ಗೋಕಾಕ:ಸಚಿವ ರಮೇಶ ಜಾರಕಿಹೊಳಿ ಅವರಿಂದ ಎಸ್‍ಟಿ ಫನಾಭವಿಗಳಿಗೆ ಟ್ರ್ಯಾಕ್ಟರ್ ವಿತರಣೆ
ಸಚಿವ ರಮೇಶ ಜಾರಕಿಹೊಳಿ ಅವರಿಂದ ಎಸ್‍ಟಿ ಫನಾಭವಿಗಳಿಗೆ ಟ್ರ್ಯಾಕ್ಟರ್ ವಿತರಣೆ
ಗೋಕಾಕ ಫೆ 5: ಕೃಷಿ ಇಲಾಖೆಯಿಂದ ಪರಿಶಿಷ್ಟ ಪಂಗಡದವರಿಗೆ ಕೃಷಿ ಯಾಂತ್ರಿಕ ಯೋಜನೆಯಡಿ ಗೋಕಾಕ ಮತಕ್ಷೇತ್ರದ ಫಲಾನುಭವಿಗಳಿಗೆ ಟ್ರ್ಯಾಕ್ಟ ರ್ ಗಳನ್ನು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ನಗರದ ತಮ್ಮ ಕಾರ್ಯಾಲಯದಲ್ಲಿ ವಿತರಿಸಿದರು.
ಗೋಕಾಕ ಮತಕ್ಷೇತ್ರದ ತವಗ ಗ್ರಾಮದ ಚಂದ್ರಪ್ಪ ಕುಮರೇಶಿ, ಖನಗಾಂವ ಗ್ರಾಮದ ಫಕೀರಪ್ಪ ಪೂಜೇರಿ ಇವರಿಗೆ ತಲಾ 2 ಲಕ್ಷ ರೂಗಳ ಸಹಾಯಧನದೊಂದಿಗೆ ಟ್ರ್ಯಾಕ್ಟ ರ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಟಿ.ಆರ್.ಕಾಗಲ,ಮಡ್ಡೆಪ್ಪ ತೋಳಿನವರ,ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎ.ಡಿ.ಸವದತ್ತಿ, ತಾಲೂಕಾ ಕೃಷಿ ಅಧಿಕಾರಿ ಎಂ.ಎಂ.ನಧಾಪ ಇದ್ದರು.