RNI NO. KARKAN/2006/27779|Friday, February 13, 2026
You are here: Home » breaking news » ಬೆಳಗಾವಿ:ನೂತನ ಡಿಸಿಪಿಯಾಗಿ ಮಹಾನಿಂಗ ನಂದಗಾವಿ ಇಂದು ಅಧಿಕಾರ ಸ್ವೀಕಾರ

ಬೆಳಗಾವಿ:ನೂತನ ಡಿಸಿಪಿಯಾಗಿ ಮಹಾನಿಂಗ ನಂದಗಾವಿ ಇಂದು ಅಧಿಕಾರ ಸ್ವೀಕಾರ 

ನೂತನ ಡಿಸಿಪಿಯಾಗಿ ಮಹಾನಿಂಗ ನಂದಗಾವಿ ಇಂದು ಅಧಿಕಾರ ಸ್ವೀಕಾರ

ಬೆಳಗಾವಿ ಜ 11: ನಗರ ಪೊಲೀಸ ಇಲಾಖೆಯ ಅಪರಾಧ ಮತ್ತು ಸಂಚಾರ ವಿಭಾಗದ ನೂತನ ಡಿಸಿಪಿ ಯಾಗಿ ಮಹಾನಿಂಗ ನಂದಗಾಂವಿ ಅವರು ಇಂದು ಅಧಿಕಾರ ಸ್ವೀಕರಿಸಲಿದ್ದಾರೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಮರನಾಥ ರೆಡ್ಡಿ ಅವರನ್ನು ರಾಜ್ಯ ಸರಕಾರ ಬೆಳಗಾವಿ ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿಯನ್ನಾಗಿ ವರ್ಗಾವಣೆ ಮಾಡಿದ ಪರಿಣಾಮ ಅವರ ಜಾಗೆಯಲಿ ಕಲಬುರಗಿ ಡಿ.ಸಿ.ಆರ್.ಇ ವಿಭಾಗದ ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಹಾನಿಂಗ ನಂದಗಾವಿ ಅವರನ್ನು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯನ್ನಾಗಿ ನೇಮಿಸಿ ವರ್ಗಾವಣೆ ಮಾಡಿ ಆದೇಶಿಸಿದೆ . ಕಾರಣಾಂತರಗಳಿಂದ ಅಧಿಕಾರ ವಹಿಸಿಕೊಳ್ಳುವುದು ವಿಳಂಬವಾಗಿದ್ದು ಜ 11 ರಂದು ಇವರು ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಪೊಲೀಸ ಮೂಲಗಳಿಂದ ತಿಳಿದು ಬಂದಿದೆ

 

 

Related posts: