RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಹೆಚ್ಚಿನ ಅಭಿವೃದ್ಧಿಗಾಗಿ ಈ ಬಾರಿಯೂ ಕಾಂಗ್ರೆಸ ಪಕ್ಷವನ್ನು ಬೆಂಬಲಿಸಿ : ಸಚಿವ ರಮೇಶ

ಗೋಕಾಕ:ಹೆಚ್ಚಿನ ಅಭಿವೃದ್ಧಿಗಾಗಿ ಈ ಬಾರಿಯೂ ಕಾಂಗ್ರೆಸ ಪಕ್ಷವನ್ನು ಬೆಂಬಲಿಸಿ : ಸಚಿವ ರಮೇಶ 

ಅಂಕಲಗಿ ಗ್ರಾಮದಲ್ಲಿ ರೋಡ ಶೋ ನಡೆಸಿ ಕಾಂಗ್ರೆಸ ಅಭ್ಯರ್ಥಿ ರಮೇಶ ಜಾರಕಿಹೊಳಿ ಮತ ಯಾಚಿಸಿದರು

ಹೆಚ್ಚಿನ ಅಭಿವೃದ್ಧಿಗಾಗಿ ಈ ಬಾರಿಯೂ ಕಾಂಗ್ರೆಸ ಪಕ್ಷವನ್ನು ಬೆಂಬಲಿಸಿ : ಸಚಿವ ರಮೇಶ 

ಗೋಕಾಕ ಮೇ 8 : ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ ಸರಕಾರ ಕಳೆದ ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿದ್ದು ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಈ ಬಾರಿಯೂ ಕಾಂಗ್ರೆಸ ಪಕ್ಷವನ್ನು ಬೆಂಬಲಿಸಬೇಕೆಂದು ಸಚಿವ ಹಾಗೂ ಕಾಂಗ್ರೆಸ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದರು.
ಅವರು ಮಂಗಳವಾರದಂದು ಸಂಜೆ ಕುಂದರನಾಡಿನ ಪ್ರಮುಖ ಗ್ರಾಮವಾದ ಅಂಕಲಗಿಯಲ್ಲಿ ರೋಡ ಶೋ ನಡೆಸಿ ಮತಯಾಚನೆ ಮಾಡುತ್ತ ಮಾತನಾಡಿದರು.
ಗೋಕಾಕ ಮತಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ಆರೋಗ್ಯ, ಶೈಕ್ಷಣಿಕ ಕ್ಷೇತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಕಳೆದ 4 ಬಾರಿ ಆಶೀರ್ವದಿಸಿದಂತೆ ಈ ಬಾರಿಯೂ ತಮ್ಮ ಅಮೂಲ್ಯ ಮತವನ್ನು ನೀಡಿ ಆಯ್ಕೆ ಮಾಡುವಂತೆ ರಮೇಶ ಜಾರಕಿಹೊಳಿ ಕೋರಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ರಾಮಣ್ಣ ಸುಂಬಳಿ, ತಾ.ಪಂ. ಅಧ್ಯಕ್ಷೆ ಶ್ರೀಮತಿ ಸುನಂದಾ ಕರದೇಸಾಯಿ, ಗ್ರಾ.ಪಂ. ಅಧ್ಯಕ್ಷ ಮುನ್ನಾ ಗಣಾಚಾರಿ, ಮುಖಂಡರುಗಳಾದ ಶಿವಾನಂದ ಡೋಣಿ, ಭೀಮಗೌಡ ಪೋಲೀಸಗೌಡ್ರ, ರಾಜು ತಳವಾರ, ಶಂಕರ ಭೂಸಣ್ಣವರ, ಬಸವರಾಜ ಪಟ್ಟಣ, ಅಕೀಲ ಕೊತವಾಲ, ಕರೆಪ್ಪ ಪೂಜೇರಿ, ಬೋರಪ್ಪ ತಳವಾರ, ವಿರುಪಾಕ್ಷಿ ಅಂಗಡಿ ಸೇರಿದಂತೆ ಅನೇಕರು ಇದ್ದರು.

Related posts: