RNI NO. KARKAN/2006/27779|Tuesday, January 27, 2026
You are here: Home » breaking news » ಗೋಕಾಕ:ಡಿ.4 ರಿಂದ 12 ವರೆಗೆ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸಿದ್ಧ ಸಮಾಧಿ ಯೋಗದ ತರಬೇತಿ

ಗೋಕಾಕ:ಡಿ.4 ರಿಂದ 12 ವರೆಗೆ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸಿದ್ಧ ಸಮಾಧಿ ಯೋಗದ ತರಬೇತಿ 

ಡಿ.4 ರಿಂದ 12 ವರೆಗೆ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸಿದ್ಧ ಸಮಾಧಿ ಯೋಗದ ತರಬೇತಿ

ಗೋಕಾಕ ನ 30 : ಧಾರವಾಡ ವಿಭಾಗದ ಋಷಿ ಸಂಸ್ಕಂತಿ ವಿದ್ಯಾಕೇಂದ್ರದ ಆಶ್ರಯದಲ್ಲಿ ಯೋಗ ಬ್ರಹ್ಮ ಪ್ರಭಾಕರ ಗುರೂಜಿ ಅವರ ಆಶೀರ್ವಾದದೊಂದಿಗೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸಿದ್ಧ ಸಮಾಧಿ ಯೋಗದ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಡಿ.4 ರಿಂದ 12 ದಿನಗಳವರೆಗೆ ಬೆಳಿಗ್ಗೆ 5.30 ರಿಂದ 7.30 ರವರೆಗೆ ಸಿದ್ಧ ಸಮಾಧಿ ಯೋಗ ಜರುಗಲಿದ್ದು, ಆಸಕ್ತಿಯುಳ್ಳವರು ಹನುಮಂತ ಗುರೂಜಿ 9844152912, ಗುರುಸಿದ್ಧ ಗುರೂಜಿ 9945365123 ಹಾಗೂ ಆನಂದ ಗುರೂಜಿ 9113838770 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
ಧ್ಯಾನ, ಪ್ರಾಣಾಯಾಮ, ಆಸನಗಳು, ವ್ಯಕ್ತಿತ್ವ ವಿಕಾಸ, ಆಹಾರ ಕ್ರಮ, ಕರ್ಮಯೋಗ, ಜ್ಞಾನ ಯೋಗ, ಪತಂಜಲಿ ಯೋಗಗಳನ್ನು ಸಿದ್ಧ ಸಮಾಧಿ ಯೋಗ ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ 9886400111, 9620093536, 9972445909, 9538389191, ಈ ಮೋಬೈಲ್‍ಗಳನ್ನು ಸಂಪರ್ಕಿಸುವಂತೆ ಸಿದ್ಧ ಸಮಾಧಿ ಯೋಗ(ಎಸ್‍ಎಸ್‍ವಾಯ್)ದ ಗೋಕಾಕ ಶಾಖೆಯ ಪ್ರಕಟಣೆ ತಿಳಿಸಿದೆ.
ಗುರು ವಂದನೆ : ಸಿದ್ಧ ಸಮಾಧಿ ಯೋಗದ ಪರಿಚಯ ಹಾಗೂ ಗುರುವಂದನಾ ಕಾರ್ಯಕ್ರಮವು ಸ್ಥಳೀಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ರವಿವಾರ ಡಿ.2 ರಂದು ಸಂಜೆ 5 ಗಂಟೆಗೆ ನಡೆಯಲಿದೆ. ತರಬೇತಿಯಲ್ಲಿ ಪಾಲ್ಗೊಳ್ಳಬಯಸುವವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಎನ್‍ಎಸ್‍ಎಫ್ ಅತಿಥಿ ಗೃಹದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ ಅವರು ಕೋರಿದ್ದಾರೆ.

Related posts: