RNI NO. KARKAN/2006/27779|Friday, May 9, 2025
You are here: Home » breaking news » ಗೋಕಾಕ:ವೃಕ್ಷಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ಧಾರಿಯಾಗಬೇಕು : ಮುರುಘರಾಜೇಂದ್ರ ಶ್ರೀ

ಗೋಕಾಕ:ವೃಕ್ಷಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ಧಾರಿಯಾಗಬೇಕು : ಮುರುಘರಾಜೇಂದ್ರ ಶ್ರೀ 

ವೃಕ್ಷಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ಧಾರಿಯಾಗಬೇಕು : ಮುರುಘರಾಜೇಂದ್ರ ಶ್ರೀ

ಗೋಕಾಕ ಡಿ 28 : ವೃಕ್ಷಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ಧಾರಿಯಾಗಬೇಕೆಂದು ನಗರದ ಶೂನ್ಯ ಸಂಪಾದನಾಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ಗುರುವಾರದಂದು ಕರ್ನಾಟಕ ರಕ್ಷಣಾ ವೇದಿಕೆ ನಗರದÀ ಹೊರವಲಯ ಮೆಹದಿ ನಗರದಲ್ಲಿ ಹಮ್ಮಿಕೊಂಡಿದ್ದ ಸಸಿಗಳಿಗೆ ನೀರರೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿ ವರ್ಷ ರಾಜ್ಯಾದ್ಯಂತ, ಜಿಲ್ಲೆಯಾದ್ಯಂತ ಸಾರ್ವಜನಿಕರು ಸೇರಿ ವಿವಿಧ ಕಾರ್ಯಕಮಗಳ ಅಡಿಯಲ್ಲಿ ಸಾಕಷ್ಟು ಸಸಿಗಳನ್ನು ನೆಟ್ಟಿರುತ್ತಾರೆ. ಆದರೆ ತದನಂತರ ಭಾಗಶಃ ಜನರು ಅದರ ಪಾಲನೆ ಪೋಷಣೆಯನ್ನು ಅರಣ್ಯ ಇಲಾಖೆಯವರಿಗೆ ಬಿಟ್ಟು ಕೈತೊಳೆಯುವದನ್ನು ಗಮನಿಸುತ್ತೇವೆ. ಆದರೆ ಕಳೆದ ಅಗಸ್ಟ್‍ನಲ್ಲಿ ಒಂದೇ ದಿನ ತಾಲೂಕಿನಾದ್ಯಂತ ಏಕಕಾಲಕ್ಕೆ 25ಸಾವಿರ ಸಸಿಗಳನ್ನು ನೆಟ್ಟು ಈಗ ಅವುಗಳ ಪಾಲನೆ ಪೋಷಣೆಗೆ ಮುಂದಾಗಿರುವ ಕರವೇ ಅವುಗಳಿಗೆ ನೀರೆರುವ ಕಾಯಕ ಮಾಡುತ್ತಿರುವುದು ಶ್ಲಾಘನೀಯ. ಸಸಿಗಳ ಪಾಲನೆ ಪೋಷಣೆ ಮಾಡಿ ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತರಾಗಬೇಕಾಗಿದೆ. ಆ ದಿಸೆಯಲ್ಲಿ ಇಂತಹ ಪೂರಕ ಕಾರ್ಯಕ್ರಮಗಳು ನಡೆಯಬೇಕಾಗಿದೆ. ಪರಿಸರ ಜಾಗೃತಿಯು ಒಬ್ಬ ವ್ಯಕ್ತಿಯ ಅಥವಾ ಸಂಘದ ಕಾರ್ಯವಾಗದೆ ಪ್ರತಿಯೊಬ್ಬ ಪ್ರಜೆಯ ಜವಾಬ್ಧಾರವಾದಾಗ ಮಾತ್ರ ಮನುಕುಲ ಉಳಿಯಲು ಸಾಧ್ಯ. ಆ ದಾರಿಯಲ್ಲಿ ಪ್ರತಿಯೊಬ್ಬರು ಸಾಗಬೇಕೆಂದು ಶ್ರೀಗಳು ಹೇಳಿದರು.
ಕರವೇ ತಾಲೂಕಾಧ್ಯಕ್ಷರು ಬಸವರಾಜ ಖಾನಪ್ಪನವರ ಮಾತನಾಡಿ ಕನ್ನಡ, ನೆಲ, ಜಲ ಭಾಷೆಯ ರಕ್ಷಣೆಯ ಜೊತೆಗೆ ಪರಿಸರದ ಸಂರಕ್ಷಣೆ ಮಾಡಲು ಪ್ರತಿಯೊಬ್ಬ ಕನ್ನಡಿಗ ಮುಂದಾಗಬೇಕಾಗಿದೆ. ಇದರ ಪ್ರಥಮ ಪ್ರಯತ್ನವಾಗಿ ಕರವೇ 25ಸಾವಿರ ಸಸಿಗಳ ಸಂರಕ್ಷಣೆ ಪಣ ತೊಟ್ಟಿದೆ. ಬರುವ ದಿನಗಳಲ್ಲಿ ತಾಲೂಕಿನಾದ್ಯಂತ ನೆಟ್ಟಿರುವ ಸಸಿಗಳ ಉಳುವಿಗಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಖಾನಪ್ಪನವರ ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಬಸವರಾಜ ಕಪರಟ್ಟಿ, ಸಾಧಿಕ ಹಲ್ಯಾಳ, ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ಅಡಿವೇಶ ಗವಿಮಠ ವನಪಾಲಕ ಇಂಗಳಗಿ ಅರಣ್ಯ ರಕ್ಷಕ ಸತೀಶ ಮುಂಗರವಾಡಿ, ರಮೇಶ ಕಮತಿ, ಮಲ್ಲು ಸಂಪಗಾರ, ಮಹಾದೇವ ಮಕ್ಕಳಗೇರಿ, ಬಸು ಗಾಡಿವಡ್ಡರ, ಶಾನೂಲ ದೇಸಾಯಿ, ರಾಮ ಕುಡ್ಡೆಮ್ಮಿ, ಕಿರಣ ಶೀಳನವರ, ದುಂಡಪ್ಪ ಮೆಳವಂಕಿ, ಜಗದೀಶ ತಳವಾರ, ಮಂಜು ಕಂಬಾರ, ಯಶವಂತ ಜಾನಪ್ಪನವರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Related posts: