ಗೋಕಾಕ:ಕನ್ನಡ ನಾಡು, ನುಡಿ, ಕನ್ನಡಿಗರ ಅಪಮಾನವಾದರೇ ನಾನು ಯಾವುದೇ ತ್ಯಾಗಕ್ಕೂ ಸಿದ್ಧ : ಶಾಸಕ ರಮೇಶ ಜಾರಕಿಹೊಳಿ
ಕನ್ನಡ ನಾಡು, ನುಡಿ, ಕನ್ನಡಿಗರ ಅಪಮಾನವಾದರೇ ನಾನು ಯಾವುದೇ ತ್ಯಾಗಕ್ಕೂ ಸಿದ್ಧ : ಶಾಸಕ ರಮೇಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 1 :
ಕನ್ನಡ ನಾಡು, ನುಡಿ, ಕನ್ನಡಿಗರ ಅಪಮಾನವಾದರೇ ನಾನು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು
ಬುಧವಾರದಂದು ಸಂಜೆ ನಗರದ ಸೋಮವಾರ ಪೇಠಯ ಮುಪ್ಪಯ್ಯನ ಮಠದಲ್ಲಿ ಕಪರಟ್ಟಿ-ಕಳ್ಳಿಗುದ್ದಿ ಮಠದ ಪವಾಡ ಪುರುಷ ಲಿಂ ಗುರು ಮಹಾದೇವ ಅಜ್ಜನವರ ಜಯಂತಿ ಉತ್ಸವ ಹಾಗೂ ನಮಸ್ಕಾರ ಸಾಂಸ್ಕøತಿಕ ಕಲಾ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡ 16ನೇ ಕನ್ನಡ ಜಾತ್ರೆಯ ಹಾಗೂ ಕನ್ನಡ ಜ್ಯೋತಿ ಹಾಗೂ ಕಾಯಕ ಯೋಗಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪಾಲ್ಗೊಂಡು ಅವರು ಮಾತನಾಡಿದರು
ನಾನು ಕನ್ನಡ ವಿರೋಧಿಯಲ್ಲ, ನಮ್ಮ ನಾಡು ಹಾಗೂ ಕನ್ನಡಪರ ಪರ ಸಂಘಟನೆಗಳ ಬಗ್ಗೆ ಅಪಾರವಾದ ಗೌರವವಿದೆ. ನಾನು ಬೆಳಗಾವಿಯಲ್ಲಿ ಹೇಳಿದ ಹೇಳಿಕೆಯನ್ನು ತಿರುಚಲಾಗಿದ್ದು, ನನ್ನನು ಭಾಷಾ ವಿರೋಧಿಯಾಗಿ ಬಿಂಬಿಸಲು ವ್ಯವಸ್ಥಿತ ಪಿತೂರಿಯನ್ನು ಮಾಡಲಾಗಿದ್ದು ಮಾಡಿದವರ ವಿರುದ್ಧ ಶೀಘ್ರದಲ್ಲಿ ಕಾನೂನು ಹೋರಾಟ ನಡೆಸಲಾಗುವುದು. ರಾಜ್ಯದ ಹಿತವನ್ನು ನಾನು ಬದ್ಧನಾಗಿದ್ದು, ಕನ್ನಡ ಪರ ಹೋರಾಟಕ್ಕೆ ಸದಾ ನನ್ನ ಬೆಂಬಲವಿದೆ. ಕರ್ನಾಟಕದ ಒಂದು ಇಂಚು ಜಾಗವನ್ನು ಮಹಾರಾಷ್ಟ್ರಕ್ಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ಕನ್ನಡ ಜ್ಯೋತಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರು ಕನ್ನಡ ನಾಡು ನುಡಿ ವಿಷಯ ಬಂದಾಗ ಬೆಳಗಾವಿ ಜಿಲ್ಲೆಯ ಎಲ್ಲ ಸಂಸದರು, ಶಾಸಕರು, ಜನಪ್ರತಿನಿಧಿಗಳು ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು ಬೆಳಗಾವಿ ಗಡಿ ಸಮಸ್ಯೆಗೆ ನಾಡು ನುಡಿಯ ಬಗ್ಗೆ ಕಾಳಜಿ ಇರುವ ಜನಪ್ರತಿನಿಧಿಯನ್ನು ಗಡಿ ಉಸ್ತುವಾರಿಯನ್ನು ನೇಮಿಸುವಂತೆ ಒತ್ತಾಯಿಸಲಾಗುವದು ಎಂದು ಹೇಳಿದರು.
ಠಾಕ್ರೆಯಂತಹ ನೂರಾರು ಠಾಕ್ರೆಗಳು ಹುಟ್ಟಿ ಬಂದರೂ ಬೆಳಗಾವಿ ಜಿಲ್ಲೆಯ ಒಂದಿಂಚು ಜಾಗವನ್ನು ಕಬಳಿಸಲು ಸಾಧ್ಯವಿಲ್ಲ, ಠಾಕ್ರೆಯನ್ನು ಕರ್ನಾಟಕದಲ್ಲಿ ಘರ್ಜಿಸಲು ಬಿಡುವುದಿಲ್ಲ, ಉದ್ಧಟತನದ ಮಾತುಗಳನ್ನಾಡುವ ಉದ್ಬವ ಠಾಕ್ರೆ, ಮುಖ್ಯಮಂತ್ರಿಯಾಗಿದ್ರೂ ಸಂವಿಧಾನ ಹಾಗೂ ಕಾನೂನಿನ ಅರಿವಿಲ್ಲ, ಮುಖ್ಯಮಂತ್ರಿಯಾಗುವುದಕ್ಕೆ ನಾಲಾಯಕ್ಕ ಎಂದು ಕಿಡಿಕಾರಿದರು.
ವಿಚಿತ್ರವಾಗಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಆರೋಪವನ್ನು ಹೊತ್ತಿರುವ ಶಾಸಕ ರಮೇಶ ಜಾರಕಿಹೊಳಿ ಅವರು ಈ ವೇದಿಕೆಯಲ್ಲಿ ತಮ್ಮ ಹೇಳಿಕೆಯನ್ನು ನೀಡಿದ್ದು ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನನ್ನಿಂದ ಕನ್ನಡಕ್ಕೆ ಅಪಮಾನವಾದರೇ ಒಂದು ಕ್ಷಣ ಕೂಡಾ ಶಾಸಕ ಸ್ಥಾನದಲ್ಲಿ ಇರುವದಿಲ್ಲ ಎಂದು ಸೃಷ್ಟ ಪಡಿಸಿದ್ದರಿಂದ ಈ ವಿಷಯದ ಕುರಿತು ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ನಾರಾಯಣ ಗೌಡರು ವಿವಾದಕ್ಕ ತೆರೆ ಎಳೆದರು.
ಇದೇ ಸಂದರ್ಭದಲ್ಲಿ ಆಂದ್ರ ಪ್ರದೇಶದ ಚರಣಗಿರಿ ಸಂಸ್ಥಾನ ಮಠದ ಶ್ರೀ ಅಭಿನವ ಮಹಾಂತ ಮಹಾಸ್ವಾಮಿಗಳಿಗೆ ಕಾಯಕಯೋಗಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಹುಕ್ಕೇರಿಯ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಮುಪ್ಪಯ್ಯನ ಮಠದ ಶ್ರೀ ರಾಚೂಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಬಟಕುರ್ಕಿಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಕಪರಟ್ಟಿ-ಕಳ್ಳಿಗುದ್ದಿಯ ಬಸವರಾಜ ಸ್ವಾಮಿಗಳು, ಬಸವರಾಜ ಖಾನಪ್ಪನವರ, ರಜನಿ ಜೀರಗ್ಯಾಳ, ಮಹಾದೇವ ತಳವಾರ ಜಯಾನಂದ ಮಾದರ, ರಾಜೇಶ್ವರಿ ಹಿರೇಮಠ, ಮಹಾಂತೇಶ ತಾವಂಶಿ, ರಾಮಣ್ಣ ಮಹಾರೆಡ್ಡಿ, ಮಲ್ಲಿಕಾರ್ಜುನ ಈಟಿ, ಈಶ್ವರ ಭಾಗೋಜಿ, ಆನಂದ ಗೋಟಡಕಿ ಸೇರಿದಂತೆ ಅನೇಕರು ವೇದಿಕೆ ಮೇಲೆ ಇದ್ದರು.