ಗೋಕಾಕ:ಇನರವ್ಹೀಲ್ ಸಂಸ್ಥೆ ಜಗತ್ತಿನ ಮೂರನೇ ಬೃಹತ್ ಸಾಮಾಜಿಕ ಸಂಸ್ಥೆಯಾಗಿ ಹೊರಹೊಮ್ಮಿದೆ : ಡಾ. ಜ್ಯೋತಿ ಪಾಟೀಲ
ಇನರವ್ಹೀಲ್ ಸಂಸ್ಥೆ ಜಗತ್ತಿನ ಮೂರನೇ ಬೃಹತ್ ಸಾಮಾಜಿಕ ಸಂಸ್ಥೆಯಾಗಿ ಹೊರಹೊಮ್ಮಿದೆ : ಡಾ. ಜ್ಯೋತಿ ಪಾಟೀಲ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 21 :
ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಮಾಡುತ್ತಾ ಇನರವ್ಹೀಲ್ ಸಂಸ್ಥೆ ಜಗತ್ತಿನ ಮೂರನೇ ಬೃಹತ್ ಸಾಮಾಜಿಕ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಇನರವ್ಹೀಲ್ ಸಂಸ್ಥೆಯ ಜಿಲ್ಲಾ ಚೇರಮನ್ ಡಾ. ಜ್ಯೋತಿ ಪಾಟೀಲ ಹೇಳಿದರು.
ಸೋಮವಾರದಂದು ನಗರದ ರೋಟರಿ ರಕ್ತ ಭಂಡಾರದಲ್ಲಿ ಇನರವ್ಹೀಲ್ ಸಂಸ್ಥೆಯವರು ಆಯೋಜಿಸಿದ್ದ ಸಾಧಕರ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಶಿಕ್ಷಣ , ಆರೋಗ್ಯ , ಸ್ವಯಂ ಉದ್ಯೋಗ ಸೇರಿದಂತೆ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಸಮಾಜದ ಅಭಿವೃದ್ಧಿಗೆ ಸಂಸ್ಥೆ ಶ್ರಮಿಸುತ್ತಿದೆ. ಇಲ್ಲಿನ ಸಂಸ್ಥೆಯವರು ಅನೇಕ ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುತ್ತಾ ಜನರಿಗೆ ಸಹಾಯ ಮಾಡುತ್ತಿರುವುದನ್ನು ಶ್ಲಾಘಿಸಿದ ಅವರು ಇನ್ನೂ ಹೆಚ್ಚಿನ ಕಾರ್ಯಗಳು ಈ ಸಂಸ್ಥೆಯಿಂದ ಸಾಮಾಜಿಕ್ಕೆ ದೊರೆಯಲೆಂದು ಆಶಿಸಿದರು.
ಇದೇ ಸಂದರ್ಭದಲ್ಲಿ ವೀರ ಮರಣ ಹೊಂದಿದ ನಗರದ ಯೋಧ ಉಮೇಶ ಹೆಳವರ ಅವರ ತಾಯಿ, ವಿಕಲಚೇತನಯಾದರು ಸ್ವಾಭಿಮಾನದಿಂದ ಬದುಕುತ್ತಿರುವ ಸುನಂದಾ ದುರದುಂಡಿ ಹಾಗೂ ಇನರವ್ಹೀಲ್ ಸಂಸ್ಥೆಯ ಹಿಂದಿನ ಅಧ್ಯಕ್ಷರುಗಳನ್ನು ಸತ್ಕರಿಸಲಾಯಿತು.
ವೇದಿಕೆಯ ಮೇಲೆ ಇನರವ್ಹೀಲ್ ಸಂಸ್ಥೆಯ ಅಧ್ಯಕ್ಷೆ ರೂಪಾ ಮುನವಳ್ಳಿ, ಕಾರ್ಯದರ್ಶಿ ಜ್ಯೋತಿ ವರದಾಯಿ, ಪದಾಧಿಕಾರಿಗಳಾದ ಜಯಾ ಕಮತ, ಅನುಸೂಯಾ ದೂಳಾಯಿ, ವಿದ್ಯಾ ಮಗದುಮ್ಮ, ಸೀತಾ ಬೆಳಗಾವಿ ಇದ್ದರು.
ಕಾರ್ಯಕ್ರಮವನ್ನು ಆರತಿ ನಾಡಗೌಡ ಸ್ವಾಗತಿಸಿ , ವಂದಿಸಿದರು