RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಪ್ರವಾಸ

ಗೋಕಾಕ:ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಪ್ರವಾಸ 

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಪ್ರವಾಸ

ಗೋಕಾಕ ಡಿ 1 : ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಡಿಸೆಂಬರ್ 2 ರಿಂದ 5 ವರೆಗೆ ಬಳ್ಳಾರಿ, ಕೊಪ್ಪಳ, ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ದಿ. 2 ರಂದು ಮಧ್ಯಾಹ್ನ 12ಕ್ಕೆ ಬಳ್ಳಾರಿಯ ಪ್ರವಾಸಿ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರ ಭೇಟಿ, ಮಧ್ಯಾಹ್ನ 3 ಗಂಟೆಗೆ ಹೊಸಪೇಟಿಯ ಪ್ರವಾಸಿ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರ ಭೇಟಿ, ಸಂಜೆ 5ಕ್ಕೆ ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರ ಭೇಟಿ, ರಾತ್ರಿ 9 ಕ್ಕೆ ಗೋಕಾಕದಲ್ಲಿ ವಾಸ್ತವ್ಯ ಮಾಡುವರು.
ದಿ.3ರಂದು ಗೋಕಾಕ ವಿಧಾನ ಸಭಾ ಮತಕ್ಷೇತ್ರದಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು, ಸಾರ್ವಜನಿಕರ ಭೇಟಿ, ಗೋಕಾಕದಲ್ಲಿಯೇ ವಾಸ್ತವ್ಯ.
ದಿ 4ರಂದು ಮುಂಜಾನೆ 11 ಗಂಟೆಗೆ ಬೆಳಗಾವಿಯ ಕೆಪಿಟಿಸಿಎಲ್ ಸಮುದಾಯ ಭವನ ರಸ್ತೆಯಲ್ಲಿ ಬೆಳಗಾವಿ ಸ್ಮಾರ್ಟ್ ಸಿಟಿ, ಸ್ಮಾರ್ಟ್ ರಸ್ತೆಯ ಪೂಜಾ ಸಮಾರಂಭದಲ್ಲಿ ಭಾಗವಹಿಸುವರು. ರಾತ್ರಿ ಗೋಕಾಕದಲ್ಲಿ ವಾಸ್ತವ್ಯ ಮಾಡುವರು.
ದಿ.5ರಂದು ಗೋಕಾಕ ವಿಧಾನ ಸಭಾ ಮತಕ್ಷೇತ್ರದಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು, ಸಾರ್ವಜನಿಕರ ಭೇಟಿ ಮಾಡುವರು. ಸಂಜೆ 4 ಗಂಟೆಗೆ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: