RNI NO. KARKAN/2006/27779|Monday, June 16, 2025
You are here: Home » breaking news » ಘಟಪ್ರಭಾ:ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸಿಗುವಂತೆ ಸರಕಾರ ಕ್ರಮ ಜರುಗಿಸಲಿ : ಕೂಲಿ ಕಾರ್ಮಿಕರ ಆಗ್ರಹ

ಘಟಪ್ರಭಾ:ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸಿಗುವಂತೆ ಸರಕಾರ ಕ್ರಮ ಜರುಗಿಸಲಿ : ಕೂಲಿ ಕಾರ್ಮಿಕರ ಆಗ್ರಹ 

ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸಿಗುವಂತೆ ಸರಕಾರ ಕ್ರಮ ಜರುಗಿಸಲಿ : ಕೂಲಿ ಕಾರ್ಮಿಕರ ಆಗ್ರಹ

 

ಘಟಪ್ರಭಾ ಮೇ 29: ಕಾರ್ಮಿಕರು ಕೆಲಸ ವರಸಿ ಬೇರೆ ರಾಜ್ಯಗಳಿಗೆ ಗುಳೆ ಹೋಗುವುದನ್ನು ತಡೆಯಲು ಸರಕಾರ ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಜನರಿಗೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಸಮತಾ ಸೈನಿಕ ದಳದ ತಾಲೂಕಾಧ್ಯಕ್ಷ ಅರ್ಜುನ ಗಂಡವ್ವಗೋಳ ಆಗ್ರಹಿಸಿದ್ದಾರೆ
ಸೋಮವಾರ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದ ಮೃತ್ಯುಂಜಯ ವೃತ್ತದಲ್ಲಿ ಸಮತಾ ಸೈನಿಕ ದಳ ಹಾಗೂ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮನೆಗಳನ್ನು ನಿರ್ಮಿಸಲು ಪ್ರತಿಯೊಬ್ಬರಿಗೆ ಮರಳು ಅತ್ಯಂತ ಅವಶ್ಯಕವಾಗಿದೆ. ಕಳೆದು ಎರಡು ತಿಂಗಳಿಂದ ಮರಳು ಸರಬರಾಜು ಸ್ಥಗಿತಗೊಂಡಿದೆ. ಮರಳಿನ ಕೊರತೆಯಿಂದ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ತೀರಾ ತೊಂದರೆಯಾಗಿ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮನೆ ಕಟ್ಟುವ ಉದ್ಯೋಗವನ್ನೇ ನಂಬಿರುವವರು ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ ಎಂದರು.

ಜಿಲ್ಲಾಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಂಡು ಮರಳು ಸಾಮಾನ್ಯ ಜನರ ಕೈಗೆಟಕುವ ದರದಲ್ಲಿ ಸಿಗುವ ವ್ಯವಸ್ಥೆ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು

Related posts: