ಗೋಕಾಕ:ಯಾರ ಕೋರಳಿಗೆ ಗೆಲುವಿನ ಮಾಲೆ : ಗೋಕಾಕದಲ್ಲಿ ಜೋರಾಗಿ ಶುರುವಾಗಿದೆ ಲೆಕ್ಕಾಚಾರ

ಯಾರ ಕೋರಳಿಗೆ ಗೆಲುವಿನ ಮಾಲೆ : ಗೋಕಾಕದಲ್ಲಿ ಜೋರಾಗಿ ಶುರುವಾಗಿದೆ ಲೆಕ್ಕಾಚಾರ
ವಿಶೇಷ ವರದಿ :
ಗೋಕಾಕ ಮೇ 14 : ಎರೆಡು ದಿನಗಳ ಹಿಂದಷ್ಟೆ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆದಿದ್ದು, ಇದೀಗ ತೀವ್ರ ಜಿದ್ದಾ ಜಿದ್ದಿನ ಸ್ಪರ್ಧೆ ನಡೆದಿದೆ ಎನ್ನಲಾಗುತ್ತಿರುವ ಗೋಕಾಕ ಮತಕ್ಷೇತ್ರದಲ್ಲಿ ಗೆಲುವಿನ ಲೆಕ್ಕಾಚಾರಗಳು ಜೋರಾಗಿಯೇ ನಡೆದಿವೆ
ಕಳೆದ ನಾಲ್ಕು ಅವಧಿಗಳಿಂದ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಹಿಡಿತವನ್ನು ಸಾಧಿಸಿರುವ ಸಚಿವ ರಮೇಶ ಜಾರಕಿಹೊಳಿ ಐದನೇಯ ಬಾರಿ ವಿಧಾನಸಭೆ ಪ್ರವೇಶಿಸುವ ವಿಸ್ವಾದಲ್ಲಿದ್ದರೇ ಸಚಿವರಿಗೆ ಪ್ರಬಲ ಪೈಪೋಟಿ ನೀಡಿ ಈ ಬಾರಿ ಬಿಜೆಪಿಯಿಂದ ಸತತ ಮೂರನೇಯ ಬಾರಿ ಸಚಿವರ ವಿರುಧ್ಧ ಚುನಾವಣೆಗೆ ಸ್ವರ್ಧಿಸುತ್ತಿರುವ ಅಶೋಕ ಪೂಜಾರಿ ಅವರು ತಮ್ಮ ಗೆಲುವ ನಿಚ್ಚಿತ ಎಂದು ಆತ್ಮವಿಶ್ವಾಸದಲ್ಲಿದ್ದಾರೆ . ಇದ್ದೆಲ್ಲದರ ಮಧ್ಯೆ ಮತದಾರ ಪ್ರಭು ಯಾರಿಗೆ ಅಧಿಕಾರದ ಗದ್ದುಗೆ ನೀಡಿದ್ದಾರೆ ಎಂಬ ರಹಸ್ಯಕ್ಕೆ ನಾಳೆಯವರೆಗೆ ಕಾಯಬೇಕಷ್ಷೆ .
ಗೋಕಾಕ ಮತಕ್ಷೇತ್ರದಲ್ಲಿ 2013 ರ ಚುನಾವಣೆಗಿಂತ ಶೇಕಡಾ 1% ಪ್ರತಿಶತ ಮತದಾನ ಕಡಿಮೆಯಾಗಿದ್ದು , ಈ ಬಾರಿ ಶೇಕಡಾ 71.79 % ಪ್ರತಿಶತ ಮತದಾನವಾಗಿದೆ. 2,41,179 ಮತದಾರರ ಪೈಕಿ ಒಟ್ಟು 1,69,706 ಮತದಾರರು ಮತಗಟ್ಟೆಗಳಿಗೆ ಬಂದು ತಮ್ಮ ವೋಟನ್ನು ಚಲಾಯಿಸಿದ್ದಾರೆ
ನೇರಾನೇರ ಸ್ವರ್ಧೆಯೊಡ್ಡಿರುವ ಇಬ್ಬರು ಅಭ್ಯರ್ಥಿಯರು ರಿಲ್ಯಾಕ್ಸ್ ಮೂಡನಲ್ಲಿದ್ದರೆ ಅವರ ಕಾರ್ಯಕರ್ತರು , ಆಪ್ತರು ಗೆಲ್ಲುವಿನ ಲೆಕ್ಕಾಚಾರದಲ್ಲಿದ್ದು , ಬಿಜೆಪಿಯ ಅಶೋಕ ಪೂಜಾರಿ ಈ ಸಾರಿ ಸುಮಾರು 15 ಸಾವಿರ ಮತಗಳ ಅಂತರದಿಂದ ಗೆಲ್ಲುವನ್ನು ಸಾಧಿಸಲಿದ್ದಾರೆ ಎಂಬ ಲೆಕ್ಕಾಚಾರದಲ್ಲಿದ್ದರೆ ಇತ್ತ ಸಚಿವ ರಮೇಶ ಜಾರಕಿಹೊಳಿ ಅವರ ಆಪ್ತ ಮತ್ತು ಕಾರ್ಯಕರ್ತರು ಸತತವಾಗಿ ಐದನೇ ಗೆಲ್ಲುವು ನಮ್ಮದೇ , ಸುಮಾರು 40 ಸಾವಿರಕ್ಕೂ ಅಧಿಕ ಮತಗಳಿಂದ ಸಚಿವರು ಗೆಲುವು ಸಾಧಿಸಲಿದ್ದಾರೆ ಎಂಬ ಆತ್ಮವಿಸ್ವಾಸ ವ್ಯಕ್ತಪಡಿಸುತ್ತಿದ್ದಾರೆ .
ಬೆಟ್ಟಿಂಗ್ ವಲಯದಲ್ಲಿ ಕೈ ಪಕ್ಷವೇ ಫೇವರಿಟ್ :
ಬೆಟ್ಟಿಂಗ್ ವಲಯದಲ್ಲಿಯೂ ಸಹ ಈ ಇಬ್ಬರ ನಡುವೆ ತೀವ್ರ ಸ್ವರ್ಧೆ ನಡೆದ್ದಿದು , ಸಚಿವ ರಮೇಶ ಜಾರಕಿಹೊಳಿ ಫೇವರಿಟ್ ವಾಗಿದ್ದು , ಅವರ ಮೇಲೆ 1:2.40 ಬೆಟ್ಟ ನಡೆದರೆ ಬಿಜೆಪಿಯ ಅಶೋಕ ಪೂಜಾರಿ ಅವರ ಮೇಲೆ 2. 20 ರೀತಿಯ ಬೆಟ್ಟಿಂಗ್ ನಡೆದಿದೆ ಎಂದು ತಿಳಿದು ಬಂದಿದೆ
ಒಟ್ಟಾರೆ ಗೋಕಾಕ ಮತಕ್ಷೇತ್ರ ಈ ಬಾರಿ ಭಾರಿ ಸುದ್ದಿಯಲ್ಲಿದ್ದು ಹಲವಾರು ಗಾಳಿ ಸುದ್ದಿಗಳು ಮತಕ್ಷೇತ್ರದ್ಯಂತ ಹರದಾಡುತ್ತಿವೆ ಆದರೆ ಈ ಎಲ್ಲ ಗಾಳಿ ಮಾತುಗಳಿಗೆ ಮತದಾರ ಪ್ರಭು ತನ್ನ ಮೂದ್ರೆ ಒತ್ತಿದ್ದು , ನಾಳೆ ಮಧ್ಯಾಹ್ನ 1 ರ ಒಳಗೆ ಮತದಾರ ಪ್ರಭು ಗೋಕಾಕ ಕ್ಷೇತ್ರದ ಗೆಲುವಿನ ಮಾಲೆ ಯಾರ ಕೋರಳಿಗೆ ಹಾಕಲಿದ್ದಾನೆ ಎಂಬ ಪ್ರಭಲ ಸತ್ಯ ಇಡಿ ರಾಜ್ಯಕ್ಕೆ ತಿಳಿಯಲಿದೆ .