿ ಮತ್ತು ಅಧಿಕಾರಿಗಳು ಸಹಕಾರ ನೀಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಧ್ಯಾಹ್ನ ಬಿಸಿಯೂಟ ಅಡುಗೆ ಕಾರ್ಯ ಗೋಕಾಕ ಕ್ಷೇತ್ರದಲ್ಲಿ ಯಶಸ್ವಿಯಾಗಿ ಜರುಗುತ್ತಿದೆ. ಎಲ್ಲಾ ಅಡುಗೆ ಸಿಬ್ಬಂದಿಗಳು ಸೇವಾ ಮನೋಭಾವದಿಂದ ಕಾರ್ಯ ಮಾಡುತ್ತಿರುವುದು ಇಡಿ ರಾಜ್ಯಕ್ಕೆ ಮಾದರಿಯಾಗಿದೆ
ರಾಜ್ಯದ ಗಮನ ಸೆಳೆಯುವ ಹಾಗೆ ಗೋಕಾಕ ಕ್ಷೇತ್ರದ ಬಿಸಿಯೂಟ ಅಡುಗೆ ಸಿಬ್ಬಂದಿಗಳು ರೂಪುಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.
ಗೋಕಾಕ ಮತಕ್ಷೇತ್ರದ ಪ್ರತಿಯೊಂದು ಅಭಿವೃದ್ಧಿ ಕಾರ್ಯ ಸರಕಾರ ಮಟ್ಟದಲ್ಲಿ ಮಾಡುಲಾಗುತ್ತಿದೆ ಅದರಲ್ಲಿ ಕೆಲ ಕೆಲಸಗಳು ಸ್ವಲ್ಪ ವಿಳಂಬವಾದರೆ ಕೆಲವು ಬೇಗ ಆಗುತ್ತಿವೆ. ಒಟ್ಟಾರೆ ಕ್ಷೇತ್ರವನ್ನು ಪಕ್ಷಾತೀತವಾಗಿ ಅಭಿವೃದ್ಧಿ ಪಡೆಸುವಕಾರ್ಯ ಮಾಡಲಾಗುತ್ತಿದೆ ಎಂದ ಅವರು ಅಡುಗೆ ಸಿಬ್ಬಂದಿಗಳ ವೇಚನ ಹೆಚ್ಚಳಕ್ಕೆ ಸರಕಾರದ ಗಮನ ಹರಿಸಲಾಗುವುದು. ಎಲ್ಲಾ ಅಡುಗೆ ಸಿಬ್ಬಂದಿಗಳು ನೀರಿನ ಟ್ಯಾಂಕ್ ಗಳನ್ನು , ತರಕಾರಿಗಳ ಬಗ್ಗೆ ಸ್ವಚ್ಚತೆ ಕಾಪಾಡಿ ಗುಣಾತ್ಮಕ ಕಾರ್ಯಮಾಡಿ ರಾಜ್ಯಕ್ಕೆ ಮಾದರಿಯಾಗುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಗ್ನಿಶಾಮಕ ದಳ ಮತ್ತು ಮಲ್ಲಿಕಾರ್ಜುನ ಗ್ಯಾಸ್ ಅವರಿಂದ ಅಡುಗೆ ಸಿಬ್ಬಂದಿಗಳು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ತರಬೇತಿಯನ್ನು ನೀಡಲಾಗಿತ್ತು.
ಈ ಸಂದರ್ಭದಲ್ಲಿ ತಹಶೀಲ್ದಾರ ಡಾ.ಮೋಹನ ಭಸ್ಮೆ, ಜಿಪಂ ಮಾಜಿ ಸದಸ್ಯರುಗಳಾದ ಟಿ.ಆರ್.ಕಾಗಲ್, ಮಡೆಪ್ಟ ತೊಳಿನವರ, ತಾಪಂ ಅಧಿಕಾರಿ ಪರಶುರಾಮ ಗಸ್ತೆ, ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ಮಧ್ಯಾಹ್ನ ಬಿಸಿಯೂಟ ಅಧಿಕಾರಿ ಅಶೋಕ ಮಲಬನ್ನವರ, ಎಂ.ಡಿ.ಚುನಮರಿ, ಶಿಕ್ಷಕ ಸಂಘದ ಅಧ್ಯಕ್ಷ ಎಸ್.ಎಂ.ಲೋಕನ್ನವರ, ಎಸ್.ಎ.ನಾಯಿಕ, ವಿನಾಯಕ ಮಾಳಿ, ಶ್ರೀಮತಿ ಭಾಗೆನ್ನವರ, ಜಿ.ಆರ್.ಸನದಿ, ಎಲ್.ಕೆ.ತೋರಣಗಟ್ಟಿ, ಭಾಗಾಯಿಗೋಳ, ಬಿ.ಎನ್.ಶಿಂಗಾಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
