ಗೋಕಾಕ:ಶ್ರೀ ಗುರುಸಿದ್ಧೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಿಶ್ವ ಯೋಗ ದಿನ ಆಚರಣೆ

ಶ್ರೀ ಗುರುಸಿದ್ಧೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಿಶ್ವ ಯೋಗ ದಿನ ಆಚರಣೆ
ಗೋಕಾಕ ಜೂ, 23 :- ಇಲ್ಲಿಗೆ ಸಮೀಪದ ಮರಡೀಮಠದ ಶ್ರೀ ಗುರುಸಿದ್ಧೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದಲ್ಲಿ ಎನ್.ಸಿ.ಸಿ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆಯನ್ನು ಗುರುವಾರದಂದು ಬೆಳಿಗ್ಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಯೋಗ ತರಬೇತುದಾರ ಬಸವರಾಜ ಕುರಬೇಟ ಅವರು ಮಾತನಾಡಿ, ಯೋಗ ಮತ್ತು ಪ್ರಾಣಾಯಾಮಗಳಲ್ಲಿ ಅದ್ಭುತವಾದ ಶಕ್ತಿ ಇದೆ. ಯೋಗವು ಭಾರತ ದೇಶವು ವಿಶ್ವಕ್ಕೆ ನೀಡಿದ ಅತ್ಯಮೂಲ್ಯವಾದ ಕೊಡುಗೆಯಾಗಿದ್ದು, ಮಾನವನ ಆರೋಗ್ಯದ ಜೊತೆಗೆ ಆಂತರಿಕ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲರಾದ ಕುಮಾರಿ ಆರ್.ವಾಯ್.ಮೇಗೇರಿ ಅವರು ವಹಿಸಿದ್ದರು. ನೇತೃತ್ವವನ್ನು ಪ್ರಭಾರಿ ಎನ್.ಎಸ್.ಸಿ. ಆಫೀಸರ್ ಸಚೀನ ಆರ್.ಪಾಟೀಲ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಕೊಣ್ಣೂರ ಪುರಸಭೆಯ ಮಾಜಿ ಸದಸ್ಯೆ ಕವಿತಾ ಪಾಟೀಲ, ಸಹಶಿಕ್ಷಕ ಪಿ.ಎಲ್.ಬಡೇಸ್, ಶ್ರೀ ಕಾಡಸಿದ್ಧೇಶ್ವರ ಶಿಕ್ಷಣ ಸಂಮಿತಿ ಅಧ್ಯಕ್ಷರು, ಚೇರಮನ್ನರು, ನಿರ್ದೇಶಕ ಮಂಡಳಿಯವರು, ಹಾಗೂ ಮರಡೀಮಠದ ಶ್ರೀ ಗುರುಸಿದ್ಧೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಮತ್ತು ಪ್ರೌಢಶಾಲಾ ವಿಭಾಗದ ಸರ್ವ ಸಿಬ್ಬಂದಿಯವರು ಸೇರಿದಂತೆ ಅನೇಕರು ಇದ್ದರು.