RNI NO. KARKAN/2006/27779|Sunday, February 15, 2026
You are here: Home » breaking news » ಬೆಳಗಾವಿ:ಸಂಶಯಾಸ್ಪದವಾಗಿ ವ್ಯಕ್ತಿಯ ಸಾವು : ಸ್ಥಳೀಯರಿಂದ ಕೋಲೆ ಆರೋಪ

ಬೆಳಗಾವಿ:ಸಂಶಯಾಸ್ಪದವಾಗಿ ವ್ಯಕ್ತಿಯ ಸಾವು : ಸ್ಥಳೀಯರಿಂದ ಕೋಲೆ ಆರೋಪ 

ಸಂಶಯಾಸ್ಪದವಾಗಿ ವ್ಯಕ್ತಿಯ ಸಾವು : ಸ್ಥಳೀಯರಿಂದ ಕೋಲೆ ಆರೋಪ
ಬೆಳಗಾವಿ ಜ 1: ಕುಡಿದ ಅಮಲಿನಲ್ಲಿ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ನಿನ್ನೆ ರಾತ್ರಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ನಡೆದಿದೆ
ಪ್ರಭಾಕರ್ ಕುಕ್ಕಳೇಕರ್ (65) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ವ್ಯಕ್ತಿ. ಈತ ಬೆಳಗಾವಿಯ ಉದ್ಯಮ ಭಾಗದಲ್ಲಿರುವ ಖಾಸಗಿ ಇಂಡಸ್ಟ್ರಿಯಲ್‌ನಲ್ಲಿ ರಾತ್ರಿ ವಾಚಮನ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ನಿನ್ನೆ ಹೊಸ ವರ್ಷದ ಪ್ರಯುಕ್ತ ಮದ್ಯಪಾನ ಮಾಡಿದ್ದರಿಂದ ಬೆಂಕಿಗೆ ಬಿದ್ದಿರಬಹುದೆಂದು ಅನುಮಾನಿಸಲಾಗಿದೆ. 

ಆದರೆ ಸ್ಥಳೀಯರು ಮಾತ್ರ ಪ್ರಭಾಕರ್‌ನನ್ನು ಯಾರೋ ದುಷ್ಕರ್ಮಿಗಳು ಸಜೀವ ದಹನ ಮಾಡಿದ್ದಾರೆ ಎಂದು ಆರೋಪಿಸಿದ್ದು, ಆರೋಪಿಗಳ ಬಂಧನಕ್ಕೆ ಪಟ್ಟು ಹಿಡಿದಿದ್ದಾರೆ. ಬೆಳಗಾವಿ ಉದ್ಯಮಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts: