RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಬೇಯಿಸಿದ ಆಹಾರದ ಪ್ಯಾಕೆಟ್ ಗಳನ್ನು ಹಂಚಿಕೆ ಮಾಡುವುದನ್ನು ನಿರ್ಬಂಧಿಸಲಾಗಿದೆ : ಪ್ರಕಾಶ ಹೋಳೆಪ್ಪಗೋಳ

ಗೋಕಾಕ:ಬೇಯಿಸಿದ ಆಹಾರದ ಪ್ಯಾಕೆಟ್ ಗಳನ್ನು ಹಂಚಿಕೆ ಮಾಡುವುದನ್ನು ನಿರ್ಬಂಧಿಸಲಾಗಿದೆ : ಪ್ರಕಾಶ ಹೋಳೆಪ್ಪಗೋಳ 

ಬೇಯಿಸಿದ ಆಹಾರದ ಪ್ಯಾಕೆಟ್ ಗಳನ್ನು ಹಂಚಿಕೆ ಮಾಡುವುದನ್ನು ನಿರ್ಬಂಧಿಸಲಾಗಿದೆ : ಪ್ರಕಾಶ ಹೋಳೆಪ್ಪಗೋಳ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 23 :

 

 

 
ಕೊರೋನಾ ವೈರಸ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು , ಅದರ ಅಂಗವಾಗಿ ಸಾರ್ವಜನಿಕರು ಹಾಗೂ ಸಾಮಾಜಿಕ ಸಂಘಟನೆಗಳು, ವಲಸೆ ಕಾರ್ಮಿಕರಿಗೆ, ವಸತಿ ರಹಿತರಿಗೆ ಹಾಗೂ ನಿರ್ಗತಿಕರಿಗೆ ಬೇಯಿಸಿದ ರೆಡಿ ಆಹಾರದ ಪ್ಯಾಕೆಟ್ ಗಳನ್ನು ಹಂಚಿಕೆ ಮಾಡುವುದನ್ನು ನಿರ್ಬಂಧಿಸಲಾಗಿದೆ.
ಆಹಾರದ ಪ್ಯಾಕೆಟ್ ಗಳನ್ನು ತಯಾರಿಸಿ ಹಂಚುವ ಪ್ರಕ್ರಿಯೆಯಲ್ಲಿ ಅನೇಕ ಜನರ ಸಂಪರ್ಕ್ ಬರುವುದರಿಂದ ಮತ್ತು ಸೋಂಕಿತ ವ್ಯಕ್ತಿಗಳು ಸಂಪರ್ಕಕ್ಕೆ ಬಂದಲ್ಲಿ , ಸೋಂಕು ಹರಡುವ ಸಾಧ್ಯತೆ ಇದ್ದು, ಬೇರೆ ಕಡೆ ಈಗಾಗಲೇ ಈ ತರಹದ ಪ್ರಕರಣಗಳು ವರದಿಯಾಗಿರುತ್ತವೆ.
ಆದ್ದರಿಂದ ತಯಾರಿಸಿದ ಆಹಾರದ ಪ್ಯಾಕೆಟ್ ಗಳ ಬದಲಾಗಿ ದಿನಸಿ, ರೇಷನ್ ಹಾಗೂ ಇತರೆ ಸಾಮಾನುಗಳನ್ನು ಮಾತ್ರ ಹಂಚಿಕೆ ಮಾಡಲು ಮತ್ತು ತಾಲೂಕು ಆಡಳಿತದ ಗಮನಕ್ಕೆ ತಂದು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಹಂಚಿಕೆ ಮಾಡಬೇಕು ಎಂದು ತಹಶೀಲ್ದಾರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ .

Related posts: