ಬೆಳಗಾವಿ:ಶೀಘ್ರದಲ್ಲೇ ನಿಜ ಶರಣ ಅಂಬಿಗೇರ ಚೌಡಯ್ಯ ನವರ ಪ್ರತಿಷ್ಠಾಪನೆ : ಸಚಿವ ಶಿವರಾಜ್ ತಂಗಡಗಿ

ಶೀಘ್ರದಲ್ಲೇ ನಿಜ ಶರಣ ಅಂಬಿಗೇರ ಚೌಡಯ್ಯ ನವರ ಪ್ರತಿಷ್ಠಾಪನೆ : ಸಚಿವ ಶಿವರಾಜ್ ತಂಗಡಗಿ
ಬೆಳಗಾವಿ ಡಿ 11 : ರಾಜ್ಯದ ಸೂಕ್ತ ಪ್ರದೇಶದಲ್ಲಿ ಸ್ಥಳ ಗುರುತಿಸಿ ನಿಜ ಶರಣ ಅಂಬಿಗೇರ ಚೌಡಯ್ಯ ನವರ ಪ್ರತಿಮೆಯನ್ನು ಆದಷ್ಟು ಬೇಗ ಸರಕಾರದ ವತಿಯಿಂದ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಿ ಹೇಳಿದರು .
ಗುರುವಾರದಂದು ಸುವರ್ಣ ವಿಧಾನ ಸೌಧದಲ್ಲಿ ವಿಧಾನ ಪರಿಷತ್ ನಲ್ಲಿ ಪರಿಷತ್ ಮುಖ್ಯಸಚ್ಚೇತಕ ರವಿಕುಮಾರ್, ಕೇಶವ್ , ತಿಪ್ಪನಪ್ಪ ಕಮೂನೂರ, ಕೇಶವ್ , ಶಾಬ್ಬನ್ನ , ಶಿವುಕುರಮಾರ,ಶ್ರೀನಿವಾಸ, ಎನ್.ನಾಗರಾಜ್ ಸೇರಿದಂತೆ ಅನೇಕರು ಈ ಬಗ್ಗೆ ಗಮನ ಸೆಳೆದರ ಬಗ್ಗೆ ಉತ್ತರಿಸಿ ಅವರು ಮಾತನಾಡಿದರು
ಸರಕಾರವೇ ಸೂಕ್ತ ಜಾಗವನ್ನು ಹೂಡುಕಿ ಪ್ರತಿಷ್ಠಾಪನೆ ಮಾಡುತ್ತೇವೆ.ಜಾಗ ಹೂಡುಕಿದ ನಂತರ ಮೂರ್ತಿ ಮಾಡಲು ಆದೇಶ ನೀಡುತ್ತೇವೆ. ಆದಷ್ಟು ಬೇಗ ನಿಜ ಶರಣ ಅಂಬಿಗೇರ ಚೌಡಯ್ಯ ನವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತೇವೆ. ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಡಿಪಿಆರ್ ಮಾಡಲು ಸ್ವಲ್ಪ ಸಮಯ ಕೊಡಿ ಎಂದು ಸದನದಲ್ಲಿ ಹೇಳಿದರು. ಇದಕ್ಕೆ ಪ್ರತಿಪಕ್ಷದ ಎಲ್ಲಾ ಸದಸ್ಯರು ಆಪೇಕ್ಷ ವ್ಯಕ್ತಪಡಿಸಿ ಸದನದಲ್ಲಿ ಗದ್ದಲ ಮಾಡಿ ಯಾವಾಗ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರಿ ಸದನದಲ್ಲಿ ಹೇಳಿ ಎಂದು ಆಗ್ರಹಿಸಿದರು.
ಬಹಳ ದಿನಗಳಿಂದ ನಿಜ ಶರಣರ ಪ್ರತಿಮೆ ಮಾಡುವ ಬೇಡಿಕೆ ಇದೆ. ಎಲ್ಲಿ ಗೌರಬರುತ್ತದೆ ಎಂಬುದನ್ನು ಗಮನಿಸಿ ಅಂಬಿಗೇರ ಚೌಡಯ್ಯ ನವರ ಪ್ರತಿಮೆಯನ್ನು ಸ್ಥಾಪಿಸುತ್ತೇವೆ ಎಂದು ಸದನಕ್ಕೆ ಭರವಸೆ ನೀಡಿದರು.
