ಘಟಪ್ರಭಾ:ದಿ.2ರಂದು ಶ್ರೀ ಅಂಬಾಭವಾನಿ ದೇವಿಯ ಕುಂಕುಮಾರ್ಚನೆ ಹಾಗೂ ಪ್ರಸನ್ನ ಪೂಜೆ ಕಾರ್ಯಕ್ರಮ
ದಿ.2ರಂದು ಶ್ರೀ ಅಂಬಾಭವಾನಿ ದೇವಿಯ ಕುಂಕುಮಾರ್ಚನೆ ಹಾಗೂ ಪ್ರಸನ್ನ ಪೂಜೆ ಕಾರ್ಯಕ್ರಮ
ಘಟಪ್ರಭಾ ಡಿ 31: ಸಮೀಪದ ಶಿಂದಿಕುರಬೇಟ ಗ್ರಾಮದ ದೇಸಾಯಿ ವಾಡೆ ಆವರಣದಲ್ಲಿ ಶ್ರೀ ಅಂಬಾಭವಾನಿ ದೇವಿಯ ಕುಂಕುಮಾರ್ಚನೆ ಹಾಗೂ ಪ್ರಸನ್ನ ಪೂಜೆ ಕಾರ್ಯಕ್ರಮವು ದಿ.2ರಂದು ಜರುಗಲಿದೆ.
ಬನದ ಹುಣ್ಣಿಮೆ ಪ್ರಯುಕ್ತ ನಡೆಯುವ ಶ್ರೀ ದೇವಿಯ ಸಹಸ್ರ ನಾಮಾವಳಿ ಕುಂಕುಮಾರ್ಚನೆಯ ಹಾಗೂ ಪ್ರಸನ್ನ ಪೂಜಾ ಕಾರ್ಯಕ್ರಮವು ವೇದಾಚಾರ್ಯ ವಾಮನ ಗುಡಿ ಹಾಗೂ ವಡೇರಹಟ್ಟಿಯ ಶ್ರೀ ಅಂಬಾದರ್ಶನ ಪೀಠದ ಪೀಠಾಧ್ಯಕ್ಷರಾದ ನಾರಾಯಣ ಶರಣರ ಸಾನಿಧ್ಯದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಅಂಬಾಭವಾನಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಮಾರುತಿ ಜಾಧವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.