ಗೋಕಾಕ:ವಿದ್ಯಾರ್ಥಿಗಳನ್ನು ರಕ್ಷಿಸುವ ಎಲ್ಲಾ ರೀತಿಯ ಸಿದ್ದತೆಗಳನ್ನು ಪರೀಕ್ಷಾ ಕೋಠಡಿಗಳಲ್ಲಿ ಮಾಡಲಾಗುತ್ತಿದ್ದೆ : ಬಿಇಓ ಬಳಗಾರ
ವಿದ್ಯಾರ್ಥಿಗಳನ್ನು ರಕ್ಷಿಸುವ ಎಲ್ಲಾ ರೀತಿಯ ಸಿದ್ದತೆಗಳನ್ನು ಪರೀಕ್ಷಾ ಕೋಠಡಿಗಳಲ್ಲಿ ಮಾಡಲಾಗುತ್ತಿದ್ದೆ : ಬಿಇಓ ಬಳಗಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 2 :
ಎಸ್.ಎಸ್.ಎಲ್. ಸಿ ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್ ನಿಂದ ರಕ್ಷಿಸುವ ಎಲ್ಲಾ ರೀತಿಯ ಸಿದ್ದತೆಗಳನ್ನು ಪರೀಕ್ಷಾ ಕೋಠಡಿಗಳಲ್ಲಿ ಮಾಡಲಾಗುತ್ತಿದ್ದೆ ಎಂದು ಶಿಕ್ಷಣಾಧಿಕಾರಿ ಜಿ.ಬಿ. ಬಳಗಾರ ಹೇಳಿದರು
ಮಂಗಳವಾರದಂದು ನಗರದ ಬಿಇಓ ಕಾರ್ಯಾಲಯದಲ್ಲಿ ಇಲ್ಲಿಯ ಜೆಸಿಐ ಸಂಸ್ಥೆಯವರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ನೀಡಿದ 1 ಸಾವಿರ ಮಾಸ್ಕಗಳನ್ನು ಸ್ವೀಕರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ದೈರ್ಯವಾಗಿ ಪರೀಕ್ಷೆಯಲ್ಲಿ ಪಾಲ್ಗೋಳುವಂತೆ ಕರೆ ನೀಡಿದ ಅವರು ಜೆಸಿಐ ಸಂಸ್ಥೆಯು ಶೈಕ್ಷಣಿಕ ಪ್ರಗತಿಗಾಗಿ ಮಾಡುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು
ಜೆಸಿಐ ಸಂಸ್ಥೆಯ ರಾಷ್ಟ್ರೀಯ ಸಂಯೋಜನಾಧಿಕಾರಿ ವಿಷ್ಣು ಲಾತೂರ ಮಾತನಾಡಿ ಜೆಸಿಐ ಸಂಸ್ಥೆ ಹಲವಾರು ವಿಶೇಷ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ವಿದ್ಯಾರ್ಥಿಗಳ ಪ್ರಗತಿಗೆ ಶ್ರಮಿಸುತ್ತಿದೆ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಬ್ಬದಂತೆ ಸಂಬ್ರಮದಿಂದ ಪಾಲ್ಗೋಳುವಂತೆ ಹೇಳಿದರು
ಈ ಸಂದರ್ಭದಲ್ಲಿ ಜೆಸಿಐ ಸಂಸ್ಥೆಯ ಅಧ್ಯಕ್ಷ ರಜನಿಕಾಂತ್ ಮಾಳೋದೆ, ಕಾರ್ಯದರ್ಶಿ ಶೇಖರ ಉಳ್ಳೇಗಡಿ , ಪದಾಧಿಕಾರಿಗಳಾದ ಎಂ.ಎಚ್.ಅತ್ತಾರ , ವಿನಾಕ್ಷೀ ಸವದಿ, ಡಾ.ಪ್ರಮೋದ ಎತ್ತಿನಮನಿ , ರಾಚಪ್ಪ ಅಮ್ಮಣಗಿ , ಸುನೀಲ ಭಗತ , ರವಿ ತಡಕೋಳ , ಪ್ರಕಾಶ ಬಿಳ್ಳೂರ , ಸಂತೋಷ ಹವಾಲ್ದಾರ ಸೇರಿದಂತೆ ಅನೇಕರು ಇದ್ದರು