ಗೋಕಾಕ:ಕ್ವಾರಂಟೈನ ನಿಯಮ ಉಲ್ಲಂಘನೆ : ಕೊರೋನಾ ಸೋಂಕಿತನ ವಿರುದ್ಧ ಪ್ರಕರಣ ದಾಖಲು
ಕ್ವಾರಂಟೈನ ನಿಯಮ ಉಲ್ಲಂಘನೆ : ಕೊರೋನಾ ಸೋಂಕಿತನ ವಿರುದ್ಧ ಪ್ರಕರಣ ದಾಖಲು
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 3 :
ಕೋವಿಡ್ – 19 ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಕೊರೋನಾ ಸೋಂಕು ತಗುಲಿದ ಶಿಲ್ತಿಬಾಂವಿ ಯುವಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
ದೆಹಲಿಯಿಂದ ಗೋಕಾಕ್ಕೆ ಬಂದಿದೆ ಆರೋಪಿಯನ್ನು ಕ್ವಾರಂಟೈನ ಮಾಡಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸ ಕೊಟ್ಟು ವರದಿ ಬರುವವರೆಗೆ ಹೋಮ ಕ್ವಾರಂಟೈನ ನಲ್ಲಿ ಇರುವಂತೆ ಸೂಚಿಸಲಾಗಿತ್ತು ಆದರೆ ಶಿಲ್ತಿಬಾಂವಿ ಗ್ರಾಮದ ಕೊರೋನಾ ಸೋಂಕಿತ ವ್ಯಕ್ತಿಯು ಕ್ವಾರಂಟೈನ ನಿಯಮವನ್ನು ಗಾಳಿಗೆ ತೂರಿ ಖನಗಾಂವ , ಹೂಲಿಕಟ್ಟಿ ಗ್ರಾಮದಲ್ಲಿ ತಿರುಗಾಡಿ , ಮದುವೆ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡು ಸಮಾಜದಲ್ಲಿ ರೋಗ ಹರಡಲು ಕಾರಣೀಕರ್ತರಾಗಿದ್ದಾನೆಂದು ಶಿಲ್ತಿಬಾಂವಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಭೀಮಪ್ಪ ಮಾಲದಿನ್ನಿ ಅವರು ನೀಡಿದ ದೂರಿನ್ವಯ ಗೋಕಾಕ ಗ್ರಾಮೀಣ ಪೊಲೀಸರು ಕೊರೋನಾ ಸೋಂಕಿತ ಯುವಕನ ವಿರುದ್ಧ ಐಪಿಸಿ ಕಲ್ಲಂ 188, 202, 269, 270 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ