RNI NO. KARKAN/2006/27779|Saturday, October 5, 2024
You are here: Home » breaking news » ಬೆಳಗಾವಿ:ಮೂರು ಸೇವಂತಿ ಹೂವು ಹಿಡಿದುಕೊಂಡೆ ನಾಮಪತ್ರ ಸಲ್ಲಿಸಿದ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷೀ ಹೆಬ್ಬಾಳಕರ

ಬೆಳಗಾವಿ:ಮೂರು ಸೇವಂತಿ ಹೂವು ಹಿಡಿದುಕೊಂಡೆ ನಾಮಪತ್ರ ಸಲ್ಲಿಸಿದ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷೀ ಹೆಬ್ಬಾಳಕರ 

ಮೂರು ಸೇವಂತಿ ಹೂವು ಹಿಡಿದುಕೊಂಡೆ ನಾಮಪತ್ರ ಸಲ್ಲಿಸಿದ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷೀ ಹೆಬ್ಬಾಳಕರ

ಬೆಳಗಾವಿ ಏ 20: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೇಸ ಪಕ್ಷದ ಹುರಿಯಾಳು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಲಕ್ಷೀ ಹೆಬ್ಬಾಳಕರ ಅವರು ಶುಭ ಶುಕ್ರವಾರದಂದು ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು

ನಾಮಪತ್ರ ಸಲ್ಲಿಸುವ ಮೊದಲೇ ಲಕ್ಷ್ಮಿ ಅವರು ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದ ಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ಈ ವೇಳೆ ದೇವಸ್ಥಾನ ಪೂಜಾರಿ ಲಕ್ಷ್ಮಿ ಅವರಿಗೆ ಆಶೀರ್ವಾದ ರೂಪದಲ್ಲಿ ಮೂರು ಸೇವಂತಿ ಹೂವು ನೀಡಿದ್ದರು. 

ಆ ಹೂವನ್ನು ಡಬ್ಬಿಯಲ್ಲೆ ಇಟ್ಟುಕೊಂಡಿದ್ದ ಲಕ್ಷ್ಮಿ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು.‌ ಡಬ್ಬಿಯಲ್ಲಿ ಏನಿದೆ ಎಂದು‌ ಮಾಧ್ಯಮದವರು ಕಿಚಾಯಿಸಿದಕ್ಕೆ ಡಬ್ಬಿಯಲ್ಲಿ ಹೂವಿದೆ ಎಂದು ತೋರಿಸಿದರು.

ಸಾಲದೆಂಬಂತೆ ಚುನಾವಣಾಧಿಕಾರಿ ಕಚೇರಿ ಒಳಗೂ ಹೂವಿದ್ದ ಡಬ್ಬಿ ತೆಗೆದುಕೊಂಡು ಹೋಗಿದ್ದು ವಿಶೇಷವಾಗಿತ್ತು.

Related posts: