RNI NO. KARKAN/2006/27779|Sunday, May 10, 2026
You are here: Home » breaking news » ಗೋಕಾಕ:ಎಲ್ಲ ದಾನಗಳಿಗಿಂತ ಶ್ರೇಷ್ಠವಾದ ದಾನ ಅನ್ನದಾನ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ:ಎಲ್ಲ ದಾನಗಳಿಗಿಂತ ಶ್ರೇಷ್ಠವಾದ ದಾನ ಅನ್ನದಾನ : ಶಾಸಕ ಬಾಲಚಂದ್ರ ಜಾರಕಿಹೊಳಿ 

ಎಲ್ಲ ದಾನಗಳಿಗಿಂತ ಶ್ರೇಷ್ಠವಾದ ದಾನ ಅನ್ನದಾನ   : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ ಡಿ 30 : ಎಲ್ಲ ದಾನಗಳಿಗಿಂತ ಅನ್ನದಾನ ಶ್ರೇಷ್ಠವಾಗಿದ್ದು ಇದನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಅವರು ಶುಕ್ರವಾರದಂದು ನಗರದ ಎಪಿಎಂಸಿಯಲ್ಲಿರುವ ಶ್ರೀ ಕರೆಮ್ಮಾದೇವಿ ಕಾರ್ತಿಕೋತ್ಸವ ನಿಮಿತ್ಯ ಜರುಗಿದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಕರೆಮ್ಮಾದೇವಿ ಕಾರ್ತಿಕೋತ್ಸವ ಸಮಿತಿಯಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು.

ಸಮಿತಿಯ ರಾಮಸಿದ್ದ ಖಾನಪ್ಪನವರ, ಕಲ್ಲಪ್ಪ ರಂಕನಕೊಪ್ಪ, ಕಾಡೇಶ ಹೂಲಿಕಟ್ಟಿ, ವಿನಾಯಕ ಸಾಳುಂಕೆ, ಲಕ್ಷ್ಮಣ ಹುಳ್ಳಿ, ತಿಪ್ಪಣ್ಣಾ ಕರಿಗಾರ, ಪ್ರಶಾಂತ ಗೋಕಾವಿ, ಹಣಮಂತ ಕೊಡ್ಯ್ಲಾಳ, ಶಂಕರ ಮುರ್ಕಿಭಾಂವಿ, ನಾಗೇಶ ಗಚ್ಚಿ, ರಮೇಶ ಖಾನಪ್ಪನವರ ಸೇರಿದಂತೆ ಇತರರು ಇದ್ದರು.

Related posts: