RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ: ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ : ಇಫ್ತಯಾರ್ ಕಿಟ್ ವಿತರಿಸಿದ ನಗರಸಭೆ ಸದಸ್ಯ ಎಸ ಎ ಕೋತವಾಲ

ಗೋಕಾಕ: ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ : ಇಫ್ತಯಾರ್ ಕಿಟ್ ವಿತರಿಸಿದ ನಗರಸಭೆ ಸದಸ್ಯ ಎಸ ಎ ಕೋತವಾಲ 

ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ : ಇಫ್ತಯಾರ್ ಕಿಟ್ ವಿತರಿಸಿದ ನಗರಸಭೆ  ಸದಸ್ಯ ಎಸ ಎ ಕೋತವಾಲ

ಗೋಕಾಕ ಮೇ 28: ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ ಎಂದು ಮಾಜಿ ನಗರಾಧ್ಯಕ್ಷ ಎಸ್ .ಎ.ಕೋತವಾಲ ಹೇಳಿದರು

‌ಇಲ್ಲಿಯ ಪಾಪುಲರ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ನಗರದ ಫನಿಬಂದ ಮಸ್ಜಿದನಲ್ಲಿ ಪವಿತ್ರ ರಂಜಾನ್ ಮಾಸದ ನಿಮಿತ್ತ ಕಡು ಬಡವರಿಗೆ ಆಹಾರ ಧಾನ್ಯದ ಇಫ್ತಯಾರ ಕಿಟ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಧಾರ್ಮಿಕ ಜ್ಞಾನ ನೀಡುವುದರ ಜೊತೆಗೆ ಪಾಲಕರು ತಮ್ಮ ಮಕ್ಕಳನ್ನು ಜವಾಬ್ದಾರಿಯಿಂದ ಶಾಲೆಗಳಿಗೆ ಕಳುಹಿಸಿ ಶಿಕ್ಷಣ ಕೊಡಿಸುವಲ್ಲಿ ಮುತುವರ್ಜಿ ವಹಿಸಬೇಕು ಅಂದಾಗ ಮಾತ್ರ ಮುಸ್ಲಿಂ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕೋತವಾಲ ಹೇಳಿದರು.

ಇದೇ ಸಂದರ್ಭದಲ್ಲಿ ನಗರದ ಸುಮಾರು 50 ಕಡು ಬಡವ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು

ಕಾರ್ಯಕ್ರಮದಲ್ಲಿ ಹಿರಿಯರಾದ ಮೋಹಸಿನ ಖೋಜಾ , ಇಲ್ಲಾಹಿ ಖೈರದಿ , ಹಾಜಿ ಗಫಾರ , ಮಲೀಕ ಪೈಲವಾನ , ನಗರಸಭೆ ಸದಸ್ಯ ಬಾಬು ಶೇಖಬಡೆ, ಸಂಘದ ಅಧ್ಯಕ್ಷ ಆಸೀಫ್ ಫನಿಬಂದ ,ಮೈನೋದ್ದಿನ ಪೀರಜಾದೆ, ದಾದಾಪೀರ ಇಮಾರತವಾಲೆ , ಶಾನೂಲ ಸೌದಾಗರ, ಇರಫಾನ ಕಾಗಜಿ , ಹಫೀಜ್ ಘೋಡಗೇರಿ, ಅಫಜಲ್ ಪಠಾಣ , ಇಮ್ರಾನ ಶೇಖ , ಫಯಾಜ ತರಾಸಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: